/newsfirstlive-kannada/media/post_attachments/wp-content/uploads/2025/06/VIDHANASOUDHA.jpg)
ಬೆಂಗಳೂರು: ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸುಂದರವಾದ ವಿಧಾನಸಭೆಯ ಸಭಾಂಗಣ ನೋಡಲು ಸಾರ್ವಜನಿಕರಿಗೆ ಇಂದಿನಿಂದ ಅವಕಾಶ ಮಾಡಿಕೊಡಲಾಗಿದೆ. ಪ್ರವಾಸೋದ್ಯಮ ಇಲಾಖೆ, ಸಿಬ್ಬಂದಿ ಹಾಗೂ ಆಡಳಿತ ಸುಧಾರಣಾ ಇಲಾಖೆಯಿಂದ ವಿಧಾನಸೌಧ ಗೈಡೆಡ್ ಟೂರ್‌ಗೆ ಚಾಲನೆ ನೀಡಲಾಗಿದೆ.
ವಿಧಾನಸೌಧ ಗೈಡೆಡ್ ಟೂರ್ ಇಂದು ಬೆಳಗ್ಗೆ 9 ಗಂಟೆಯಿಂದ ಪ್ರಾರಂಭವಾಗಲಿದ್ದು 15 ವರ್ಷ ಕೆಳಗಿನ ಮಕ್ಕಳಿಗೆ ಉಚಿತ ಪ್ರವೇಶ ಇರಲಿದೆ. ಉಳಿದಂತೆ ವಯಸ್ಕರಿಗೆ 50 ರೂಪಾಯಿ, 16 ವರ್ಷ ಮೇಲ್ಪಟ್ಟ ವಯಸ್ಕರಿಗೆ 50 ರೂಪಾಯಿ ಶುಲ್ಕ ಇರುತ್ತದೆ. ಪ್ರತಿ ಭಾನುವಾರ, 2 ಹಾಗೂ 4ನೇ ಶನಿವಾರ ವಿಧಾನಸೌಧ ಟೂರ್ ವ್ಯವಸ್ಥೆ ಇರಲಿದ್ದು ಬೆಳಗ್ಗೆ 8 ರಿಂದ ಸಂಜೆ 5 ಗಂಟೆಗೆ ಸಮಯ ನಿಗದಿ ಆಗಿರುತ್ತದೆ.
ಇದನ್ನೂ ಓದಿ: ಕೊರೊನಾಗೆ ಮತ್ತೊಂದು ಬಲಿ.. ದೇಶದಲ್ಲಿ ಒಟ್ಟು ಎಷ್ಟು ಕೋವಿಡ್ ಕೇಸ್ ಪತ್ತೆ ಆಗಿವೆ?
ಆಸಕ್ತಿ ಇರುವವರು ಕೆಎಸ್‌ಟಿಡಿಸಿ ಆನ್ಲೈನ್ ಮೂಲಕ ಬುಕ್ ಮಾಡಬೇಕು. 30 ಜನರನ್ನು ಒಳಗೊಂಡ ಗ್ರೂಪ್‌ನ್ನು ಪ್ರತಿ ಪ್ರವಾಸಕ್ಕೆ ನಿಗದಿ ಮಾಡಲಾಗುತ್ತದೆ. ಒಂದು ಗ್ರೂಪ್‌ಗೆ 90 ನಿಮಿಷಗಳಿಂದ 120 ನಿಮಿಷಗಳ ಪ್ರವಾಸ ಆಗಿರುತ್ತದೆ. ಒಂದು ದಿನಕ್ಕೆ 300 ಜನರಿಗೆ ಮಾತ್ರ ಅವಕಾಶ ಕಲ್ಪಿಸಿ ಕೊಡಲಾಗುತ್ತದೆ. ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ಗೈಡ್ ಮಾಹಿತಿ ನೀಡುವರು. ವಿಧಾನಸೌಧದ ಗೇಟ್ ನಂಬರ್- 3ರಿಂದ ವೀಕ್ಷಕರಿಗೆ ಪ್ರವೇಶ ಕಲ್ಪಿಸಲಾಗುತ್ತದೆ. ಇವತ್ತಿನಿಂದ ವಿಸಿಟ್ಗಾಗಿ 4 ತಂಡಗಳನ್ನು ರಚನೆ ಮಾಡಲಾಗಿದೆ.
ಮೊದಲ ವಿಧಾನಸೌಧದ ಪ್ರವಾಸಕ್ಕಾಗಿ ಶುಕ್ರವಾರದವರೆಗೆ 50ಕ್ಕೂ ಹೆಚ್ಚಿನ ನೋಂದಣಿ ಆಗಿವೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವೆಬ್ಸೈಟ್ನಲ್ಲಿ ಸಾರ್ವಜನಿಕರಿಗೆ ನೋಂದಣಿ ಮಾಡಲು ಅವಕಾಶ ನೀಡಲಾಗಿದೆ. ವಿಧಾನಸೌಧ ಪ್ರವಾಸ ವೇಳೆ ವಿಧಾನ ಸೌಧದ ಇತಿಹಾಸ, ಅದರೊಂದಿಗೆ ವಿಧಾನಸಭೆ, ವಿಧಾನ ಪರಿಷತ್ ಸಭಾಂಗಣಗಳು, ಮುಖ್ಯಮಂತ್ರಿಗಳ ಕೊಠಡಿ ಸೇರಿದಂತೆ ಇನ್ನಿತರೆ ಸ್ಥಳಗಳನ್ನು ವೀಕ್ಷಿಸಲು ಅವಕಾಶ ಇರುತ್ತದೆ. ಈ ಐತಿಹಾಸಿಕ ಕಟ್ಟಡದ ಮಾಹಿತಿ ಒದಗಿಸಲು ಗೈಡ್‌ಗಳು ಇರುತ್ತಾರೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ