ನಾಗರಹಾವಿನ ಪಕೋಡಾ ಎಂದಾದರೂ ತಿಂದಿದ್ದೀರಾ..? ವಿಡಿಯೋ ನೋಡಿದ ವ್ಲೋಗರ್​ನೇ ಬೆಚ್ಚಿ ಬಿದ್ದ!

author-image
Gopal Kulkarni
Updated On
ನಾಗರಹಾವಿನ ಪಕೋಡಾ ಎಂದಾದರೂ ತಿಂದಿದ್ದೀರಾ..? ವಿಡಿಯೋ ನೋಡಿದ ವ್ಲೋಗರ್​ನೇ ಬೆಚ್ಚಿ ಬಿದ್ದ!
Advertisment
  • ಹಾವನ್ನು ಪಕೋಡಾ ಮಾಡಿ ತಿನ್ನುತ್ತಾರೆ ಇಲ್ಲಿಯ ಜನರು, ಎಲ್ಲಿ ?
  • ಒಂದು ಹಾವಿನ ಪಕೋಡಾಗೆ 1 ಸಾವಿರ ರೂಪಾಯಿ ಬೆಲೆಯಂತೆ?
  • ಹಾವಿನ ಮಾಂಸ ಸೇವನೆಯಿಂದ ಇಷ್ಟೆಲ್ಲಾ ಪ್ರಯೋಜನವಿದೆಯಂತೆ !

ಸ್ಟ್ರೀಟ್ ಫುಡ್ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿ ಮಾಡುತ್ತವೆ. ಇತ್ತೀಚೆಗೆ ಅಂತಹ ವಿಡಿಯೋಗಳು ವೈರಲ್ ಕೂಡ ಆಗುತ್ತಿವೆ. ಜಾಮೂನು ಪಕೋಡಾ, ಓರಿಯೋ ಬಿಸ್ಕೆಟ್​ ಪಕೋಡಾ, ಎಗ್ಗ ಪಾನಿಪುರಿ,ಇಂತಹ ಅನೇಕ ಪಕೋಡಾ ಹಾಗೂ ಬೀದಿ ಬದಿಯ ಖಾದ್ಯಗಳು ವೈರಲ್ ಆಗುವ ಜೊತೆ ಜೊತೆಗೆ ಸಾರ್ವಜನಿಕರಿಂದ ನಗೆಪಾಟಲಿಗೆ ಕೂಡ ಕಾರಣವಾಗಿವೆ. ಈಗ ಅಂತಹುದೇ ಒಂದು ಪಕೋಡಾ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಸುದ್ದಿಯಾಗಿದೆ. ಪ್ರಪಂಚದಲ್ಲಿ ಇಂತಹದೂ ಒಂದು ಪಕೋಡ ಇದೆಯಾ ಗುರು ಎಂದು ಗಾಬರಿಗೊಂಡಿದ್ದಾರೆ.

ಭಾರತೀಯ ವ್ಲಾಗೋರ್ ಒಬ್ಬ ಇಂಡೋನೇಷ್ಯಾದ ಬೀದಿ ಆಹಾರಗಳ ಬಗ್ಗೆ ಒಂದು ವಿಡಿಯೋ ಮಾಡಿದ್ದಾರೆ. ಅಲ್ಲಿ ಕಾಣಸಿಕ್ಕ ಕೊಬ್ರಾ ಪಕೋಡಾ ಬೋರ್ಡ್​ ನೋಡಿ ಖುದ್ದು ವ್ಲಾಗೋರ್​ನೇ ಬೆಚ್ಚಿಬಿದ್ದಿದ್ದಾನೆ. ಬೀದಿಯಲ್ಲಿ ಕೊಬ್ರಾ ಪಕೋಡಾದ ಬೋರ್ಡ್ ನೋಡಿ ನಿಜಕ್ಕೂ ಈ ಪಕೋಡಾ ಇಲ್ಲಿ ಮಾರುತ್ತಾರಾ ಎಂದು ಅಂಗಡಿಯಲ್ಲಿ ವಿಚಾರಿಸಿದಾಗ ಅಲ್ಲಿ ಹೌದು ಎಂಬ ಉತ್ತರ ಬಂದಿದ್ದಲ್ಲದೇ, ಅವನ ಎದುರಿಗೆನೇ ಹಾವುಗಳನ್ನು ಕತ್ತರಿಸಿ ಪಕೋಡಾ ಮಾಡಿ ತೋರಿಸಿದ್ದಾರೆ. ಅದು ಅಲ್ಲದೇ ಈ ಒಂದು ಪಕೋಡಾ ಇಂಡೋನೇಷಿಯಾದ ಜಕರ್ತಾದಲ್ಲಿನ ಜನರಿಗೆ ಸಿಕ್ಕಾಪಟ್ಟೆ ಇಷ್ಟದ ಆಹಾರ ಎಂದು ಕೂಡ ತಿಳಿದು ಬಂದಿದೆ.

ಇದನ್ನೂ ಓದಿ:181 ಮಂದಿಯಲ್ಲಿ ಇಬ್ಬರು ಮಾತ್ರ ಬದುಕಿ ಬಂದರು.. ಇವರ ಜೀವ ಉಳಿಯಲು ನಿಗೂಢ ಕಾರಣ ಏನು?

ಕಾಶ್ ಚೌದ್ರಿ ಎಂಬ ಯುವಕ ಮಾಡಿದ ವಿಡಿಯೋದಲ್ಲಿ ಇಂಡೋನೇಷಿಯದವರು ಹಾವಿನ ಮಾಂಸವನ್ನು ಎಷ್ಟು ಇಷ್ಟ ಪಡುತ್ತಾರೆ ಎಂಬ ಬಗ್ಗೆ ಮಾಹಿತಿ ಇದೆ. ರಾಶಿ ರಾಶಿ ಹಾವುಗಳನ್ನು ಒಂದು ಕಡೆ ಕೂಡಿ ಹಾಕಿರೋದನ್ನ ಅವುಗಳನ್ನು ಒಂದೊಂದಾಗಿ ಹೊರ ತೆಗೆದು ಕತ್ತರಿಸಿದ ಅದರ ಪಕೋಡಾ ಮಾಡಿ ಮಾರುವುದು ಕಂಡು ಬಂದಿದೆ. ಕೇವಲ ಹಾವಿನ ಮಾಂಸವಲ್ಲ, ಹಾವಿನ ರಕ್ತಕ್ಕೂ ಕೂಡ ತುಂಬಾ ಬೆಲೆ ಅದನ್ನು ಕೊಂಡುಕೊಳ್ಳಲು ಅಲ್ಲಿ ಜನರು ಸಾಲುಗಟ್ಟಿ ನಿಲ್ಲುತ್ತಾರೆ ಎಂಬುದನ್ನು ಕೂಡ ವ್ಲಾಗೋರ್ ಹೇಳಿದ್ದಾನೆ.

ಇದನ್ನೂ ಓದಿ: ಫೇಸ್​​ಬುಕ್ ಲವ್​​; ಪ್ರೇಯಸಿಯನ್ನು ಮದುವೆ ಆಗಲು ಪಾಕ್​ಗೆ ಹೋದ ಭಾರತೀಯ; ಆಮೇಲೇನಾಯ್ತು?

ಹಾವಿನ ಮಾಂಸ ತಿನ್ನುವುದರಿಂದ ಹೆಚ್ಚು ಶಕ್ತಿ ಬರುತ್ತೆ, ಚರ್ಮದ ಕಾಂತಿ ಹೆಚ್ಚಾಗುತ್ತೆ. ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತೆ ಎನ್ನುವುದು ಇಲ್ಲಿಯ ಜನರ ನಂಬಿಕೆ. ಹೀಗಾಗಿ ಹಾವಿನ ಮಾಂಸಕ್ಕೆ ಇಂಡೋನೇಷಿಯಾದಲ್ಲಿ ಭಾರೀ ಡಿಮ್ಯಾಂಡ್ ಇದೆ. ದುರ್ಬಲ ಹೃದಯದವರು ಈ ವಿಡಿಯೋವನ್ನು ನೋಡಲೇಬೇಡಿ ಎಂದು ತನ್ನ ಮಾತನ್ನು ಆರಂಭಿಸುವ ಕಾಶ್ ಚೌದ್ರಿ, ಒಂದು ಕಡೆ ಕೂಡಿ ಹಾಕಿದ್ದ ಹತ್ತಾರು ಹಾವುಗಳನ್ನು ಆಚೆ ತೆಗದ ಪಕೋಡಾ ಮಾಡುವವನು ಅದನ್ನು ಕತ್ತರಿಸಿ ಗ್ರಿಲ್ ಮಾಡಿ ಮಾರುತ್ತಾನೆ. ಹಾಗೆ ಕತ್ತರಿಸಿ ಗ್ರಿಲ್ ಮಾಡಲಾದ ಒಂದು ಪಕೋಡಾಗೆ ಭಾರತೀಯ ರೂಪಾಯಿಗಳಲ್ಲಿ ಒಂದು ಸಾವಿರ ರೂಪಾಯಿ ಬೆಲೆ ಇದೆ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment