/newsfirstlive-kannada/media/post_attachments/wp-content/uploads/2025/02/SHASHIKALA_2.jpg)
ಬೆಂಗಳೂರು: ಕಿರುತೆರೆ ನಟಿ ಶಶಿಕಲಾ ವಿರುದ್ಧ ಕಿರುಕುಳ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೆ ಹಾಜರಾಗುವಂತೆ 2ನೇ ನೋಟಿಸ್ ಅನ್ನು ವಿದ್ಯಾರಣ್ಯಪುರ ಪೊಲೀಸರು ಜಾರಿ ಮಾಡಿದ್ದಾರೆ.
ಕಿರುತೆರೆ ನಟಿ ಶಶಿಕಲಾ ವಿರುದ್ಧ ಪತಿ ಹರ್ಷವರ್ಧನ್ ಅವರು ಕಿರುಕುಳ ಆರೋಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ನಟಿಗೆ ವಿದ್ಯಾರಣ್ಯಪುರ ಪೊಲೀಸರು ಈ ಮೊದಲೇ ನೋಟಿಸ್ ಜಾರಿ ಮಾಡಿದ್ದರು. ಆದರೆ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಪೊಲೀಸರು ಮತ್ತೊಂದು ನೋಟಿಸ್ ನೀಡಿದ್ದಾರೆ. ಇದಕ್ಕೂ ಹಾಜರಾಗದಿದ್ದರೇ 3ನೇ ನೋಟಿಸ್ ಅನ್ನು ನೀಡಲಾಗುತ್ತದೆ. ಒಂದು ವೇಳೆ ಮೂರನೇ ನೋಟಿಸ್ಗೂ ನಟಿ ಉತ್ತರ ಕೊಡದಿದ್ದರೇ ಅರೆಸ್ಟ್ ಮಾಡುವ ಸಾಧ್ಯತೆ ಇರುತ್ತದೆ.
ಇದನ್ನೂ ಓದಿ: Coaching Guru; ಇವತ್ತೇ ನ್ಯೂಸ್ ಫಸ್ಟ್ ಎಕ್ಸ್ಪೋ.. ವಿದ್ಯಾರ್ಥಿಗಳೇ, ಪೋಷಕರೇ ಮಿಸ್ ಮಾಡಲೇಬೇಡಿ
ಹೆಂಡತಿ ವಿರುದ್ಧ ಆರೋಪ ಮಾಡಿರುವ ಹರ್ಷವರ್ಧನ್ ಅವರನ್ನು ಪೊಲೀಸರು ಈಗಾಗಲೇ ಒಂದು ಸುತ್ತು ವಿಚಾರಣೆ ಮಾಡಿದ್ದಾರೆ. ತನ್ನ ಆರೋಪದ ಕುರಿತು ಯಾವುದೇ ಸಾಕ್ಷ್ಯಗಳನ್ನು ನೀಡಿಲ್ಲ. ಹೀಗಾಗಿ ಸರಿಯಾದ ದಾಖಲೆಗಳನ್ನು ಒದಗಿಸುವಂತೆ ಪೊಲೀಸರು ಹೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಅವರು ದಾಖಲೆಗಳ ಜೊತೆ ಹಾಜರಾಗುತ್ತೇನೆ ಎಂದು ತೆರಳಿದ್ದಾರೆ. ಇದರಿಂದ ಪೊಲೀಸರ ತನಿಖೆ ಮುಂದುವರೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ