ನಮ್ಮ ಜನರಿಗೆ ಅನ್ಯಾಯ ಮಾಡಿದ್ದಕ್ಕೆ ನೀವು ಕುಂಟುತ್ತಿದ್ದೀರಿ.. CM ಮಂಡಿ ನೋವಿನ ಬಗ್ಗೆ ಪರಿಷತ್ ವಿಪಕ್ಷ ನಾಯಕ ಲೇವಡಿ

author-image
Gopal Kulkarni
Updated On
ನಮ್ಮ ಜನರಿಗೆ ಅನ್ಯಾಯ ಮಾಡಿದ್ದಕ್ಕೆ ನೀವು ಕುಂಟುತ್ತಿದ್ದೀರಿ.. CM ಮಂಡಿ ನೋವಿನ ಬಗ್ಗೆ ಪರಿಷತ್ ವಿಪಕ್ಷ ನಾಯಕ ಲೇವಡಿ
Advertisment
  • ಸಿಎಂ ಸಿದ್ದು ಮಂಡಿನೋವಿನ ಬಗ್ಗೆ ಛಲವಾದಿ ನಾರಾಯಣ ಸ್ವಾಮಿ ಲೇವಡಿ
  • ಜನಕ್ಕೆ ಅನ್ಯಾಯ ಮಾಡಿದ್ದಕ್ಕಾಗಿ ನೀವು ಕುಂಟುವ ಸ್ಥಿತಿವರೆಗೆ ಬಂದಿದ್ದೀರಿ
  • ದಲಿತರಿಗೆ ಅನ್ಯಾಯ ಮಾಡಿದ್ದಕ್ಕೆ ವ್ಹೀಲ್​ಚೇರ್ ಬಂದಿದೆ ಎಂದು ಲೇವಡಿ

ಇತ್ತೀಚೆಗೆ ಸಿಎಂ ಸಿದ್ದರಾಮಯ್ಯನವರು ಮಂಡಿ ನೋವಿನಿಂದ ಬಳಲುತ್ತಿದ್ದಾರೆ. ಹೀಗಾಗಿ ಹಲವು ಕಾರ್ಯಕ್ರಮಗಳಿವೆ ಅವರು ವ್ಹೀಲ್ ಚೇರ್​​ ಮೇಲೆಯ ಬಂದಿದ್ದು ಕೂಡ ಸಾಕ್ಷಿ. ಆದರೆ ಇದನ್ನೇ ಇಟ್ಟುಕೊಂಡು ಅವರ ಬಗ್ಗೆ ಲೇವಡಿ ಮಾಡುವುದು ಎಷ್ಟು ಸರಿ ಎನ್ನುವ ಚರ್ಚೆಯನ್ನು ಹುಟ್ಟು ಹಾಕಿದ್ದಾರೆ ವಿಧಾನ ಪರಿಷತ್​ನ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ.

ಸಿಎಂ ಮಂಡಿ ನೋವಿನ ಬಗ್ಗೆ ಛಲವಾದಿ ನಾರಾಯಣ ಸ್ವಾಮಿ ಲೇವಡಿ ಮಾಡಿದ್ದಾರೆ. ಜನರಿಗೆ ಅನ್ಯಾಯ ಮಾಡಿದ್ದಕ್ಕೆ ಈ ರೀತಿಯಾಗಿದೆ ಎಂದು ಕೇವಲವಾಗಿ ಮಾತನಾಡಿದ್ದಾರೆ. ಭಾಷಣ ಮಾಡುವ ಭರದಲ್ಲಿ ಛಲವಾದಿ ನಾರಾಯಣಸ್ವಾಮಿ ನೀವ ಜನಕ್ಕೆ ಅನ್ಯಾಯ ಮಾಡಿದ್ದೀರಿ. ನಮ್ಮವರ ಹಣ ದುರುಪಯೋಗ ಮಾಡಿಕೊಂಡಿದ್ದೀರಿ. ಹೀಗೆ ಮಾಡಿದ್ದಕ್ಕೆ ಇಂದು ನೀವು ಕುಂಟುತ್ತಿದ್ದೀರಿ ಎಂದು ಹೇಳಿದ್ದಾರೆ.

ಇದನ್ನೂ ಓದಿ:ನ್ಯೂಸ್ ಫಸ್ಟ್ ವರದಿಗೆ ಬಿಗ್ ಇಂಪ್ಯಾಕ್ಟ್‌; ಕೊಪ್ಪಳ ಬಲ್ದೋಟಾ ಕಾರ್ಖಾನೆ ಕೆಲಸ ನಿಲ್ಲಿಸಲು ಸಿಎಂ ಸೂಚನೆ

ಜನರಿಗೆ ಅನ್ಯಾಯ ಮಾಡಿದ್ದಕ್ಕೆ ನಿಮಗೆ ಈ ಸ್ಥಿತಿ ಬಂದಿದೆ. ಗ್ಯಾರಂಟಿಗಳನ್ನು ನೀವು ಕೊಟ್ಟೆ ಇಲ್ಲ. ನಮ್ಮಲ್ಲಿ ವಿದ್ಯಾವಂತರು ಹೆಚ್ಚಾಗ್ತಿದ್ದಾರೆ, ಆದ್ರೆ ನಿರುದ್ಯೋಗ ಹೆಚ್ಚಾಗಿದೆ. ಪೇಪರ್​ಗಳಲ್ಲಿ ಅಷ್ಟೇ ಗ್ಯಾರಂಟಿ ಇದೆ. ನಮಗೆ ಆ ಗ್ಯಾರಂಟಿ ಸಿಗುತ್ತಿಲ್ಲ. ಗುಲಾಮಗಿರಿಯ ಸುಖದ ಸಂಭ್ರಮ ಮಾಡ್ತಿದ್ದಾರೆ ಅವರು. ದಲಿತರು ಬೀದಿಯಲ್ಲಿ ಕುಳಿತಿದ್ದೇವೆ.ದಲಿತರಿಗೆ ಅನ್ಯಾಯ ಮಾಡಿದ್ದಕ್ಕೆ ಕುಂಟುವ ಹಾಗಾಗಿದೆ. ವ್ಹೀಲ್​ಚೇರ್ ಬಂದಿದೆ. ಎಂದು ಛಲವಾದಿ ನಾರಾಯಣಸ್ವಾಮಿ ಲೇವಡಿ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment