/newsfirstlive-kannada/media/post_attachments/wp-content/uploads/2024/10/jogi-dance.jpg)
ಬೇಡುವೆನು ವರವನ್ನು ಕೊಡೆ ತಾಯಿ ಜನ್ಮವನು ಅನ್ನೋ ಹಾಡು ಕಿವಿಗೆ ಬಿದ್ದ ಕೂಡಲೇ ಜೋಗಿ ಸಿನಿಮಾದ ಅಮ್ಮ ಮಗನ ಡ್ಯಾನ್ಸ್ ಕಣ್ಮುಂದೆ ಬಂದು ನಿಲ್ಲುತ್ತದೆ. ಅಮ್ಮ ಮಗನ ಆ ಬಾಂಧವ್ಯ ಕಣ್ಣಾಲಿಗಳಲ್ಲಿ ನೀರು ತುಂಬಿಕೊಳ್ಳುವಂತೆ ಮಾಡುತ್ತದೆ. ಸದ್ಯ, ಜೋಗಿಯ ಅಮ್ಮನನ್ನೂ ಮೀರಿಸೋ ಓರ್ವ ತಾಯಿ ಮಗನ ಡ್ಯಾನ್ಸ್ ಎಲ್ಲೆಡೆ ವೈರಲ್ ಆಗುತ್ತಿದೆ.
ಇದನ್ನೂ ಓದಿ: ರೈಲು ಕಿಟಕಿಯಿಂದ ಜಾರಿ ಬಿದ್ದ ಕಂದಮ್ಮ; 16 ಕಿ.ಮೀ ಓಡುತ್ತಲೇ ಮಗಳನ್ನ ಉಳಿಸಿಕೊಂಡ ಅಪ್ಪ; ಇದು ಕರುಣಾಜನಕ ಸ್ಟೋರಿ!
ಮುಂಬೈ ಜೋಗಿ, ಮಹಾತಾಯಿ ವಿಡಿಯೋ ವೈರಲ್!
ಗಣೇಶೋತ್ಸವದ ಸಂದರ್ಭ. ಎಲ್ಲರೂ ಡ್ರಮ್ಸ್ ಸೌಂಡ್ಗೆ ಕುಣಿಯುತ್ತಿದ್ದಾರೆ. ಅಲ್ಲಿಗೆ ಬರುವ ವಿಶೇಷ ಚೇತನ ಮಗು ಕುಣಿಯಲಾರಂಭಿಸುತ್ತಾನೆ. ಚಪ್ಪಾಳೆ ತಟ್ಟುತ್ತಾ ಕಂದನನ್ನ ಪ್ರೋತ್ಸಾಹಿಸುತ್ತಿದ್ದ ತಾಯಿ ಶಾಕ್ ಆಗುತ್ತಾಳೆ.
ಯಾಕಂದ್ರೆ ಆ ಮಗುವಿನ ಕಿವಿಯಲ್ಲಿದ್ದ ಶ್ರವಣ ಸಾಧನ ಕೆಳಕ್ಕೆ ಬೀಳುತ್ತದೆ. ಕೂಡಲೇ ಅದನ್ನು ತೆಗೆದು ಮಗನ ಕಿವಿಗೆ ಜೋಡಿಸಿ, ಸರಿಯಾಗಿದೆ ಅಲ್ಲವೇ ಅಂತ ಸನ್ನೆ ಮಾಡುತ್ತಾಳೆ ಅಮ್ಮ. ಮಗ ಕೂಡ ಸರಿ ಇದೆ ಅಂತ ಸನ್ನೆ ಮಾಡುತ್ತಾನೆ. ಆ ಬಳಿಕ ಅಲ್ಲಿ ಜೋಗಿ ಸಿನಿಮಾ ದೃಶ್ಯವೇ ಕಾಣುತ್ತದೆ.
ಮಗನೊಂದಿಗೆ ಅಮ್ಮನೂ ಸ್ಟೆಪ್ ಹಾಕಿ ಸಂಭ್ರಮಿಸುತ್ತಾಳೆ
ಮಗ ಮತ್ತೆ ಕುಣಿಯೋಕೆ ಆರಂಭಿಸಿದಾಗ ಆ ತಾಯಿ ಮೊದಲಿಗೆ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸುತ್ತಾಳೆ. ಬಳಿಕ ಮಗನ ಸ್ಟೆಪ್ಗೆ ತಕ್ಕಂತೆಯೇ ಅಮ್ಮ ಕೂಡ ಹೆಜ್ಜೆ ಹಾಕುತ್ತಾಳೆ. ಮುಂಬೈ ಮೂಲದ ದೃಶ್ಯವೆಂದು ಹೇಳಲಾಗುವ ಈ ತಾಯಿ ಮಗ ಜೋಗಿ ಸಿನಿಮಾ ರೇಂಜ್ನಲ್ಲಿ ವೈರಲ್ ಆಗುತ್ತಿದೆ.
Mom is always a mom....?❤️? pic.twitter.com/tdt3ijVKux
— Ankit (@terakyalenadena)
Mom is always a mom....🫀❤️🩹 pic.twitter.com/tdt3ijVKux
— Ankit (@terakyalenadena) October 14, 2024
">October 14, 2024
ಅಮ್ಮ ಅಮ್ಮನೇ ಅನ್ನೋದಕ್ಕೆ ಸಾಕ್ಷಿಯಂತಿದೆ ಈ ಮುಂಬೈ ಜೋಗಿ ಹಾಗೂ ಮಹಾತಾಯಿ ಡ್ಯಾನ್ಸ್ ವಿಡಿಯೋ. ಸಾಕಷ್ಟು ಮಂದಿ ಅಮ್ಮ ಮಗನ ವಿಡಿಯೋಗೆ ಎಮೋಷನಲ್ ಆಗಿ ಪ್ರತಿಕ್ರಿಯಿಸುತ್ತಿದ್ದಾರೆ. ಬನದ ಕರಡಿಯಂಥಾ ಅಮ್ಮನಿಗೆ ಮಕ್ಕಳೇ ಹಲಸು, ಜೇನು ಎಲ್ಲವೂ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ