newsfirstkannada.com

ಚೆನ್ನೈನಲ್ಲಿ ವಿಘ್ನೇಶ್, ಕೋಲ್ಕತ್ತಾದಲ್ಲಿ ಅನ್ಮೂಲ್ ಕುಲಕರ್ಣಿ.. ಬೆಂಗಳೂರು ಕೆಫೆ ಬ್ಲಾಸ್ಟ್​ ಮಾಸ್ಟರ್​ ಮೈಂಡ್​​ನ ಬಣ್ಣ ಬಣ್ಣ ಹೆಸರುಗಳಿವು!

Share :

Published April 13, 2024 at 10:40am

Update April 13, 2024 at 10:44am

    ನಾನಾ ಹೆಸರುಗಳನ್ನು ಇಟ್ಟುಕೊಂಡಿದ್ದ ಅಬ್ದುಲ್ ಮತೀನ್ ತಾಹ

    ಕೆಫೆ ಬ್ಲಾಸ್ಟ್​ ಮಾಸ್ಟರ್​ ಮೈಂಡ್​ ಸಿಕ್ಕಿಬೀಳಲು ಸುಳಿವು ಕೊಟ್ಟಿತ್ತು ಆ ಸಂಖ್ಯೆ

    ಆತ ಪಶ್ಚಿಮ ಬಂಗಾಳದಲ್ಲಿ ಇದ್ದಾನೆಂದು NIA ತಿಳಿದಿದ್ದು ಹೇಗೆ ಗೊತ್ತಾ?

ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ ಮಾಸ್ಟರ್​ ಮೈಂಡ್​ ಅಬ್ದುಲ್ ಮತೀನ್ ತಾಹ ಮತ್ತು ಮುಸಾವೀರ್ ಹುಸೇನ್ ಶಾಜೀಬ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಸದ್ಯ ಆತನ ವಿಚಾರಣೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಇಬ್ಬರ ಒಂದೊಂದೇ ಮುಖವಾಡಗಳು ಕಳಚಿಕೊಳ್ಳುತ್ತಿವೆ. ಒಂದಲ್ಲಾ, ಎರಡಲ್ಲಾ ನಾನಾ ಹೆಸರುಗಳಿಂದ ತಲೆಮರೆಸಿಕೊಂಡಿದ್ದ ಈ ಉಗ್ರರ ಹಿನ್ನೆಲೆಯೇ ವಿಚಿತ್ರವಾಗಿದೆ. ಬೇರೆ ಬೇರೆ ರಾಜ್ಯಗಳಲ್ಲಿ ತಲೆಮರೆಸಿಕೊಳ್ಳಲು ನಕಲಿ ಆಧಾರ್​​ ಕಾರ್ಡ್​ ಕೂಡ ಬಳಸಿರೋದು ಬೆಳಕಿಗೆ ಬಂದಿದೆ.

ಉಗ್ರನ ನಾನಾ ಹೆಸರುಗಳು

ಅಬ್ದುಲ್ ಮತೀನ್ ತಾಹ ಈತನ ಓರಿಜಿನಲ್​ ಹೆಸರಾದರೆ, ಚೆನ್ನೈನಲ್ಲಿ ತಲೆಮರೆಸಿಕೊಳ್ಳಲು ಈ ಉಗ್ರ ವಿಘ್ನೇಶ್ ಎಂದು ಹೆಸರನ್ನಿಟ್ಟುಕೊಂಡಿದ್ದ. ಕೋಲ್ಕತ್ತಾದಲ್ಲಿ ಅನ್ಮೂಲ್ ಕುಲಕರ್ಣಿ ಎಂದು ಓಡಾಡಿಕೊಂಡಿದ್ದ. ಇತ್ತ ಮುಸಾವೀರ್ ಹುಸೇನ್ ಶಾಜೀಬ್ ಚೆನ್ನೈನಲ್ಲಿ ಮಹಮ್ಮದ್ ಜುನೈದ್ ಸೈಯದ್,ಕೊಲ್ಕತ್ತಾದಲ್ಲಿ ಯುಶು ಶಹನವಾಜ್ ಪಾಟೀಲ್ ಎಂಬ ಹೆಸರುಗಳನ್ನು ಇಟ್ಟುಕೊಂಡು ತಲೆಮರೆಸಿಕೊಂಡಿದ್ದರು.

ಹೀಗೆ ಒಂದೊಂದು ಕಡೆ ಒಂದೊಂದು ಹೆಸರಲ್ಲಿ ಆರೋಪಿಗಳು ವಾಸವಿದ್ದರು. ನಕಲಿ ಅಧಾರ್ ಕಾರ್ಡ್ ಬಳಸಿಕೊಂಡಿದ್ದ. ಆರೋಪಿಗಳ ಬಂಧನಕ್ಕೆ ಇದೇ ನಕಲಿ ಆಧಾರ್​​ ಕಾರ್ಡ್​ ಬಹು ಮುಖ್ಯ ಕಾರಣವಾಗಿದೆ.

ಇದನ್ನೂ ಓದಿ: ಕೆಫೆ ಸ್ಫೋಟದ ಮಾಸ್ಟರ್ ಮೈಂಡ್​​ನ ತಂದೆ ದೇಶಕ್ಕಾಗಿ ಹೋರಾಡಿದ ಯೋಧ.. ದೇಶದ್ರೋಹಿಯಾದ ಮಗ..!

ನಕಲಿ ಆಧಾರ್​ಕಾರ್ಡ್​ನಿಂದ ಸಿಕ್ಕಿಬಿದ್ದ

ಇನ್ನು ಪಶ್ಚಿಮ ಬಂಗಾಳದಲ್ಲಿ ನಕಲಿ ಆಧಾರ್ ಕಾರ್ಡ್ ಬಳಕೆದಾರರ ಸಂಖ್ಯೆ ಹೆಚ್ಚಿದೆ. ಒರಿಸ್ಸಾ ಹಾಗೂ ಪಶ್ಚಿಮ ಬಂಗಾಳದಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ನಕಲಿ ಅಧಾರ್ ಕಾರ್ಡ್ ಬಳಸುತ್ತಾರೆ. ಹೀಗಾಗಿ ಇವರು ಇದೇ ಭಾಗಗಳಲ್ಲಿ ಇರಬಹುದ ಎನ್ನುವ ಶಂಕೆ ಇತ್ತು. ಇದೆ ಆಧಾರದಲ್ಲಿ NIA ಕಾರ್ಯಾಚರಣೆ ಮುಂದುವರೆಸಿತ್ತು. ಕೊನೆಹೆ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಪೊಲೀಸರು ಹೆಡೆಮುರಿಕಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚೆನ್ನೈನಲ್ಲಿ ವಿಘ್ನೇಶ್, ಕೋಲ್ಕತ್ತಾದಲ್ಲಿ ಅನ್ಮೂಲ್ ಕುಲಕರ್ಣಿ.. ಬೆಂಗಳೂರು ಕೆಫೆ ಬ್ಲಾಸ್ಟ್​ ಮಾಸ್ಟರ್​ ಮೈಂಡ್​​ನ ಬಣ್ಣ ಬಣ್ಣ ಹೆಸರುಗಳಿವು!

https://newsfirstlive.com/wp-content/uploads/2024/04/RAMESHAR-CAFE.jpg

Load More