ದೇವಿ ಮಂದಿರದಲ್ಲಿ ಮಹಿಳಾ ಭಕ್ತರ ಮೇಲೆ ಚಪ್ಪಲಿ, ಬೆಲ್ಟ್‌ಗಳಿಂದ ಹಲ್ಲೆ; ಕಾರಣವೇನು? VIDEO

author-image
admin
Updated On
ದೇವಿ ಮಂದಿರದಲ್ಲಿ ಮಹಿಳಾ ಭಕ್ತರ ಮೇಲೆ ಚಪ್ಪಲಿ, ಬೆಲ್ಟ್‌ಗಳಿಂದ ಹಲ್ಲೆ; ಕಾರಣವೇನು? VIDEO
Advertisment
  • ಚಂದ್ರಿಕಾ ದೇವಿ ಮಂದಿರಕ್ಕೆ ಬಂದಿದ್ದ ಭಕ್ತಾದಿಗಳ ಮೇಲೆ ಹಲ್ಲೆ!
  • ಸಿಸಿಟಿವಿ ದೃಶ್ಯವನ್ನು ಆಧರಿಸಿ ಕೇಸ್ ದಾಖಲಿಸಿದ ಪೊಲೀಸರು
  • ಬೆಲ್ಟ್‌ ಮತ್ತು ಚಪ್ಪಲಿಯಿಂದ ಮಹಿಳಾ ಭಕ್ತರ ಮೇಲೆ ಭೀಕರ ದಾಳಿ

ಯಾವುದೇ ದೇವಸ್ಥಾನಕ್ಕೆ ಹೋದರೆ ಭಕ್ತರು ಪ್ರಸಾದವನ್ನು ಖರೀದಿ ಮಾಡಲೇಬೇಕು ಅನ್ನೋ ನಿಯಮ ಇಲ್ಲ. ಆದರೆ ಲಕ್ನೋದ ಚಂದ್ರಿಕಾ ದೇವಿ ಮಂದಿರಕ್ಕೆ ಬಂದಿದ್ದ ಭಕ್ತಾದಿಗಳ ಮೇಲೆ ಅಮಾನವೀಯ ಹಲ್ಲೆ ನಡೆದಿದೆ. ಭಕ್ತರ ಮೇಲೆ ದೇವಾಲಯದ ವ್ಯಾಪಾರಿಗಳು ಹಿಗ್ಗಾಮುಗ್ಗ ಹಲ್ಲೆ ಮಾಡಿದ್ದಾರೆ.

ತಮ್ಮ ಅಂಗಡಿಗಳಲ್ಲಿ ಪ್ರಸಾದ ಖರೀದಿ ಮಾಡಲಿಲ್ಲ ಎಂದು ಭಕ್ತರ ಮೇಲೆ ವ್ಯಾಪಾರಿಗಳು ಗೂಂಡಾಗಿರಿ ಮೆರೆದಿದ್ದಾರೆ. ಭಕ್ತರು ಹಾಗೂ ವ್ಯಾಪಾರಿಗಳು ಕೈ, ಕೈ ಮಿಲಾಯಿಸಿ ಕ್ಷಣ ಮಾತ್ರಕ್ಕೆ ರಣಾಂಗಣವೇ ಸೃಷ್ಟಿಯಾಗಿದೆ.

publive-image

ಲಕ್ನೋದ ಚಂದ್ರಿಕಾ ದೇವಿ ದೇವಸ್ಥಾನಕ್ಕೆ ಭಕ್ತರು ಭೇಟಿ ನೀಡಿದ್ದರು. ಈ ವೇಳೆ ವ್ಯಾಪಾರಿಗಳು ಪ್ರಸಾದ ಖರೀದಿ ಮಾಡಲು ಒತ್ತಾಯಿಸಿದ್ದಾರೆ. ವ್ಯಾಪಾರಿಗಳ ಒತ್ತಡಕ್ಕೆ ಮಣಿಯದ ಭಕ್ತರು ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗಲಾಟೆಯಾಗಿದ್ದು, ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ಪವನ್ ಕಲ್ಯಾಣ್ ಕಿರಿಯ ಮಗನಿಗೆ ಗಾಯ.. ಸಿಂಗಪೂರ್​ಗೆ ಆಂಧ್ರ ಡಿಸಿಎಂ ದಿಢೀರ್​ ಪ್ರಯಾಣ 

ವಿಡಿಯೋದಲ್ಲಿ 4-5 ಮಂದಿ ವ್ಯಾಪಾರಿಗಳು ಬೆಲ್ಟ್‌ ಮತ್ತು ಚಪ್ಪಲಿಯಿಂದ ಭಕ್ತರ ಮೇಲೆ ದಾಳಿ ಮಾಡಿದ್ದಾರೆ. ಮಹಿಳಾ ಭಕ್ತರ ಮೇಲೆ ನಡೆದಿರುವ ಈ ಹಲ್ಲೆ ವಿಡಿಯೋಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಹಲ್ಲೆ ಮಾಡಿದ ವಿಡಿಯೋ ಹಾಗೂ ಸಿಸಿಟಿವಿ ದೃಶ್ಯವನ್ನು ಆಧರಿಸಿ ಕೇಸ್ ದಾಖಲಿಸಲಾಗಿದೆ. ವಿಡಿಯೋದ ಸುಳಿವು ಆಧರಿಸಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.


">April 7, 2025

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment