ಲಕ್ಷ್ಮೀ ಬಾರಮ್ಮ ವೀಕ್ಷಕರಿಗೆ ಶಾಕಿಂಗ್ ಸುದ್ದಿ; ಮುಕ್ತಾಯದ ಹಂತದಲ್ಲಿದೆ ಟಾಪ್ ಸೀರಿಯಲ್​

author-image
Veena Gangani
Updated On
ಲಕ್ಷ್ಮೀ ಬಾರಮ್ಮ ವೀಕ್ಷಕರಿಗೆ ಶಾಕಿಂಗ್ ಸುದ್ದಿ; ಮುಕ್ತಾಯದ ಹಂತದಲ್ಲಿದೆ ಟಾಪ್ ಸೀರಿಯಲ್​
Advertisment
  • ಇದ್ದಕ್ಕಿದ್ದಂತೆ ಲಕ್ಷ್ಮೀ ಬಾರಮ್ಮ ಸೀರಿಯಲ್​ ಮುಕ್ತಾಯ ಏಕೆ?
  • ಲಕ್ಷ್ಮೀ ಬಾರಮ್ಮ ಸೀರಿಯಲ್​ ವೀಕ್ಷಕರಿಗೆ ಶಾಕ್​ ಮೇಲೆ ಶಾಕ್​
  • ಕೆಲವೇ ದಿನಗಳಲ್ಲಿ ಟಾಪ್​ ಸೀರಿಯಲ್‌ ತೆರೆ ಬೀಳೋದು ಪಕ್ಕಾ

ಇದು ನಿಜಕ್ಕೂ ವೀಕ್ಷಕರಿಗೆ ಶಾಕಿಂಗ್ ಸುದ್ದಿ ಅಂತಲೇ ಹೇಳಬಹುದು. ವೀಕ್ಷಕರು ತುಂಬಾ ಇಷ್ಟಪಟ್ಟ, ಇವತ್ತಿಗೂ ಪ್ರೀತಿಯಿಂದ ನೋಡುತ್ತಿರೋ ಲಕ್ಷ್ಮೀ ಬಾರಮ್ಮ ಸೀರಿಯಲ್ ತಂಡದಿಂದ ಬ್ಯಾಡ್ ನ್ಯೂಸ್​ ಸಿಕ್ಕಿದೆ. ಪ್ರತಿ ದಿನ ನೀವು ನೋಡೋ ನಿಮ್ಮ ನೆಚ್ಚಿನ ಸೀರಿಯಲ್ ಇದು. ವೈಷ್ಣವ್‌, ಲಕ್ಷ್ಮೀ ಮತ್ತು ಕಾವೇರಿ ನಡುವೆ ನಡೆದ ಅದೆಷ್ಟೋ ಕಲಹಗಳನ್ನ ನೀವು ನೋಡಿದ್ದೀರಿ, ಬೈದಿದ್ದೀರಿ, ಹಲವು ಬಾರಿ ಖುಷಿಪಟ್ಟಿದ್ದೀರಿ. ಆದ್ರೆ, ಕೆಲವೇ ದಿನಗಳಲ್ಲಿ ಇದೆಲ್ಲಾದ್ದಕ್ಕೂ ಫುಲ್‌ಸ್ಟಾಪ್ ಬೀಳಲಿದೆ.

ಇದನ್ನೂ ಓದಿ:ಬಾಹುಬಲಿ ನಟನಿಗೆ ಕಂಕಣ ಭಾಗ್ಯ.. ಉದ್ಯಮಿ ಮಗಳ ಜೊತೆ ಪ್ರಭಾಸ್ ಮದುವೆ..?

publive-image

ಹೌದು, ಲಕ್ಷ್ಮೀ ಬಾರಮ್ಮ ಸೀರಿಯಲ್‌ ಮುಕ್ತಾಯ ಆಗುತ್ತಿದೆ. ಅದು ಇದ್ದಕ್ಕಿದ್ದಂತೆ ಅನ್ನೋದೇ ಮಹದಾಶ್ಚರ್ಯ. ಈ ಹಿಂದೆ ವೀಕ್ಷಕರಿಗೆ ಅಷ್ಟು ಚೆನ್ನಾಗಿ ನಡಿತಿರೋ ಸೀರಿಯಲ್‌ನ ಯಾಕೆ ವೈಂಡಪ್ ಮಾಡ್ತಿದ್ದಾರೆ ಅನ್ನೋ ಪ್ರಶ್ನೆ ಮೂಡಿತ್ತು. ಯಾಕಂದ್ರೆ, ಕಳೆದ ವಾರದ ರೇಟಿಂಗ್ ಲಿಸ್ಟ್‌ನಲ್ಲೂ ಲಕ್ಷ್ಮೀ ಬಾರಮ್ಮ ಒಳ್ಳೆ ಸ್ಕೋರ್ ಮಾಡಿತ್ತು. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಈ ಸೀರಿಯಲ್ ಬಗ್ಗೆ ನೆಗೆಟಿವ್ ಕೇಳಿದ್ದು ತೀರ ಕಡಿಮೆ. ಆದರೂ ವೈಂಡಪ್ ಯಾಕೆ ಆಗ್ತಿದೆ ಅನ್ನೋದೇ ಇಂಟರೆಸ್ಟಿಂಗ್‌.

publive-image

ಒಂದು ಸೀರಿಯಲ್ ವೈಂಡಪ್ ಮಾಡೋಕೆ ನಾನಾ ಕಾರಣಗಳು ಇರುತ್ತವೆ. ಆದ್ರೆ, ಈ ಸೀರಿಯಲ್‌ಗೆ ರೇಟಿಂಗ್ ಸಮಸ್ಯೆಯಾಗಿದೆ ಅನ್ನೋದು ಮೇಲ್ನೋಟಕ್ಕೆ ಕಾಣಿಸ್ತಿಲ್ಲ. ಲಾಸ್ಟ್ ವೀಕ್ ರೂರಲ್ ಮತ್ತು ಅರ್ಬನ್‌ ಒಟ್ಟು ಸೇರಿ 5.1 ಟಿವಿಆರ್‌ ಇತ್ತು. ನಿರಂತರವಾಗಿ ಈ ಸ್ಲಾಟ್‌ನಲ್ಲಿ ಈ ಸೀರಿಯಲ್‌ ಒಳ್ಳೆ ಸ್ಕೋರ್ ಮಾಡ್ತಾನೇ ಬಂದಿದೆ. ಆದರೆ ಈ ಸೀರಿಯಲ್‌ಗೆ ಸಮಸ್ಯೆಯಾಗಿದ್ದು, ಕಥೆ ಮತ್ತು ಕೆಲ ಕಲಾವಿದರು ಅನ್ನೋ ಮಾಹಿತಿ ನಮಗೆ ಸಿಕ್ಕಿದೆ.

publive-image

ಹೌದು, ಮುಂದಿನ ಹಂತದಲ್ಲಿ ಕಥೆಯನ್ನ ಯಾವ ರೀತಿ ತೆಗೆದುಕೊಂಡು ಹೋಗ್ಬೇಕು? ವೀಕ್ಷಕರಿಗೆ ಇಷ್ಟವಾಗೋ ರೀತಿಯಲ್ಲಿ ಹೇಗೆ ತೆಗೆದುಕೊಂಡು ಹೋಗ್ಬೇಕು ಅನ್ನೋ ಬಗ್ಗೆ ಕ್ಲಾರಿಟಿ ಸಿಗ್ಲಿಲ್ಲ ಅನ್ನೋ ಮಾತುಗಳು ಕೇಳಿಬರ್ತಿವೆ. ಹೀಗಾಗಿಯೇ ಚಾನಲ್ ವೈಂಡಪ್ ಮಾಡೋಣ ಅಂತಾ ಡಿಸೈಡ್ ಮಾಡಿದೆಯಂತೆ. ಈಗಾಗಲೇ ಶೂಟಿಂಗ್ ಕೂಡ ಕಂಪ್ಲೀಟ್ ಆಗಿದೆ. ಹೆಚ್ಚೆಂದರೇ ಇನ್ನೊಂದು ವಾರ ಈ ಸೀರಿಯಲ್‌ ಟೆಲಿಕಾಸ್ಟ್ ಆಗಬಹುದು.

publive-image

ಆ ನಂತರ ಲಕ್ಷ್ಮೀ ಬಾರಮ್ಮ ಸೀರಿಯಲ್‌ಗೆ ತೆರೆ ಬೀಳೋದು ಪಕ್ಕಾ. ಅಲ್ಲದೇ, ಈ ಸ್ಲಾಟ್‌ನಲ್ಲಿ ಇನ್ನೂ ಹೆಚ್ಚು ರೇಟಿಂಗ್ ಎಕ್ಸ್‌ಪೆಕ್ಟ್ ಮಾಡ್ತಿರುವ ಸಾಧ್ಯತೆಯೂ ಇದೇ. ಆದ್ರೆ, ಈ ಸ್ಲಾಟ್‌ಗೆ ಯಾವ ಸೀರಿಯಲ್ ಬರಲಿದೆ ಅನ್ನೋ ಕೂತೂಹಲ ಅಂತೂ ಸದ್ಯಕ್ಕಿದೆ.ಕಳೆದ ಮೂರು ವರ್ಷಗಳಿಂದ ಜನರಿಗೆ ತುಂಬಾನೇ ಮನರಂಜನೆ ನೀಡಿದ್ದ ಲಕ್ಷ್ಮೀ ಬಾರಮ್ಮ ಸೀರಿಯಲ್ ವೈಂಡಪ್ ಸುದ್ದಿ, ವೀಕ್ಷಕರಿಗೆ, ನಿಜಕ್ಕೂ ಅರಗಿಸಿಕೊಳ್ಳಲಾಗದಂತಹ ಸತ್ಯ ಅಂದ್ರೆ ತಪ್ಪಾಗೋಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment