ಅತ್ತೆಗೆ ಹಿಗ್ಗಾಮುಗ್ಗ ಥಳಿಸಿದ ರಾಕ್ಷಸಿ ಸೊಸೆ.. ವಿಡಿಯೋ ವೈರಲ್! ಆಮೇಲೆ ಏನಾಯ್ತು?

author-image
admin
Updated On
ಅತ್ತೆಗೆ ಹಿಗ್ಗಾಮುಗ್ಗ ಥಳಿಸಿದ ರಾಕ್ಷಸಿ ಸೊಸೆ.. ವಿಡಿಯೋ ವೈರಲ್! ಆಮೇಲೆ ಏನಾಯ್ತು?
Advertisment
  • ಅತ್ತೆ ಹೆಸರಲ್ಲಿದ್ದ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲು ಸೊಸೆ ಹಠ
  • ಆಸ್ತಿ ಕೊಡಲು ಒಪ್ಪದಿದ್ದಾಗ ವೃದ್ಧಾಶ್ರಮಕ್ಕೆ ಕಳುಹಿಸಲು ಪ್ರಯತ್ನ
  • ಅತ್ತೆಯ ಕೂದಲು ಹಿಡಿದು ಎಳೆದಾಡಿ ಹಲ್ಲೆ ಮಾಡಿದ ಭಯಾನಕ ದೃಶ್ಯ

ಅತ್ತೆ, ಮಾವ, ಗಂಡನ ಮೇಲೆ ಮಹಿಳೆ ಹಾಗೂ ಕುಟುಂಬಸ್ಥರು ಹಿಗ್ಗಾಮುಗ್ಗ ಹಲ್ಲೆ ಮಾಡಿರೋ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ ನಗರದಲ್ಲಿ ನಡೆದಿದೆ. ಈ ಸೊಸೆ ಎಷ್ಟು ಸ್ಟ್ರಾಂಗ್ ಆದ್ರೆ ಪೊಲೀಸರು ಕೇಸ್ ದಾಖಲಿಸಲು ಹಿಂದೇಟು ಹಾಕಿದ್ದಾರೆ.

70 ವರ್ಷದ ಸರಳಾ ತನ್ನ ಮಗ ವಿಶಾಲ್‌, ಸೊಸೆ ನೀಲಿಕಾ ಹಾಗೂ ಮೊಮ್ಮಕ್ಕಳೊಂದಿಗೆ ಗ್ವಾಲಿಯರ್ ನಗರದಲ್ಲಿ ವಾಸವಿದ್ದರು. ಸೊಸೆಯ ಕುಟುಂಬಸ್ಥರು ಅತ್ತೆ ಹೆಸರಲ್ಲಿದ್ದ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದ್ದಾರಂತೆ. ಅತ್ತೆ ಬಳಿ ಕೇಳಿದಾಗ ಆಕೆ ಒಪ್ಪಿಕೊಂಡಿಲ್ಲ. ಆಗ ಸೊಸೆ ಅತ್ತೆಯನ್ನು ವೃದ್ಧಾಶ್ರಮಕ್ಕೆ ಕಳುಹಿಸಲು ಪ್ರಯತ್ನಿಸಿದ್ದಾರೆ.

publive-image

ವೃದ್ಧಾಶ್ರಮಕ್ಕೆ ಹೋಗಲು ಅತ್ತೆ ಸರಳಾ ನಿರಾಕರಿಸಿದ್ದಾರೆ. ಆಗ ಕೋಪದಲ್ಲಿ ಹೆತ್ತವರನ್ನು ಕರೆಸಿದ ನೀಲಿಕಾ ಅವರು ಗಂಡ, ಅತ್ತೆ ಮೇಲೆ ಅಮಾನವೀಯವಾದ ಹಲ್ಲೆ ಮಾಡಿದ್ದಾರೆ. ನೀಲಿಕಾ ಅತ್ತೆ ಮೇಲೆ ಹಲ್ಲೆ ನಡೆಸಿ, ನೆಲಕ್ಕೆ ತಳ್ಳಿ, ಒದ್ದು ಹಲ್ಲೆ ಮಾಡಿದ್ದಾರೆ. ಅತ್ತೆಯ ಕೂದಲು ಹಿಡಿದು ಎಳೆದಾಡಿ, ತಳ್ಳಾಡಿ ತಲೆಗೆ ಹೊಡೆದಿರೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಕಾಮುಕ ಬ್ಯಾಡ್ಮಿಂಟನ್ ಕೋಚ್‌.. ಮೊಬೈಲ್‌ನಲ್ಲಿ 8 ಬಾಲಕಿಯರ ನಗ್ನ ವಿಡಿಯೋಗಳು ಪತ್ತೆ! 

publive-image

ಸೊಸೆ ಅತ್ತೆ ಸರಳಾರನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಗನನ್ನು ಥಳಿಸಿದ್ದಾರೆ. ಈ ಬಗ್ಗೆ ದೂರು ನೀಡಿದ್ರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರಂತೆ. ಪೊಲೀಸರು ಆರೋಪಿಗಳ ಪ್ರಭಾವಕ್ಕೆ ಒಳಗಾಗಿ ಈ ಬಗ್ಗೆ ಪ್ರಕರಣ ಕೂಡ ದಾಖಲು ಆಗಿಲ್ಲ. ಸೊಸೆ ಹಲ್ಲೆ ಮಾಡಿರುವ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​​ ಆದ ಮೇಲೆ ಹಿರಿಯ ಪೊಲೀಸ್ ಅಧಿಕಾರಿಗಳ ಸೂಚನೆ ಮೇರೆಗೆ FIR ದಾಖಲಾಗಿದೆ. ಅತ್ತೆಯನ್ನು ಕಾಲ ಕಸದಂತೆ ಕಂಡ ಸೊಸೆಗೆ ಈಗ ಸಂಕಷ್ಟ ಎದುರಾಗಿದೆ.


">April 4, 2025

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment