newsfirstkannada.com

ರಾಮಾಚಾರಿ ಸೀರಿಯಲ್​ಗೆ ಕನ್ನಡಿಗರು ಕೊಟ್ಟ ಮಾರ್ಕ್ಸ್​​ ಎಷ್ಟು?

Share :

Published March 15, 2024 at 5:54am

  ರಾಮಾಚಾರಿ ಸೀರಿಯಲ್​ಗೆ ವೀಕ್ಷಕರಿಂದ ಬರ್ತಿದೆ ಅದ್ಭುತ ರೆಸ್ಪಾನ್ಸ್

  ರಾಮಾಚಾರಿ, ಕೆಕೆ ಬದುಕಿನ ಸತ್ಯಗಳು ಗೊತ್ತಾಗುವ ಸಮಯ ಹತ್ತಿರ

  ಅಣ್ಣ ತಮ್ಮ ಎರಡು ಪಾತ್ರದ ಜುಗಲ್​​ ಬಂದಿಗೆ ಉತ್ತಮ ರೇಟಿಂಗ್​

ರಾಮಾಚಾರಿ ಧಾರಾವಾಹಿಯಲ್ಲಿ ಇತ್ತಿಚೆಗೆ ಶುರುವಾಗಿದ್ದ ಎರಡು ಶೇಡ್​ನ ಪಾತ್ರ ರೋಚಕ ಘಟ್ಟದಲ್ಲಿದೆ. ರಾಮಾಚಾರಿಗೆ ಕೆಟ್ಟ ಹೆಸರು ತಂದು ಈ ಇಬ್ಬರ ಸಂಸಾರವನ್ನು ಹಾಳು ಮಾಡಬೇಕು ಅಂತಾ ಅಂದುಕೊಂಡಿದ್ದ ಮಾನ್ಯತಾ ಪ್ಲ್ಯಾನ್​ ಪ್ಲಾಫ್​ ಆಗಿದೆ. ಪರಿಸ್ಥಿತಿ ಕಳೆದು ಹೋಗಿದ್ದು ಅಣ್ಣ-ತಮ್ಮ ಒಂದಾಗುವಂತೆ ಮಾಡಿದೆ.

ಇನ್ನೂ, ಈ ಧಾರಾವಾಹಿ ಸಂಚಿಕೆಗಳು ರೋಚಕವಾಗಿ ಮೂಡಿಬರುತ್ತಿದ್ದು, ಅಣ್ಣ ರಾಮಾಚಾರಿಗಾಗಿ ಕೆಕೆ ಹೋರಾಟ ಮಾಡ್ತಿದ್ದಾನೆ. ಅಮ್ಮನಿಗೆ ಕೊಟ್ಟ ಮಾತನ್ನ ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾನೆ. ಮತ್ತೊಂದು ಕಡೆ ರಾಮಾಚಾರಿ ಪ್ರಾಣ ಉಳಿಸಲು ಚಾರು ಗುರುಗಳ ಆಶ್ರಮಕ್ಕೆ ಕರೆದುಕೊಂಡು ಹೋಗಿದ್ದಾಳೆ. ರಾಮಾಚಾರಿಯನ್ನ ಆಸ್ಪತ್ರೆಯಿಂದ ಕರೆದುಕೊಂಡು ಹೋಗೋದು ಹಾಗೂ ಆ್ಯಂಬುಲೆನ್ಸ್​ನಲ್ಲಿ ನಡೆದ ಫೈಟಿಂಗ್​ ಸೀನ್ಸ್ ಚಿತ್ರೀಕರಣ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ.

ರಾಮಾಚಾರಿ ಹಾಗೂ ಕೆಕೆ ಬದುಕಿನ ಸತ್ಯಗಳು ಗೊತ್ತಾಗುವ ಸಮಯ ಹತ್ತಿರ ಬರುತ್ತಿದೆ. ಸದ್ಯದಲ್ಲೇ ಡಬಲ್​ ಪಾತ್ರ ಮುಕ್ತಾಯವಾಗೋ ಚಾನ್ಸ್​ ಇದೆ. ಕೆಕೆ ಜೈಲಿಗೆ ಹೋದರೆ ರಾಮಾಚಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಹೀಗಾಗಿ ಕೆಕೆ ಪಾತ್ರ ಅಂತ್ಯವಾಗೋ ಚಾನ್ಸ್​ ಇದೆ. ಈ ಎರಡು ಪಾತ್ರದ ಜುಗಲ್​​ ಬಂದಿಗೆ ಉತ್ತಮ ರೇಟಿಂಗ್​ ಬರ್ತಿದೆ. ವೀಕ್ಷಕರು ಅದ್ಭುತ ರೀತಿಯಲ್ಲಿ ಕಥೆಯ ತಿರುವನ್ನ ಸ್ವೀಕರಿಸಿದ್ರು. ಅದರ ಪ್ರತಿಫಲ ಟಿಆರ್​ಪಿ ಹೆಚ್ಚಿದೆ. ರಾಮಾಚಾರಿ ಹಾಗೂ ಕೆಕೆ ಕಾಂಬಿನೇಷನ್​ ಸೂಪರ್​ ಹಿಟ್​ ಆಗಿದ್ದು, ಕಥೆಯಲ್ಲಿ ಮತ್ತಷ್ಟು ತಿರುವುಗಳು ತೆರೆದುಕೊಳ್ಳಲಿವೆ ನಿರೀಕ್ಷಿಸಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಮಾಚಾರಿ ಸೀರಿಯಲ್​ಗೆ ಕನ್ನಡಿಗರು ಕೊಟ್ಟ ಮಾರ್ಕ್ಸ್​​ ಎಷ್ಟು?

https://newsfirstlive.com/wp-content/uploads/2024/03/RAMACHARI-3.jpg

Load More