Advertisment

VIDEO: 14 ವರ್ಷದ ಹಿಂದಿನ ಸಹಾಯ.. ತರಕಾರಿ ವ್ಯಾಪಾರಿ ಹುಡುಕಿ ಬಂದ DYSP; ಮನ ಮಿಡಿದ ಸ್ಟೋರಿ ಇದು!

author-image
admin
Updated On
VIDEO: 14 ವರ್ಷದ ಹಿಂದಿನ ಸಹಾಯ.. ತರಕಾರಿ ವ್ಯಾಪಾರಿ ಹುಡುಕಿ ಬಂದ DYSP; ಮನ ಮಿಡಿದ ಸ್ಟೋರಿ ಇದು!
Advertisment
  • ನನ್ನನ್ನು ಗುರುತು ಹಿಡಿದೆಯಾ ಎಂದು ನಗುತ್ತಾ ಕೇಳಿದ ಡಿವೈಎಸ್‌ಪಿ
  • ಅಂಗಡಿ ಮುಂದೆ ಪೊಲೀಸ್ ಜೀಪ್ ಬಂದು ನಿಂತಾಗ ಭಯ, ಆತಂಕ
  • ಇವರಿಬ್ಬರ ಭೇಟಿಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್!

ಒಳ್ಳೆಯ ಕೆಲಸ ಮಾಡಿದರೆ ಅದರ ಫಲ ಇವತ್ತಲ್ಲ ನಾಳೆ ಸಿಕ್ಕೇ ಸಿಗುತ್ತೆ. ಇದಕ್ಕೆ ಸಾಕ್ಷಿಯಾಗಿದೆ ಈ ಡಿವೈಎಸ್‌ಪಿಯ ಮನ ಮಿಡಿಯುವ ಕಥೆ. ಇಲ್ಲೊಬ್ಬ ಡಿವೈಎಸ್​ಪಿ ಒಬ್ಬರು ಕಾಲೇಜು ವಿದ್ಯಾರ್ಥಿಯಾಗಿದ್ದಾಗ ನೆರವು ನೀಡಿದ್ದ ವ್ಯಾಪಾರಿಯನ್ನು ಸ್ಮರಿಸಿ ಹುಡುಕಿಕೊಂಡು ಹೋಗಿ ಭೇಟಿಯಾಗಿ ಉಡುಗೊರೆ ನೀಡಿದ್ದಾರೆ.

Advertisment

ಇದನ್ನೂ ಓದಿ: ಒಂದು ಸಾವಿರ ಉದ್ಯೋಗಗಳಿಗೆ ಅರ್ಜಿ ಆಹ್ವಾನ.. ತಕ್ಷಣವೇ ಅಪ್ಲೇ ಮಾಡಿ! 

ಮಧ್ಯಪ್ರದೇಶದ ಭೋಪಾಲ್​​ನಲ್ಲಿ ಎಂದಿನಂತೆ ತರಕಾರಿ ಮಾರುತ್ತಿದ್ದ ವ್ಯಾಪಾರಿ ಸಲ್ಮಾನ್​ ಖಾನ್ ಬಳಿ ಪೊಲೀಸ್ ವಾಹನವೊಂದು ಬಂದು ನಿಂತಾಗ ಭಯ, ಆತಂಕವಾಗಿದೆ. ಕೆಲ ಕ್ಷಣಗಳಲ್ಲಿ ಆ ವಾಹನದಿಂದ ಇಳಿದ ಅಧಿಕಾರಿ ತನ್ನ ಹೆಸರನ್ನು ಕರೆಯುತ್ತಿರುವುದನ್ನು ನೋಡಿ ಗಾಬರಿಗೊಂಡಿದ್ದಾನೆ. ಭಯದಿಂದಲೇ ಪೊಲೀಸ್ ಅಧಿಕಾರಿಗೆ ನಮಸ್ಕರಿಸಿದ ಸಲ್ಮಾನ್​ ಖಾನ್​ಗೆ ‘ನನ್ನನ್ನು ಗುರುತು ಹಿಡಿದೆಯಾ’ ಎಂದು ನಗುತ್ತಾ ಆ ಅಧಿಕಾರಿ ಕೇಳಿದ್ದಾರೆ. ಅದಕ್ಕೆ ಖಾನ್ ‘ನನಗೆ ನೆನಪಿದೆ ಸರ್. ನೀವು ತರಕಾರಿ ಕೊಳ್ಳಲು ಬರುತ್ತಿದ್ದೀರಿ‘ ಎಂದಿದ್ದಾರೆ.

publive-image

ಪೊಲೀಸ್ ವಾಹನದಿಂದ ಇಳಿದಿದ್ದು ಬೇರೆ ಯಾರೂ ಅಲ್ಲ. ಡಿವೈಎಸ್​ಪಿ ಸಂತೋಷ್ ಪಟೇಲ್. ಸದ್ಯ ಗ್ವಾಲಿಯರ್​​ನ ಬೆಹತ್ ವಿಭಾಗದಲ್ಲಿ ಡಿವೈಎಸ್​ಪಿ ಆಗಿರುವ ಸಂತೋಷ್ ಪಟೇಲ್ 14 ವರ್ಷಗಳ ಹಿಂದಿನ ಘಟನೆ ಸ್ಮರಿಸಿದ್ದಾರೆ. 2009-10ರಲ್ಲಿ ಬಡತನದ ನಡುವೆಯೂ ಮಧ್ಯಪ್ರದೇಶದ ಭೋಪಾಲ್​ನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ ಸಂತೋಷ್​ ಪಟೇಲ್ ಜೊತೆ ಜೊತೆಗೆ ಮಧ್ಯಪ್ರದೇಶ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆಗೂ ತಯಾರಿ ನಡೆಸಿದ್ದರು. ಆ ದಿನಗಳಲ್ಲಿ ಒಂದು ಹೊತ್ತಿನ ಊಟಕ್ಕೂ ಸಂತೋಷ್ ಪಟೇಲ್ ಪರದಾಡುತ್ತಿದ್ದರಂತೆ. ಆಗ ತರಕಾರಿ ಮಾರಾಟಗಾರ ಸಲ್ಮಾನ್ ಖಾನ್ ನಿತ್ಯವೂ ಸಂತೋಷ್ ಪಟೇಲ್​ಗೆ ಉಚಿತವಾಗಿ ತರಕಾರಿ ನೀಡುತ್ತಿದ್ದರಂತೆ.
ಇಂಜಿನಿಯರಿಂಗ್ ಮುಗಿಸಿದ ಬಳಿಕವೂ ಸಂತೋಷ್ ಪಟೇಲ್​ಗೆ ಕೆಲಸ ಸಿಕ್ಕಿರಲಿಲ್ಲ. ತನ್ನ ಹಳ್ಳಿಗೆ ಹಿಂತಿರುಗಿ ಅರಣ್ಯ ಸಿಬ್ಬಂದಿಯಾಗಿ ತಾತ್ಕಾಲಿಕ ಕೆಲಸಕ್ಕೆ ಸೇರಿಕೊಂಡರು. ಆ ಬಳಿಕ 2017ರಲ್ಲಿ ಮಧ್ಯಪ್ರದೇಶ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಡಿವೈಎಸ್ಪಿ ಹುದ್ದೆ ಅಲಂಕರಿಸಿದ್ದರು.

publive-image

ಆದರೂ ಅವರಿಗೆ ತನ್ನ ಕಷ್ಟ ಕಾಲಕ್ಕೆ ಸಹಾಯ ಮಾಡಿದ್ದ ಸಲ್ಮಾನ್ ಖಾನ್ ನೆನಪು ಕಾಡುತ್ತಿತ್ತು. ಆದರೆ ಭೇಟಿಯಾಗಲು ಆಗಿರಲಿಲ್ಲ. ಇತ್ತೀಚೆಗೆ ಕೆಲಸದ ನಿಮಿತ್ತ ಭೋಪಾಲ್​ಗೆ ಬಂದಾಗ ಹಳೆಯ ನೆನಪು ಮೆಲುಕು ಹಾಕಲು ತಾವು ಓದುತ್ತಿದ್ದ ಇಂಜಿನಿಯರಿಂಗ್ ಕಾಲೇಜಿಗೆ ಹೋಗಿದ್ದಾರೆ. ಬಳಿಕ ಅಪ್ಸರಾ ಟಾಕೀಸ್ ಪ್ರದೇಶಕ್ಕೆ ಹೋಗಿ ಸಲ್ಮಾನ್​ ಖಾನ್​ರನ್ನು ಹುಡುಕಿದ್ದಾರೆ. ತರಕಾರಿ ಮಾರುತ್ತಿದ್ದ ವ್ಯಕ್ತಿಯ ತುಟಿಯ ಮೇಲೆ ಕತ್ತರಿಸಿದ ಗುರುತಿನಿಂದ ಅವರನ್ನು ಗುರುತು ಹಿಡಿದಿದ್ದಾರೆ. ಸ್ನೇಹಿತನನ್ನು ನೋಡಿದ ಬಳಿಕ ತಬ್ಬಿಕೊಂಡು ಆತ ಮಾಡಿದ ಸಹಾಯ ಸ್ಮರಿಸಿದ್ದಾರೆ ಸಂತೋಷ್ ಪಟೇಲ್.

Advertisment

ಇದನ್ನೂ ಓದಿ: ‘ಮೋದಿಯೇ ಸ್ಫೂರ್ತಿ, ನಾವು ವಾರಕ್ಕೆ 70 ಗಂಟೆ ಕೆಲಸ ಮಾಡಲೇಬೇಕು’- ಇನ್ಫೋಸಿಸ್ ನಾರಾಯಣ ಮೂರ್ತಿ 

‘120 ಜನರ ನನ್ನ ಕುಟುಂಬದಲ್ಲಿ ನಾನೊಬ್ಬನೇ ಮೊದಲ ಪದವೀಧರ. ಕುಟುಂಬದ ಬಡತನದ ನಡುವೆಯೂ ಇಂಜಿನಿಯರಿಂಗ್ ಓದಲು ಭೋಪಾಲ್​ಗೆ ಬಂದಿದ್ದೆ. ಕೆಲವೊಮ್ಮೆ ಊಟಕ್ಕೂ ಹಣವಿರಲಿಲ್ಲ. ಆಗ ಸಲ್ಮಾನ್ ಖಾನ್ ನೆರವು ನೀಡಿದ್ರು’ ಅಂತ ಡಿವೈಎಸ್ಪಿ ಸಂತೋಷ್ ಪಟೇಲ್ ಸ್ಮರಿಸಿದ್ದಾರೆ.

Advertisment


">November 10, 2024

ಡಿವೈಎಸ್​ಪಿ ಸ್ನೇಹಿತನನ್ನು ಭೇಟಿಯಾಗಿ ಸಲ್ಮಾನ್​ ಖಾನ್​ಗೆ ತೀವ್ರ ಖುಷಿಯಾಗಿದೆ. ‘ಅವನು ಕೂಡ ನನ್ನಂತೆಯೇ ಬಡವ. ಉಚಿತ ತರಕಾರಿ ಕೊಟ್ಟಿದ್ದು ದೊಡ್ಡ ವಿಷಯವಲ್ಲ. ಬಡ ಹುಡುಗ ಹಸಿವಿನಿಂದ ಇದ್ದು ನಾನು ಹಣ ಸಂಪಾದಿಸುವುದರಲ್ಲಿ ಅರ್ಥವಿಲ್ಲ‘ ಅಂತಾನೆ ವ್ಯಾಪಾರಿ ಸಲ್ಮಾನ್ ಖಾನ್.

ಇದೀಗ ಇವರಿಬ್ಬರ ಭೇಟಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅತ್ಯಂತ ಬಡತನದಿಂದ ಡಿವೈಎಸ್​ಪಿ ಮಟ್ಟಕ್ಕೆ ಏರಿರುವ ಸಂತೋಷ್ ಪಟೇಲ್​ಗೆ ಸಾಮಾಜಿಕ ಜಾಲತಾಣದಲ್ಲಿ 2.4 ಮಿಲಿಯನ್ ಫಾಲೋವರ್ಸ್​ಗಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment