ಬೆಳ್ಳಂಬೆಳಗ್ಗೆ ದೊಡ್ಡ ಆಘಾತ.. ವ್ಯಾಯಾಮ ಮಾಡುತ್ತಿದ್ದ ವ್ಯಕ್ತಿ ದಾರುಣ ಸಾವು! VIDEO

author-image
admin
Updated On
ಬೆಳ್ಳಂಬೆಳಗ್ಗೆ ದೊಡ್ಡ ಆಘಾತ.. ವ್ಯಾಯಾಮ ಮಾಡುತ್ತಿದ್ದ ವ್ಯಕ್ತಿ ದಾರುಣ ಸಾವು! VIDEO
Advertisment
  • ಬೆಳ್ಳಂಬೆಳಗ್ಗೆ ವ್ಯಾಯಾಮ ಮಾಡುತ್ತಿರುವಾಗಲೇ ಜವರಾಯನ ಎಂಟ್ರಿ!
  • ಪ್ರತಿ ನಿತ್ಯ ತಪ್ಪದೇ ವ್ಯಾಯಾಮ ಮಾಡೋ ಅಭ್ಯಾಸ ಹೊಂದಿದ್ದರು
  • ಸಾವಿಗೂ ಮುನ್ನ ವ್ಯಕ್ತಿಯ ಕೊನೆಯ ಕ್ಷಣಗಳು ಸಿಸಿಟಿವಿಯಲ್ಲಿ ಸೆರೆ

ಬೆಳಗ್ಗೆ ಎದ್ದ ಕೂಡಲೇ ವಾಕಿಂಗ್‌, ಜಾಗಿಂಗ್ ಮಾಡುವುದು ಒಳ್ಳೆಯ ಅಭ್ಯಾಸ. ಪ್ರತಿ ನಿತ್ಯ ವ್ಯಾಯಾಮ ಮಾಡುವವರು ಫಿಟ್ ಆಗಿರುತ್ತಾರೆ ಅನ್ನೋದು ಸುಳ್ಳಲ್ಲ. ಆದರೆ ಬೆಳ್ಳಂಬೆಳಗ್ಗೆ ವ್ಯಾಯಾಮ ಮಾಡುತ್ತಿರುವಾಗಲೇ ಕುಸಿದು ಬಿದ್ದ ವ್ಯಕ್ತಿ ಸಾವನ್ನಪ್ಪಿರೋ ದಾರುಣ ಘಟನೆ ಉತ್ತರಾಖಂಡದ ಗರ್ವಾಲ್‌ನಲ್ಲಿ ನಡೆದಿದೆ.

ಕಳೆದ ಏಪ್ರಿಲ್ 17ರಂದು ಪ್ರಮೋದ್ ಬಿಂಜೋಲಾ ಎಂಬ ಈ ವ್ಯಕ್ತಿ ತಮ್ಮ ಮನೆಯ ಸಮೀಪವೇ ಬೆಳಗಿನ ನಡಿಗೆ ಮತ್ತು ವ್ಯಾಯಾಮ ಮಾಡುತ್ತಿದ್ದರು. ಇವರಿಗೆ ತಮ್ಮ ಆರೋಗ್ಯದ ಬಗ್ಗೆ ಬಹಳ ಜಾಗರೂಕರಾಗಿದ್ದರು. ಪ್ರತಿನಿತ್ಯ ತಪ್ಪದೇ ನಿಯಮಿತವಾಗಿ ವ್ಯಾಯಾಮ ಮಾಡುತ್ತಿದ್ದರು.

ವ್ಯಾಯಾಮ ಮಾಡುವಾಗ ಅವರಿಗೆ ಇದ್ದಕ್ಕಿದ್ದಂತೆ ದಣಿವಾದ ಅನುಭವವಾಗಿದೆ. ಕೂಡಲೇ ವ್ಯಾಯಾಮ ನಿಲ್ಲಿಸಿದ ಪ್ರಮೋದ್ ಅವರು ರಸ್ತೆ ಬದಿಯ ಸ್ಲ್ಯಾಬ್ ಮೇಲೆ ಕುಳಿತರು. ಕೆಲವೇ ಕ್ಷಣಗಳಲ್ಲಿ ಅವರು ಇದ್ದಕ್ಕಿದ್ದಂತೆ ಕೆಳಗೆ ಬಿದ್ದ ನೋವಿನಿಂದ ಒದ್ದಾಡಲು ಪ್ರಾರಂಭಿಸಿದ್ದಾರೆ.

ಇದನ್ನೂ ಓದಿ: ‘ಅವರೇ ಅಟ್ಯಾಕ್ ಮಾಡಿಸಿದ್ದು..’ ಪೊಲೀಸರಿಗೆ ಮಹತ್ವದ ಮಾಹಿತಿ ನೀಡಿ ರಿಕ್ಕಿ ರೈ 

ಪ್ರಮೋದ್ ಬಿಂಜೋಲಾ ಅವರಿಗೆ ಏನಾಗಿದೆ ಅನ್ನೋದು ಅರ್ಥವಾಗಲಿಲ್ಲ. ಬಹುಶಃ ಅವರಿಗೆ ತಲೆತಿರುಗಿರಬಹುದು ಎಂದು ಭಾವಿಸಿದ್ದಾರೆ. ಜನರು ಪ್ರಮೋದ್ ಅವರನ್ನ ಕೂಡಲೇ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಿದ್ದಾರೆ ಆದರೆ ಅಷ್ಟೊತ್ತಿಗೆ ತುಂಬಾ ತಡವಾಗಿದೆ. ಪ್ರಮೋದ್ ಬಿಂಜೋಲಾ ಅವರು ಹೃದಯಾಘಾತದಿಂದ ಪ್ರಾಣ ಬಿಟ್ಟಿದ್ದಾರೆ. ಈ ಹಠಾತ್ ಸಾವಿಗೂ ಮುನ್ನ ವ್ಯಕ್ತಿಯ ಕೊನೆಯ ಕ್ಷಣಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.


">April 19, 2025

ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ?
ಪ್ರತಿಯೊಬ್ಬರಿಗೂ ವ್ಯಾಯಾಮ ಅನ್ನೋದು ಬಹಳ ಮುಖ್ಯ. ಆದರೆ ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದನ್ನು ಯಾರು ಮರೆಯಬಾರದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಹಲವು ಬಾರಿ ಹೃದಯ ಕಾಯಿಲೆಯಂತಹ ಸಮಸ್ಯೆಗಳು ದೇಹದೊಳಗೆ ಅಡಗಿರುತ್ತವೆ. ಆ ಸಮಸ್ಯೆಗಳು ಯಾವುದೇ ಲಕ್ಷಣಗಳಿಲ್ಲದೆ ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳುತ್ತವೆ.

ಆರೋಗ್ಯವಂತರು ಹೃದಯ ಪರೀಕ್ಷೆಗಳಾದ ECG, ಎಕೋ ಮತ್ತು BP ಟೆಸ್ಟ್‌ಗಳನ್ನು ಮಾಡಿಸಬೇಕು. ವಿಶೇಷವಾಗಿ ಪ್ರತಿದಿನ ವ್ಯಾಯಾಮ ಮಾಡುವವರು ಅಥವಾ 30 ವರ್ಷಕ್ಕಿಂತ ಮೇಲ್ಪಟ್ಟವರು ಪರೀಕ್ಷೆಗೆ ಒಳಪಡುವುದು ಒಳ್ಳೆಯದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment