/newsfirstlive-kannada/media/post_attachments/wp-content/uploads/2025/03/vignesh_puthur_SURYA.jpg)
ವಿಘ್ನೇಶ್ ಪುತೂರ್ ಸದ್ಯದ ಐಪಿಎಲ್​ ಟೂರ್ನಿಯ ಹಾಟ್ ಟಾಫಿಕ್ ಆಗಿದ್ದಾರೆ. ಚೆನ್ನೈ ವಿರುದ್ಧದ ಡೆಬ್ಯೂ ಪಂದ್ಯದಲ್ಲೇ ವಿಘ್ನೇಶ್ ಪುತೂರ್ ಸಂಚಲನ ಸೃಷ್ಟಿಸಿದ್ದಾರೆ. ಈ ಯುವ ಆಟಗಾರನ ಸ್ಪಿನ್ ಮೋಡಿ ಹೇಗಿತ್ತು ಎಂದರೆ ಎದುರಾಳಿಯ ಬಲಿಷ್ಠ 3 ವಿಕೆಟ್​ ಪಡೆದು ಗೆಲುವನ್ನು ಕಸಿದುಕೊಳ್ಳುವ ಹಂತಕ್ಕೆ ಹೋಗಿತ್ತು. ಈ ಯಂಗ್ ಸ್ಪಿನ್ನರ್ ತಂದೆ ಜೀವನಕ್ಕಾಗಿ ಈಗಲೂ ಆಟೋ ಡ್ರೈವ್ ಮಾಡ್ತಾರಂತೆ.
ಚೊಚ್ಚಲ ಪಂದ್ಯದಲ್ಲೇ ವಿಘ್ನೇಶ್ ಪುತೂರ್ ಅವರು ಎಂ.ಎಸ್​ ಧೋನಿ, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ ಸೇರಿದಂತೆ ಎಲ್ಲರಿಂದಲೂ ಮೆಚ್ಚುಗೆ ಗಳಿಸಿದ್ದಾರೆ. ಅದರಲ್ಲಿ ಮುಂಬೈ ಫ್ರಾಂಚೈಸಿಯ ಓನರ್ ನಿತಾ ಅಂಬಾನಿ ಅವರಿಂದಲೂ ಬಹುಮಾನ ಕೂಡ ಪಡೆದುಕೊಂಡಿದ್ದಾರೆ. ಇವೆಲ್ಲಾ ವಿಘ್ನೇಶ್ ಪುತೂರ್ ಅವರ ಜೀವನದಲ ಅಮೂಲ್ಯ ಕ್ಷಣಗಳು ಎನ್ನಬಹುದು.
ತಮ್ಮ ಕುಟುಂಬವನ್ನು ಆರ್ಥಿಕ ಸಂಕಷ್ಟದಿಂದ ಮೇಲೆತ್ತಲು ವಿಘ್ನೇಶ್ ಪುತೂರ್ ಸಾಕಷ್ಟು ಕಷ್ಟ ಪಡುತ್ತಿದ್ದರು. ತಂದೆ ಸುನೀಲ್ ಕುಮಾರ್ ಅವರು ಕುಟುಂಬ ನಿರ್ವಹಣೆಗಾಗಿ ಆಟೋ ಚಾಲನೆ ಮಾಡುತ್ತ ಮಗನ ಕ್ರಿಕೆಟ್​ಗೂ ಹೊತ್ತು ಕೊಟ್ಟಿದ್ದರು. ತಾಯಿ ಕೆ.ಪಿ ಬಿಂದು ಗೃಹಿಣಿ ಆಗಿದ್ದಾರೆ. ತಂದೆ, ತಾಯಿಯ ಶ್ರಮ ಹಾಗೂ ಪ್ರೋತ್ಸಾಹದಿಂದ ಇಂದು ವಿಘ್ನೇಶ್ ಪುತೂರ್ ಐಪಿಎಲ್​ನಲ್ಲಿ ಒಂದು ಒಳ್ಳೆಯ ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ: KL Rahul vs LSG; ಸಂಜೀವ್ ಗೋಯೆಂಕಗೆ ಬ್ಯಾಟ್​ನಿಂದಲೇ ಕೌಂಟರ್​ ಕೊಡ್ತಾರಾ ಕನ್ನಡಿಗ?
/newsfirstlive-kannada/media/post_attachments/wp-content/uploads/2025/03/vignesh_puthur.jpg)
ತಮ್ಮ ಕುಟುಂಬವನ್ನು ಆರ್ಥಿಕ ಸಂಕಷ್ಟದಿಂದ ಮೇಲೆತ್ತುವಲ್ಲಿ ವಿಘ್ನೇಶ್ ಪುತೂರ್ ಪ್ರಸ್ತುತ ಆಧಾರ ಸ್ತಂಭವಾಗಿದ್ದಾರೆ. ಐಪಿಎಲ್​ ಮೂಲಕ ತಂದೆ, ತಾಯಿ ಕಷ್ಟಕ್ಕೆ ನೆರವಾಗಿದ್ದಾರೆ. ಸತತ ಪರಿಶ್ರಮದಿಂದ ಇಂದು ಯಶಸ್ಸಿನ ಕದ ತಟ್ಟಿದ್ದಾರೆ. ಇದೀಗ 24 ವರ್ಷ ತುಂಬಿರುವ ವಿಘ್ನೇಶ್ ಪುತೂರ್ ಅವರ ಕ್ರಿಕೆಟ್ ವೃತ್ತಿ ಜೀವನ ಇನ್ನಷ್ಟು ಉಜ್ವಲವಾಗಿ ಬೆಳಗಲಿ ಎಂದು ಹಾರೈಸೋಣ.
ವಿಘ್ನೇಶ್ ಹೆಸರಿನ ಜೊತೆ ಪುತೂರ್ ಸೇರಿದ್ದರಿಂದ ಈ ಯಂಗ್ ಪ್ಲೇಯರ್ ಕರ್ನಾಟಕದ ಪುತ್ತೂರು ಎಂದು ತಿಳಿಯಬೇಡಿ. ಕೇರಳದ ಮಲ್ಲಪುರಂನಲ್ಲಿ ಪುತೂರ್ ಎನ್ನುವ ಊರಿದೆ. ಅಲ್ಲಿಗೆ ಸೇರಿದವರೇ ಈ ವಿಘ್ನೇಶ್. ಚೆನ್ನೈ ವಿರುದ್ಧ ಮುಂಬೈ ಪರ ಕಣಕ್ಕೆ ಇಳಿದ ಯಂಗ್ ಸ್ಪಿನ್ನರ್ ಕೇವಲ 4 ಓವರ್ ಮಾಡಿ 32 ರನ್ ನೀಡಿ ಗಾಯಕ್ವಾಡ್, ಶಿವಂ ದುಬೆ ಹಾಗೂ ದೀಪಕ್ ಹೂಡಾರಂತಹ ಪ್ರಮುಖ ಮೂರು ವಿಕೆಟ್ ಪಡೆದು ಸೆಲೆಬ್ರೆಷನ್ ಮಾಡಿದರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us