/newsfirstlive-kannada/media/post_attachments/wp-content/uploads/2025/05/PAK-2.jpg)
ಪಾಕಿಸ್ತಾನದಲ್ಲಿ ಅವರ ಸೇನೆ ಬಗ್ಗೆ ಆಗಲಿ.. ಅವರ ಸೈನಿಕರ ಬಗ್ಗೆ ಆಗಲಿ ಯಾವುದೇ ಗೌರವ ಇಲ್ಲ ಅನ್ನೋದು ಮತ್ತೆ ಸಾಭೀತಾಗಿದೆ. ಸೇನೆ ಮೇಲೆ ಲೋಕಲ್ ಪೊಲೀಸರೇ ಗಲಾಟೆ ಮಾಡಿ ಕಳಿಸಿರೋ ವಿಚಾರ ಅನೇಕ ಚರ್ಚೆಗಳನ್ನ ಹುಟ್ಟಿಹಾಕಿದೆ.
ಭಾರತದ ವಿರುದ್ಧ ಯುದ್ಧಕ್ಕೆ ಸಿದ್ಧವಾಗುತ್ತಿರುವ ಪಾಕಿಸ್ತಾನ ಸೇನೆಗೆ ಅಲ್ಲಿನ ಪೊಲೀಸರೇ ಶಾಕ್ ನೀಡಿದ್ದಾರೆ. ಪಶ್ತೂನ್ ಪೊಲೀಸರು ಪಾಕ್ ಸೈನಿಕರನ್ನ ಅಡ್ಡ ಹಾಕಿ, ಇಲ್ಲಿಗೆ ನೀವು ಯಾಕೆ ಬಂದಿದ್ದೀರಿ ಅಂತ ಕೇಳುವ ಮೂಲಕ ಅಪಮಾನ ಮಾಡಿದ್ದಾರೆ.
ಇದನ್ನೂ ಓದಿ: ಪಾಕ್ ವಿರುದ್ಧ ಯುದ್ಧ ನಡೆದರೆ.. ನಾಗರಿಕರ ಕೈಗೆ ಸರ್ಕಾರ ಗನ್ ನೀಡುತ್ತಾ..? ಭಾರತದಲ್ಲಿ ನಿಯಮ ಏನಿದೆ..?
ಪಾಕಿಸ್ತಾನದಲ್ಲಿ ಸೇನೆ ಮತ್ತು ಪೊಲೀಸರ ನಡುವೆ ಕಿತ್ತಾಟ
ಖೈಬರ್ ಪಖ್ತುಂಖ್ವಾದ ಲಕಿ ಮಾರ್ವಾತ್‌ನಲ್ಲಿ ಪಾಕಿಸ್ತಾನ ಸೇನೆ ಮತ್ತು ಪಶ್ತೂನ್ ಪೊಲೀಸರು ಮುಖಾಮುಖಿಯಾಗಿ ಪರಸ್ಪರ ಜಗಳ ಮಾಡಿಕೊಂಡಿದ್ದಾರೆ. ಪಶ್ತೂನ್ ಪೊಲೀಸರು ಸೈನಿಕರನ್ನ ಅಡ್ಡ ಹಾಕಿ, ಇಲ್ಲಿಗೆ ನೀವು ಯಾಕೆ ಬಂದಿದ್ದೀರಿ. ನಿಮಗೆ ಹುಚ್ಚು ಹಿಡಿದಿದ್ಯಾ? ನೀವು ಇಲ್ಲಿ ಏನು ಮಾಡುತ್ತಿದ್ದೀರಿ? ನಿಮ್ಮ ಜನರಲ್ ಬಂದರೂ ಸಹ ನೀವು ಇನ್ನೂ ಏನನ್ನೂ ಮಾಡಲು ಸಾಧ್ಯವಾಗುವುದಿಲ್ಲ ಎಂದು ಗದರಿದ್ದಾರೆ.
ಮೊನ್ನೆಯಷ್ಟೇ ಪಾಕ್ ಸೇನಾ ಮುಖ್ಯಸ್ಥ ಮುನೀರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಹಿರಿಯ ಸೇನಾಧಿಕಾರಿಗಳೇ ರಾಜೀನಾಮೆ ನೀಡಿದ್ದರು. ಈಗ ಪಾಕ್ ಸೈನಿಕರನ್ನ ಪೊಲೀಸರು ಕೆಣಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ. ಅಲ್ಲದೇ ಸುಮಾರು 5 ಸಾವಿರಕ್ಕೂ ಅಧಿಕ ಸೈನಿಕರೂ ಕೂಡ ಸೇನೆಗೆ ಗುಡ್ ಬೈ ಹೇಳಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನದ ಮಾಜಿ ಸಂಸದ, ಭಾರತದಲ್ಲಿ ಕುಲ್ಫಿ ಐಸ್ ಕ್ರೀಮ್ ಮಾರಾಟ ಮಾಡ್ತಾರೆ.. ಈಗ ಎಲ್ಲಿದ್ದಾರೆ?
ಪಾಕಿಸ್ತಾನದಲ್ಲಿ ಸೇನೆಗೆ ಬೆಲೆ ಇಲ್ಲ ಅನ್ನೋದಕ್ಕೆ ಇದು ಮತ್ತೊಂದು ಸಾಕ್ಷಿ. ಈ ಹಿಂದೆ ಅಂದ್ರೆ ಕಳೆದ ಮಾರ್ಚ್ನಲ್ಲಿ ಬಲೂಚಿಸ್ತಾನದಲ್ಲಿ ಪಾಕಿಸ್ತಾನದ ಸೇನಾ ತುಕಡಿಯ ಮೇಲೆ ನಡೆದ ದಾಳಿಯಲ್ಲಿ ಏಳು ಸೈನಿಕರು ಸಾವನ್ನಪ್ಪಿದ್ದು, 21 ಮಂದಿ ಗಾಯಗೊಂಡಿದ್ದರು. ಈ ರೀತಿ ಪಾಕ್ ಸೇನೆ ಮೇಲೆ ಅನೇಕ ಬಾರಿ ದಾಳಿಗಳು ನಡೆದಿವೆ.
ಒಟ್ನಲ್ಲಿ ಕೆಳಗೆ ಬಿದ್ರು ಮೀಸೆ ಮಣ್ಣಾಗಿಲ್ಲ ಅಂತ ಬಡಾಯಿ ಕೊಚ್ಕೊಳ್ಳೋ ಪಾಕ್.. ಆಗಾಗ ಸೇನೆ ಮೇಲೆ ದಾಳಿ.. ಗಲಾಟೆ ನಡೀತಿದ್ರು ಬಾಲ ಮುದುರಿಸಿಕೊಂಡು ಕೂತಿರುತ್ತೆ ಅನ್ನೋದಕ್ಕೆ ಇದು ಮತ್ತೊಂದು ಸಾಕ್ಷಿಯಾಗಿದೆ.
ಇದನ್ನೂ ಓದಿ: ಮುಯ್ಯಿಗೆ ಮುಯ್ಯಿ.. ಪಾಕಿಸ್ತಾನಕ್ಕೆ ಈಗ ಏರ್ಸ್ಟ್ರೈಕ್ ಆಘಾತ; ನಿನ್ನೆ ಭಾರತ ಏನ್ಮಾಡಿದೆ ಗೊತ್ತಾ..?
"Dimag Kharab Hai. Udhar Kashmir Bejo. Idhar Kya Kar Rahe Ho"
Pakistan Army vs Pashtun Police face-off in Laki Marwat, KPK!
Now even Police is openly abusing and challenging Pakistani Army Generals.
Reputation of #CorruptPakArmy is deteriorating. pic.twitter.com/i8Pw0CPGnP— ManhasAnupama (@manhas_anupama) April 30, 2025
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ