/newsfirstlive-kannada/media/post_attachments/wp-content/uploads/2025/03/Annayya.jpg)
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರೋ ಅಣ್ಣಯ್ಯ ಸೀರಿಯಲ್ ವೀಕ್ಷಕರ ಮನಸ್ಸಿನಲ್ಲಿ ಹಚ್ಚ ಹಸಿರಾಗಿ ಉಳಿದುಕೊಂಡಿದೆ. ತೆರೆಗೆ ಬಂದ ಕೆಲವೇ ದಿನಗಳಲ್ಲಿ ವಿಕ್ಷಕರ ಹೃದಯ ಗೆದ್ದುಕೊಂಡು ಮುಂದೆ ಸಾಗುತ್ತಿದೆ. ಒಂದು ಕಡೆ ಪಾರು ಹಾಗೂ ಶಿವು ಜೋಡಿ ಮೋಡಿ ಮಾಡುತ್ತಿದ್ದರೇ, ಮತ್ತೊಂದು ಕಡೆ ಗುಂಡಮ್ಮ ರಶ್ಮಿ ಮುಂದಿನ ಜೀವನದ ಹೇಗಿರುತ್ತದೆ ಅಂತ ವೀಕ್ಷಕರು ಕಾಯುತ್ತಿದ್ದಾರೆ.
ಇದನ್ನೂ ಓದಿ:ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ಮೊರೆ ಹೋದ ಬಾಲಿವುಡ್ ನಟಿ ಕತ್ರಿನಾ ಕೈಫ್; ಫೋಟೋ ಇಲ್ಲಿದೆ!
ಏಕೆಂದರೆ ಗುಂಡಮ್ಮ ಹಾಗೂ ಸೀನನಿಗೆ ಒಬ್ಬರು ಕಂಡರೆ ಮತ್ತೊಬ್ಬರಿಗೆ ಆಗೋದಿಲ್ಲ. ಹೀಗಾಗಿ ಈ ಜೋಡಿ ಹೇಗೆ ಸಂಸಾರ ಮಾಡುತ್ತಿದೆ ಎಂದು ಅಂದಾಜಿಸುತ್ತಿದ್ದಾಗಲೇ ಕಳಸೇಗೌಡ ವಿರುದ್ಧ ತಿರುಗಿ ಬಿದ್ದಿದ್ದಾಳೆ ಗುಂಡಮ್ಮ. ಹೌದು, ಸದ್ಯ ಅಣ್ಣಯ್ಯ ಸೀರಿಯಲ್ ವೀಕ್ಷಕರಿಗೆ ಮಸ್ತ್ ಮನರಂಜನೆ ನೀಡುತ್ತಿದೆ. ಅದರಲ್ಲೂ ಗುಂಡಮ್ಮಹಾಗೂ ಸೀನನ ಕಾಂಬಿನೇಷನ್ಗೆ ವೀಕ್ಷಕರು ಫುಲ್ ಮಾಕ್ಸ್ ನೀಡುತ್ತಿದ್ದಾರೆ.
View this post on Instagram
ಇನ್ನೂ, ಸೀನ ಈ ಹಿಂದೆ ಇನ್ನೊಂದು ಹುಡುಗಿಯನ್ನು ಪ್ರೀತಿ ಮಾಡುತ್ತಿದ್ದ ವಿಚಾರ ಗುಂಡಮ್ಮನಿಗೆ ಗೊತ್ತಿಲ್ಲ. ಇದೇ ವಿಚಾರದ ಬಗ್ಗೆ ಮಾತಾಡೋದಕ್ಕೆ ಸೀನನ ಮನೆಗೆ ಕಳಸೇಗೌಡ ಬಂದಿದ್ದಾನೆ. ಆಗ ಗುಂಡಮ್ಮನ ಎದುರೆ ಸೀನನ ಮೇಲೆ ಏಕಾಏಕಿ ಕೂಗಾಡಿದ್ದಾರೆ. ಆಗ ಸೀನನ ಮೇಲೆ ಕೈ ಮಾಡಲು ಮುಂದಾಗಿದ್ದ ಕಳಸೇಗೌಡ್ರಿಗೆ ಅವಾಜ್ ಹಾಕಿದ್ದಾಳೆ ಗುಂಡಮ್ಮ ಅಲಿಯಾಸ್ ರಶ್ಮಿ. ಆಗ ತನ್ನ ಗಂಡನಿಗೆ ಮರ್ಯಾದೆ ಕೊಡದ ಕಳಸೇಗೌಡನಿಗೆ ಬಾಯಿಗೆ ಬಂದ ಹಾಗೇ ಬೈದು ಕಳುಹಿಸಿದ್ದಾರೆ. ಇದನ್ನೇ ನೋಡಿದ ವೀಕ್ಷಕರು ರಶ್ಮಿ ನಟನೆ ಫುಲ್ ಮಾಕ್ಸ್ ಕೊಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ