VIDEO: ತಿರುಪತಿಯಲ್ಲಿ ಭಕ್ತರ ನೂಕುನುಗ್ಗಲು.. ಕಾಲ್ತುಳಿತದಲ್ಲಿ ಭಾರೀ ದುರಂತ!

author-image
admin
Updated On
VIDEO: ತಿರುಪತಿಯಲ್ಲಿ ಭಕ್ತರ ನೂಕುನುಗ್ಗಲು.. ಕಾಲ್ತುಳಿತದಲ್ಲಿ ಭಾರೀ ದುರಂತ!
Advertisment
  • ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲಿ ಕಾಲ್ತುಳಿತ ದುರಂತ
  • ವೈಕುಂಠ ಏಕಾದಶಿಗಾಗಿ ಆಗಮಿಸುತ್ತಿರುವ ಲಕ್ಷ, ಲಕ್ಷ ಭಕ್ತರು
  • ಟಿಕೆಟ್​ ಪಡೆಯಲು ಆಗಮಿಸಿದ್ದ ಸಾವಿರಾರು ಮಂದಿ ಭಕ್ತರು

ತಿರುಪತಿಯಲ್ಲಿ‌ ಕಾಲ್ತುಳಿತ ಸಂಭವಿಸಿದ್ದು, ಭಕ್ತರ ಸಾವು-ನೋವು ಉಂಟಾಗಿದೆ. ವೈಕುಂಠ ದ್ವಾರದ ಟಿಕೆಟ್ ಪಡೆಯುವ ಕೌಂಟರ್ ಬಳಿ ಈ ಅನಾಹತ ನಡೆದಿದೆ.


">January 8, 2025

ವೈಕುಂಠ ದ್ವಾರದ ದರ್ಶನಕ್ಕೆ 90 ಕೌಂಟರ್‌ಗಳಲ್ಲಿ ಟಿಕೆಟ್ ‌ನೀಡುವ ವ್ಯವಸ್ಥೆ ಮಾಡಲಾಗಿತ್ತು. ಆದರೆ ಈ ಟಿಕೆಟ್ ಕೌಂಟರ್ ಬಳಿಯೇ ನೂಕುನುಗ್ಗಲು ಉಂಟಾಗಿದೆ. ಕಾಲ್ತುಳಿತದಿಂದ ಇದುವರೆಗೂ ನಾಲ್ವರು ಭಕ್ತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ ಏರಿಕೆ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿ: ವೈಕುಂಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಹೇಗಿರುತ್ತೆ? 7 ಲಕ್ಷ ಭಕ್ತರಿಗಾಗಿ TTD ಮಹತ್ವದ ನಿರ್ಧಾರ! 

ಕೌಂಟರ್‌ಗಳಿಗೆ ವೈಕುಂಠ ದರ್ಶನದ ಟಿಕೆಟ್​ ಪಡೆಯಲು 4 ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸಿದ್ದರು. ಈ ವೇಳೆ ಕಾಲ್ತುಳಿತ ಸಂಭವಿಸಿದೆ. ಸೇಲಂ ಮೂಲದ ಮಲ್ಲಿಕಾ ಎಂಬ ಮಹಿಳೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಈ ದುರಂತ ಹಿನ್ನೆಲೆಯಲ್ಲಿ ಟಿಟಿಡಿ ತುರ್ತು ಸಭೆ ಕರೆದು ಮಾಹಿತಿ ಪಡೆದುಕೊಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment