Advertisment

ಕುದುರೆ ಏರಿ ಬಂದ ಮದುಮಗನಿಗೆ ಹೃದಯಾಘಾತ; ಕಡೇ ಕ್ಷಣದ ವಿಡಿಯೋ ನೋಡಿದ್ರೆ ಶಾಕ್ ಆಗ್ತೀರಾ!

author-image
admin
Updated On
ಕುದುರೆ ಏರಿ ಬಂದ ಮದುಮಗನಿಗೆ ಹೃದಯಾಘಾತ; ಕಡೇ ಕ್ಷಣದ ವಿಡಿಯೋ ನೋಡಿದ್ರೆ ಶಾಕ್ ಆಗ್ತೀರಾ!
Advertisment
  • ದೇಶಾದ್ಯಂತ ವಿವಾಹ ಮಹೋತ್ಸವ ಅದ್ಧೂರಿಯಾಗಿ ನಡೆಯುತ್ತಿದೆ
  • ಮದುಮಗ ಖುಷಿಯಾಗಿ ಕುದುರೆ ಮೇಲೆ ಬರುವಾಗ ಘೋರ ದುರಂತ
  • ಮದುವೆ ಮನೆಯಲ್ಲಿದ್ದ ಎಲ್ಲರೂ ಒಂದು ಕ್ಷಣ ಫುಲ್‌ ಶಾಕ್!

ಈಗಂತೂ ಮದುವೆ ಸೀಸನ್. ದೇಶಾದ್ಯಂತ ವಿವಾಹ ಮಹೋತ್ಸವ ಅದ್ಧೂರಿಯಾಗಿ ನಡೆಯುತ್ತಿದೆ. ಈ ಸಂಭ್ರಮ, ಸಡಗರದಲ್ಲಿ ಎಲ್ಲರ ಕಣ್ಣು ಗಂಡು-ಹೆಣ್ಣಿನ ಮೇಲೆ ಕೇಂದ್ರೀಕೃತವಾಗಿರುತ್ತೆ. ಅದೇ ಮದುವೆ ಮನೆಯಲ್ಲಿ ಮದುಮಗನಿಗೆ ಹೆಚ್ಚು, ಕಡಿಮೆ ಆದ್ರೆ ನಿಜಕ್ಕೂ ಘನ ಘೋರ ದುರಂತ.

Advertisment

ಮಧ್ಯಪ್ರದೇಶದ ಮದುವೆ ಮಂಟಪ ಕರುಣಾಜನಕ ದೃಶ್ಯಕ್ಕೆ ಸಾಕ್ಷಿಯಾಗಿದೆ. ಮದುಮಗ ಖುಷಿಯಾಗಿ ಕಲ್ಯಾಣ ಮಹಲ್‌ಗೆ ಕುದುರೆಯಲ್ಲಿ ಬರುವಾಗ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ವರ ಮದುವೆ ಮನೆಗೆ ಕುದುರೆಯಲ್ಲಿ ಆಗಮಿಸುವಾಗ ಹೃದಯಾಘಾತವಾಗಿದೆ.

ಇದನ್ನೂ ಓದಿ: ಭಾವಿ ಪತ್ನಿ ಕಾಲಿಗೆ ಬೀಳಲು ಬರ್ತಿದ್ದಂತೆ ಬೇಡ ಎಂದ ಡಾಲಿ; ಧನು-ಧನ್ಯತಾ ಕಲ್ಯಾಣದ ವಿಶೇಷ ಕ್ಷಣಗಳು ಇಲ್ಲಿದೆ! 

ಕುದುರೆ ಮೇಲೆ ಕೂತಿದ್ದ ಮದುಮಗ ಹಾಗೇ ಕುಸಿದು ಬಿದ್ದಿದ್ದು. ಮದುವೆ ಮನೆಯಲ್ಲಿದ್ದ ಎಲ್ಲರೂ ಶಾಕ್ ಆಗಿದ್ದಾರೆ. ಕೂಡಲೇ ಮದುಮಗನ ರಕ್ಷಿಸೋ ಪ್ರಯತ್ನ ಮಾಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ.

Advertisment


">February 15, 2025

ಮಧ್ಯಪ್ರದೇಶದ ಶಿಯೋಪುರ್‌ನಲ್ಲಿ ಈ ಮನ ಮಿಡಿಯೋ ಘಟನೆ ನಡೆದಿದೆ. ಹೃದಯಾಘಾತಕ್ಕೆ ಮದುಮಗ ಮೃತಪಟ್ಟಿರೋ ಕಡೇ ಕ್ಷಣದ ವಿಡಿಯೋ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಆಘಾತಕಾರಿ ವಿಡಿಯೋ ನೋಡುಗಳ ಮನಕಲಕುವಂತೆ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment