/newsfirstlive-kannada/media/post_attachments/wp-content/uploads/2025/07/karna-serial-kannada2.jpg)
ನಿಧಿ ಕನಸಿನಲ್ಲಿ ಕರ್ಣನ ಕನವರಿಕೆ ಜೋರಾಗಿದೆ. ಏನೇ ಪರಿಸ್ಥಿತಿ ಎದುರಾದ್ರೂ ಕರ್ಣನ ಜೊತೆ ಕನಸಿನ ಲೋಕಕ್ಕೆ ಜಾರಿ ಬಿಡ್ತಾಳೆ ನಿಧಿಮಾ.
ಕರ್ಣ ಅಡುಗೆ ಮಾಡೋ ಸ್ಟೈಲ್ಗೆ ಫಿದಾ ಆಗಿದ್ದ ಡಾಕ್ಟ್ರಮ್ಮ, ತನ್ನ ಮುದ್ದು ಮಾಡ್ತಾ, ಊಟ ಮಾಡಿಸ್ತಿದ್ರೇ ಹೆಂಗಿರುತ್ತೆ ಅಂತ ಕನಸು ಕಾಣೋಕೆ ಶುರು ಮಾಡಿದ್ರು ನೋಡಿ. ಥೇಟ್ ಹಾಲು ಜೇನು ಸಿನಿಮಾ ದಂತಿತ್ತು ಆ ಸೀನ್.
ಇದನ್ನೂ ಓದಿ: ರಾಶಿ ರಾಶಿ ಚಿನ್ನಾಭರಣದ ಗೊಂಚಲು.. ಲೋಕಾಯುಕ್ತ ಅಧಿಕಾರಿಗಳೇ ಬೆರಗಾದ್ರು..
ವೀಕ್ಷಕರು ಈ ಸೀನ್ ಅನ್ನು ನೋಡಿ ಸಖತ್ ಎಂಜಾಯ್ ಮಾಡಿದ್ದಾರೆ. ಇನ್ನೂ, ಶೂಟಿಂಗ್ ವೇಳೆ ನಡೆದ ಸೀನ್ ಸಖತ್ ಮಜವಾಗಿದೆ. ಭಾಗ್ಯಲಕ್ಷ್ಮೀ ಸೀರಿಯಲ್ ನಟಿ ಪದ್ಮಜಾ ರಾವ್ ಅವರ ಮನೆಯಲ್ಲಿ ಶೂಟಿಂಗ್ ನಡಿದಿದೆ. ಭವ್ಯಾ-ಕಿರಣ್ ಸಖತ್ ಎಂಜಾಯ್ ಮಾಡ್ತಾ ಪಾತ್ರಕ್ಕೆ ಜೀವ ತುಂಬಿದ್ದಾರೆ.
ನಿನ್ನೆ ಸಂಚಿಕೆನೂ ಅಷ್ಟೇ ಸೂಪರ್ ಆಗಿ ಮೂಡಿ ಬಂದಿದೆ. ನಿಧಿ ಶ್ರೀಕೃಷ್ಣನ ಭಕ್ತೆ. ಕರ್ಣನಿಗೆ ಕಾಲ್ ಮಾಡ್ಬೇಕು ಅಂತ ಹಂಬಲಿಸುತ್ತಿದ್ದ ನಿಧಿಗೆ ಅಕ್ಕಾ ನಿತ್ಯಾ ಕಾಲ್ ಮಾಡೋಕೆ ದಾರಿ ಮಾಡಿಕೊಟ್ಟಳು. ಆಗ ಕೃಷ್ಣನ ವೇಷದಲ್ಲಿ ನಮ್ರತಾ ಕಾಣಿಸಿಕೊಂಡಿದ್ದು ಚಂದವಾಗಿತ್ತು. ಕಿರಣ್ ರಾಜ್ಗೂ ಕೃಷ್ಣನ ವೇಷ ತೋಡಿಸಿದ್ರು, ಭವ್ಯಾ ರಾಧೆಯ ರೂಪದಲ್ಲಿ ಪ್ರೀತಿಯ ಮೆರವಣಿಗೆ ಹೊರಟಿದ್ದರು.
ಒಟ್ಟಿನಲ್ಲಿ ಕೃಷ್ಣನನ್ನ ರಾಧೆ ಆರಾಧಿಸೋ ರೀತಿ ಕರ್ಣನನ್ನ ಮನದಲ್ಲೇ ಹಚ್ಚಿಕೊಂಡಿರೋ ನಿಧಿಗೆ ಬಿಗ್ ಶಾಕ್ ಎದುರಾಗಲಿದೆ. ಕಾಲೇಜಿನ ತುಂಬಾ ಕರ್ಣ-ನಿಧಿ ಬಗ್ಗೆ ಕೆಟ್ಟದಾಗಿ ಬಿಂಬಿಸೋ ಫೋಟೋಗಳನ್ನ ಅಂಟಿಸಿದ್ದಾನೆ ಕರ್ಣನ ತಮ್ಮ ಸಂಜು. ಇದಕ್ಕೆ ಕರ್ಣ ತಿರುಗೇಟು ಕೊಡ್ತಾನಾ? ಹೀಗಾಗಿ ಕರ್ಣ ಸೀರಿಯಲ್ ಮುಂದಿನ ನೋಡಲು ವೀಕ್ಷಕರಲ್ಲಿ ಕುತೂಹಲ ಹೆಚ್ಚಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ