ಬೆಂಗಳೂರಿಗೆ ಬಂದು ಸೀರೆ ಖರೀದಿಸಿದ ನೀತಾ ಅಂಬಾನಿ; ಏನಿದರ ವಿಶೇಷ? ವಿಡಿಯೋ ಫುಲ್‌ ವೈರಲ್​!

author-image
Gopal Kulkarni
Updated On
ಬೆಂಗಳೂರಿಗೆ ಬಂದು ಸೀರೆ ಖರೀದಿಸಿದ ನೀತಾ ಅಂಬಾನಿ; ಏನಿದರ ವಿಶೇಷ? ವಿಡಿಯೋ ಫುಲ್‌ ವೈರಲ್​!
Advertisment
  • ಬೆಂಗಳೂರಿನ ಪ್ರಸಿದ್ಧ ಸೀರೆ ಅಂಗಡಿಗೆ ಭೇಟಿ ಕೊಟ್ಟ ನೀತಾ ಅಂಬಾನಿ
  • ಕಳೆದ 600 ವರ್ಷಗಳ ಪರಂಪರೆ ಇರುವ ಅಂಗಡಿಗೆ ಬಂದಿದ್ದೇಕೆ ನೀತಾ?
  • ಈ ದಿ ಹೌಸ್​ ಆಫ್ ಅಂಗಡಿಗೂ ದೀಪಿಕಾಗೂ ಇದೆ ಒಂದು ಹಳೆಯ ನಂಟು

ನೀತಾ ಅಂಬಾನಿ ಅಂದ ತಕ್ಷಣ ನಮಗೆ ಕಣ್ಮುಂದೆ ಬರೋದು ಅವರ ಬಳಿ ಇರುವ ಕೈಮಗ್ಗಗಳ ಹಾಗೂ ಪಾರಂಪರಿಕ ಸೀರೆಗಳ ಕಲೆಕ್ಷನ್. ದೇಶಾದ್ಯಂತ ಯಾವುದೇ ಜಾಗದಲ್ಲಿ ಒಳ್ಳೆಯ ಸೀರೆಗಳು ಸಿಗುತ್ತವೆ ಅಂದ್ರೆ ಆ ಸೀರೆ ನೀತಾ ಅಂಬಾನಿಯವರ ಕಲೆಕ್ಷನ್​ನಲ್ಲಿ ಒಂದಾಗಿರುತ್ತದೆ. ಈಗ ಬೆಂಗಳೂರಿನ ಒಂದು ಸಾರಿ ಅಂಗಡಿಗೆ ಭೇಟಿ ಕೊಟ್ಟಿರುವ ನೀತಾ ಅಂಬಾನಿಯವರ ವಿಡಿಯೋ ಸಖತ್ ವೈರಲ್ ಆಗುತ್ತದೆ. ಈ ಸಾರಿ ಅಂಗಡಿಗೂ ಬಾಲಿವುಡ್​ ನಟಿ ದೀಪಿಕಾ ಪಡುಕೋಣೆಗೆ ಒಂದು ಬಿಡಿಸಲಾಗದ ನಂಟಿದೆ.

ನೀತಾ ಅಂಬಾನಿಯವರಿಗೆ ಸಿಲ್ಕ್ ಸಾರಿ ಅಂದ್ರೆ ಅಚ್ಚುಮೆಚ್ಚು ಅರದಲ್ಲೂ ಸೊಗಸಿಗೆ ಹೆಸರಾಗಿರುವ ಕಾಂಜೀವರಂ ಸೀರೆ ಅಂದ್ರೆ ನೀತಾ ಅಂಬಾನಿಗೆ ಸಿಕ್ಕಾಪಟ್ಟೆ ಇಷ್ಟ ಹೀಗಾಗಿ ಬೆಂಗಳೂರಿನಲ್ಲಿರುವ 600 ವರ್ಷಗಳ ಕೈಮಗ್ಗದಿಂದ ಸೀರೆ ತಯಾರಿಸುವ ಇತಿಹಾಸ ಹೊಂದಿರುವ ದಿ ಹೌಸ್​​ ಆಫ್ ಅಂಗಡಿಗೆ ಇತ್ತೀಚೆಗೆ ನೀತಾ ಅಂಬಾನಿಯವರು ಭೇಟಿ ನೀಡಿದ್ದರು. ಕಳೆದ 600 ವರ್ಷಗಳ ಕೈಮಗ್ಗ ಸೀರೆ ತಯಾರಿಕೆಯ ಇತಿಹಾಸ ಹೊಂದಿರುವ ಈ ಅಂಗಡಿಗೆ ನೀತಾ ಅಂಬಾನಿ ಭೇಟಿ ನೀಡಿರುವ ಒಂದು ವಿಡಿಯೋ ಈಗ ವೈರಲ್ ಆಗಿದೆ.

ಇದನ್ನೂ ಓದಿ:50 ಸೆಕೆಂಡ್ ಜಾಹೀರಾತಿಗೆ 5 ಕೋಟಿ ರೂಪಾಯಿ ಸಂಭಾವನೆ ಪಡೆಯುವ ನಟಿ ಯಾರು? ದೀಪಿಕಾ ಅಲ್ಲ, ಆಲಿಯಾ ಅಲ್ಲ!

ಈ ಸಾರಿ ಅಂಗಡಿಗೆ ಭೇಟಿ ನೀಡಿ ಆಚೆ ಬರುವಾಗ ನೀತಾ ಅಂಬಾನಿ ಟೈಟ್ ಸೆಕ್ಯೂರಿಟಿಯೊಂದಿಗೆ ಎಲ್ಲರತ್ತ ಕೈ ಬೀಸಿಕೊಂಡು ಬರುವ ವಿಡಿಯೋ ಸದ್ಯ ಅವರ ಫ್ಯಾನ್​​ ಪೇಜ್​ನಲ್ಲಿ ಪೋಸ್ಟ್ ಆಗಿದೆ. ನೀತಾ ಅಂಬಾನಿ ತಮ್ಮ ಅಂಗಡಿಗೆ ಭೇಟಿ ನೀಡಿದ ಖಷಿಯನ್ನು ದಿ ಹೌಸ್ ಆಫ್ ಅಂಗಡಿ ತನ್ನ ಇನ್​ಸ್ಟಾಗ್ರಾಮ್​ ಪೇಜ್​ನಲ್ಲಿ ಹಂಚಿಕೊಂಡಿದೆ .

ಈ ಒಂದು ದಿ ಹೌಸ್ ಆಫ್​ ಅಂಗಡಿಗೂ ನಟಿ ದೀಪಿಕಾ ಪಡುಕೋಣೆಗೂ ಒಂದು ನಂಟಿದೆ. ಅದನ್ನು ತಿಳಿದುಕೊಳ್ಳಲು ನಾವು ಒಂದಿಷ್ಟು ವರ್ಷ ಹಿಂದಕ್ಕೆ ಹೋಗಬೇಕಾಗುತ್ತದೆ. ದೀಪಿಕಾ ರಣವೀರ್ ಸಿಂಗ್ 2018ರಲ್ಲಿ ಮದುವೆಯಾದರು. ಮದುವೆಯಲ್ಲಿ ದೀಪಿಕಾ ಪಡುಕೋಣೆ ಮದುಮಗಳಾಗಿ ಮಿಂಚಿದ್ದು ಪರಿಶುದ್ಧ ಕಾಂಜೀವರಂ ರೇಷ್ಮೆ ಸೀರೆಯಲ್ಲಿ ಗಂಢಬೇರುಂಡ ವಿನ್ಯಾಸದಲ್ಲಿ ಈ ಒಂದು ಸಾರಿಯನ್ನು ಸಿದ್ಧಗೊಳಿಸಲಾಗಿತ್ತು. ಅಂದು ದೀಪಿಕಾ ಧರಿಸಿದ್ದ ವಿಶೇಷ ಸೀರೆ ಇದೇ ದಿ ಹೌಸ್ ಆಫ್​ ಅಂಗಡಿಯಲ್ಲಿ ಸಿದ್ಧಗೊಂಡಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment