ವಿಘ್ನೇಶ್ ಪುತೂರು ಇಂಪ್ಯಾಕ್ಟ್ ಡೆಬ್ಯು ಹಿಂದಿನ ಅಸಲಿ ಕಾರಣ ರಿವೀಲ್..!

author-image
Ganesh
Updated On
ವಿಘ್ನೇಶ್ ಪುತೂರು ಇಂಪ್ಯಾಕ್ಟ್ ಡೆಬ್ಯು ಹಿಂದಿನ ಅಸಲಿ ಕಾರಣ ರಿವೀಲ್..!
Advertisment
  • ಚೆನ್ನೈ ಎದುರು ವಿಘ್ನೇಶ್‌ ಪುತ್ತೂರು ಕಮಾಲ್
  • ಡೆಬ್ಯೂ ಮ್ಯಾಚ್​ನಲ್ಲೇ ವಿಘ್ನೇಶ್‌ ಸೆನ್ಸೇಷನ್
  • ಮ್ಯಾಚ್ ಗೆಲ್ಲಲಿಲ್ಲ.. ಧೋನಿ ಮನ ಗೆದ್ದ ವಿಘ್ನೇಶ್

ಮುಂಬೈ ಇಂಡಿಯನ್ಸ್​.. ಐಪಿಎಲ್​ ಇತಿಹಾಸದ ಗ್ರೇಟೆಸ್ಟ್​ ಟೀಮ್​. ಬರೋಬ್ಬರಿ 5 ಐಪಿಎಲ್​​ ಟ್ರೋಫಿ ಗೆದ್ದಿರೋ ಮುಂಬೈ ಐಪಿಎಲ್​​ನ ಅಧಿಪತಿ. ಅಷ್ಟೇ ಅಲ್ಲ, ಟೀಮ್ ಇಂಡಿಯಾಗೆ ಅಸಂಖ್ಯಾತ ಪ್ರತಿಭೆಗಳನ್ನು ನೀಡಿದ ತಂಡವೂ ಇದೇ. ಹಾರ್ದಿಕ್ ಪಾಂಡ್ಯ, ಜಸ್​ಪ್ರೀತ್​​​ ಬೂಮ್ರಾ ಇದಕ್ಕೆ ಬೆಸ್ಟ್ ಎಕ್ಸಾಂಪಲ್.

ಟ್ಯಾಲೆಂಟ್​​ ಹಂಟ್ ಮಾಡೋದ್ರಲ್ಲಿ ಮುಂಬೈ ಎಂದಿಗೂ ಮುಂದಿರುತ್ತೆ. ಬೂಮ್ರಾ, ಹಾರ್ದಿಕ್‌ ಪಾಂಡ್ಯರಂತಹ ಆಟಗಾರರನ್ನ ಗ್ರೌಂಡ್‌ ಲೆವೆಲ್​ನಿಂದಲೇ ತಯಾರಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಂತೆ ಮಾಡಿದ ಕೀರ್ತಿ ಮುಂಬೈ ಇಂಡಿಯನ್ಸ್​ಗೆ ಸಲ್ಲುತ್ತೆ. ತಿಲಕ್​​ ವರ್ಮಾ, ನಮನ್​ಧಿರ್​ರಂತ ನೆಕ್ಸ್ಟ್​​ ಲೈನ್​ನ ಸೂಪರ್​ ಸ್ಟಾರ್​ಗಳೂ ಇದೇ ಫ್ರಾಂಚೈಸಿಯಿಂದ ಬಂದವರು. ಇದೀಗ ಸೀಸನ್​​ 18ರ ಮೊದಲ ಪಂದ್ಯದಲ್ಲೇ ಮತ್ತೊಬ್ಬ ಪ್ರಾಮಿಸಿಂಗ್​ ಆಟಗಾರ, ಮಿಸ್ಟ್ರಿ ಮ್ಯಾಚ್ ವಿನ್ನರ್​ನ ಮುಂಬೈ ರೆಡಿ ಮಾಡಿದೆ. ಆತನ ಹೆಸರು ವಿಘ್ನೇಶ್‌ ಪುತ್ತೂರು.

ಪುತ್ತೂರು ಸೂಪರ್​ ಸ್ಪೆಲ್

ಚೆನ್ನೈನ ಚೆಪಾಕ್​ನಲ್ಲಿ ಮುಂಬೈ ಇಂಡಿಯನ್ಸ್​ ಸೋಲಿನ ಮುಖಭಂಗ ಅನುಭವಿಸಿತು. ಮುಂಬೈ ಸೋಲುಂಡರೂ, ಮುಂಬೈನ ಯಂಗ್​​ ಸ್ಪಿನ್ನರ್​ ಇಡೀ ಕ್ರಿಕೆಟ್​ ಜಗತ್ತಿನ ಗಮನ ಸೆಳೆದೆ. ಸೋಲಿನ ನಡುವೆಯೂ ಹೊಸ ಭರವಸೆಯ ಬೆಳಕಾಗಿ ಕಂಡ. ಇಂಪ್ಯಾಕ್ಟ್​ ಪ್ಲೇಯರ್ ಆಗಿ ಡೆಬ್ಯು ಮಾಡಿದ 24 ವರ್ಷದ ಮಿಸ್ಟರಿ ಸ್ಪಿನ್ನರ್ ವಿಘ್ನೇಶ್‌ ಪುತ್ತೂರ್​​​ ಹೊಸ ಸೆನ್ಸೇಷನ್​​​ ಕ್ರಿಯೇಟ್​ ಮಾಡಿದ್ದಾನೆ.

ಇದನ್ನೂ ಓದಿ: ಚೊಚ್ಚಲ ಪಂದ್ಯದಲ್ಲೇ ಮಿಂಚಿನ ಆಟ.. 15 ಎಸೆತದಲ್ಲಿ 39 ರನ್​ ಚಚ್ಚಿದ ವಿಪ್ರಜ್ ನಿಗಮ್ ಯಾರು?

publive-image

ಬೌಲಿಂಗ್​ ವೇಳೆ ರೋಹಿತ್ ಶರ್ಮಾ ಬದಲಿಗೆ ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಅಂಗಳಕ್ಕಿಳಿದ ವಿಘ್ನೇಷ್​, ಚೆನ್ನೈ ಬ್ಯಾಟರ್​​ಗಳನ್ನ ಇನ್ನಿಲ್ಲದೆ ಕಾಡಿದ್ರು. ನಾಯಕ ಋತುರಾಜ್ ಗಾಯಕ್ವಾಡ್, ಶಿವಂ ದುಬೆ, ದೀಪಕ್ ಹೂಡಾರಂಥ ಪ್ರಮುಖ ಆಟಗಾರರ ವಿಕೆಟ್ ಬೇಟೆಯಾಡಿದ್ರು. 4 ಓವರ್​​ಗಳ ಕೋಟಾದಲ್ಲಿ ವೀಘ್ನೇಶ್​, 32 ರನ್ ನೀಡಿ 3 ವಿಕೆಟ್ ಉರುಳಿಸಿ ಗಮನ ಸೆಳೆದರು.

ಮಾಹಿ ಮನ ಗೆದ್ದ ವಿಘ್ನೇಶ್

ವೀಘ್ನೇಶ್ ಅದ್ಭುತ ದಾಳಿ ಸಂಘಟಿಸಿದ್ರೂ ಮುಂಬೈಗೆ ಗೆಲುವು ಮಾತ್ರ ಧಕ್ಕಲಿಲ್ಲ. ಮ್ಯಾಚ್ ಗೆಲ್ಲದಿದ್ದರೂ, ವಿಘ್ನೇಶ್ ಆಟದಿಂದಲೇ ಎಲ್ಲರ ಮನ ಗೆದ್ದ. ಲೆಜೆಂಡ್​ ಮಹೇಂದ್ರ ಸಿಂಗ್​ ಧೋನಿಯೇ ವಿಘ್ನೇಶ್ ಬೌಲಿಂಗ್​ಗೆ ಫಿದಾ ಆದ್ರು. ಗೆಲುವಿನ ಬಳಿಕ ವಿಘ್ನೇಶ್​ ಜೊತೆ ಆತ್ಮೀಯವಾಗಿ ಮಾತನಾಡಿದ ಧೋನಿ ಬೆನ್ನು ತಟ್ಟಿ ಅಭಿನಂದಿಸಿದರು.

publive-image

ಡೆಬ್ಯು ಹಿಂದಿತ್ತು ಪ್ರಮುಖ ಕಾರಣ

ಇಂಪ್ಯಾಕ್ಟ್​ ಪ್ಲೇಯರ್ ಆಗಿ ವೀಘ್ನೇಶ್ ಎಂಟ್ರಿ ನೀಡಿದಾಗ ಎಲ್ಲರಲ್ಲಿದ್ದ ಪ್ರಶ್ನೆ ಯಾರು ಈ ಹುಡುಗ ಅನ್ನೋದಾಗಿತ್ತು. ಇಂತಾ ಬಿಗ್​ ಗೇಮ್​ನಲ್ಲಿ ಯಂಗ್​ ಬಾಯ್​ ಅಗತ್ಯ ಇತ್ತಾ ಅನ್ನೋ ಪ್ರಶ್ನೆಗಳೂ ಹಲವರಲ್ಲಿದ್ವು. ಈತನನ್ನ ಕಣಕ್ಕಿಳಿಸಿದ್ರ ಹಿಂದೆ ಒಂದು ಪ್ರಮುಖ ಕಾರಣವಿತ್ತು. ಅದೇ, ಪಂದ್ಯಕ್ಕೂ ಮುನ್ನ ನಡೆದ ನೆಟ್​​ ಸೆಷನ್​.

ಮುಂಬೈನ ನೆಟ್​​ ಸೆಷನ್​ನಲ್ಲಿ ವಿಘ್ನೇಶ್​ ಮ್ಯಾಜಿಕ್​ ಮುಂದೆ ಮುಂಬೈನ ರೋಹಿತ್​ ಶರ್ಮಾ, ಸೂರ್ಯಕುಮಾರ್​ ಯಾದವ್​, ತಿಲಕ್​ ವರ್ಮಾ ಪರದಾಡಿದ್ರು. ಟಿ20 ಕ್ರಿಕೆಟ್​ನ ಡೇಂಜರಸ್ ಬ್ಯಾಟರ್​ಗಳು 24 ವರ್ಷದ ವೀಘ್ನೇಶ್ ಎಸೆತಗಳನ್ನ ಜಡ್ಜ್​ ಮಾಡೋಕೆ ತಿಣುಕಾಡಿದ್ರು. ಯಂಗ್​​ ಮೆಜಿಶಿಯನ್​, ಮ್ಯಾಜಿಕ್ ಮಾಡಿ ಟಿ20 ಲೋಕದ ಸೂಪರ್​ ಸ್ಟಾರ್​​ಗಳನ್ನೇ ಸೈಲೆಂಟ್​ ಮಾಡಿದ್ದೇ ಪ್ಲೇಯಿಂಗ್​ ಇಲೆವೆನ್​ನ ಡೋರ್​ ಓಪನ್​ ಮಾಡಿತು.

ಯಾರು ಈ ‘ಜಾದೂಗಾರ’?

ವಿಘ್ನೇಶ್ ಪುತ್ತೂರು.. ಬಲಗೈ ಬ್ಯಾಟರ್‌, ಎಡಗೈ ಸ್ಪಿನ್ ಬೌಲರ್... ಕೇರಳದ ಮಲಪ್ಪುರಂ ಜಿಲ್ಲೆಯ ಪೆರಿಂಥಲ್ಮನ್ ನಿವಾಸಿ. ತಂದೆ ಸುನಿಲ್ ಕುಮಾರ್ ಆಟೋರಿಕ್ಷಾ ಚಾಲಕ. ತಾಯಿ ಕೆ.ಪಿ.ಬಿಂದು ಗೃಹಿಣಿ. ಆರ್ಥಿಕ ಸಂಕಷ್ಟದ ನಡುವೆಯೂ ಮಗನ ಕ್ರಿಕೆಟ್​ ಭವಿಷ್ಯಕ್ಕಾಗಿ ಮಲಪ್ಪುರಂನಿಂದ ತ್ರಿಶೂರ್‌ಗೆ ಸ್ಥಳಾಂತರಗೊಂಡರು. ಕಾಲೇಜು ಮಟ್ಟದಲ್ಲಿ ಮೀಡಿಯಮ್ ಪೇಸರ್ ಆಗಿದ್ದ ವಿಘ್ನೇಶ್ ನಂತರ ಸ್ಪಿನ್ನರ್ ಆಗಿ ರೂಪುಗೊಂಡರು.

ಇದನ್ನೂ ಓದಿ: ‘ಕೊಹ್ಲಿ ಮತ್ತು ನಾನು..’ ವಿರಾಟ್ ಜೊತೆಗಿನ ಸ್ನೇಹದ ಬಗ್ಗೆ ತಲಾ ಒಳ್ಳೊಳ್ಳೆ ಮಾತು..!

publive-image

ತ್ರಿಶೂರ್​​ನ ಸೇಂಟ್ ಥಾಮಸ್ ಕಾಲೇಜಿನಲ್ಲಿ ಪರ್ಫಾಮ್​​ ಮಾಡಿ ಗಮನ ಸೆಳೆದಿದ್ದ ವೀಘ್ನೇಶ್, ಕೇರಳ ಪರ ಅಂಡರ್​​ -14, ಅಂಡರ್​​ -19 ಅಂಡರ್​​ -23 ತಂಡಗಳಲ್ಲಿ ಆಡಿದ್ದರು. ಇಲ್ಲಿ ಅದ್ಬುತ ಪ್ರದರ್ಶನ ನೀಡಿದ್ದ ವೀಘ್ನೇಶ್​, ಕೇರಳ ಕ್ರಿಕೆಟ್ ಲೀಗ್‌ನಲ್ಲಿ ಅಲೆಪ್ಪಿ ರಿಪಲ್ಸ್‌ ಆಡಿದರು.

ಬದುಕು ಬದಲಿಸಿದ ಕೇರಳ ಕ್ರಿಕೆಟ್ ಲೀಗ್

ವೀಘ್ನೇಶ್​​ ಕ್ರಿಕೆಟ್ ಕರಿಯರ್​ಗೆ ತಿರುವು ನೀಡಿದ್ದೇ ಕೇರಳ ಕ್ರಿಕೆಟ್ ಲೀಗ್. ಈ ಟೂರ್ನಿಯನ್ನು ನೋಡಲು ಮುಂಬೈ ಇಂಡಿಯನ್ಸ್‌ ಸ್ಕೌಟಿಂಗ್ ಟೀಮ್ ತೆರಳಿತ್ತು. ಈತನ ಆಟ ನೋಡಿದ್ದ ಮುಂಬೈ ಸ್ಕೌಟಿಂಗ್ ಟೀಮ್, ಟ್ರಯಲ್ಸ್​ಗೆ ಬರುವಂತೆ ಹೇಳಿತ್ತು. ಬಳಿಕ ಟ್ರಯಲ್ಸ್​ಗೆ ಬಂದಿದ್ದ ವೀಘ್ನೇಶ್​​​​​​​​​​​​​​​​ ಬೌಲಿಂಗ್ ನೋಡಿ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಇಂಪ್ರೆಸ್ ಆಗಿದ್ದರು. ಅಂತಿಮವಾಗಿ ಮುಂಬೈ ಹರಾಜಿನಲ್ಲಿ 30 ಲಕ್ಷಕ್ಕೆ ಖರೀದಿಯನ್ನೂ ಮಾಡ್ತು.

ಡಿಸೆಂಬರ್​ನಲ್ಲಿ ನಡೆದಿದ್ದ ಹರಾಜಿನಲ್ಲಿ ವಿಘ್ನೇಶ್​ನ ಖರೀದಿಸಿದ್ದ ಮುಂಬೈ, 2025 ಜನವರಿಯಲ್ಲಿ ಸೌತ್ ಆಫ್ರಿಕಾಗೆ ಕಳುಹಿಸಿತ್ತು. ಸೌತ್ ಆಫ್ರಿಕಾ ಟಿ20 ಲೀಗ್​​ನ MI ಕೇಪ್ ಟೌನ್ ತಂಡದ ನೆಟ್ ಬೌಲರ್ ಆಗಿ ಸೇರಿದ ವೀಘ್ನೇಶ್ ಪುತ್ತೂರು, ಅಫ್ಘಾನ್ ಸ್ಪಿನ್ನರ್​ ರಶೀದ್ ಖಾನ್​ ಗರಡಿಯಲ್ಲಿ ಮತ್ತಷ್ಟು ಪಳಗಿದರು. ಇದೇ ಅನುಭವ ಐಪಿಎಲ್​ನಲ್ಲಿ ಕೈ ಹಿಡಿಯಿತು. ಸಿಕ್ಕ ಅವಕಾಶ ಸದ್ಭಳಕೆ ಮಾಡಿಕೊಂಡಿರುವ ವೀಘ್ನೇಶ್, ಮೊದಲ ಮ್ಯಾಚ್​ನಲ್ಲೇ ಸೆನ್ಸೇಷನ್ ಸೃಷ್ಟಿಸಿದ್ದಾರೆ. ಭಾರತೀಯ ಕ್ರಿಕೆಟ್​ನ ಹೊಸ ಭರವಸೆಯಾಗಿ ಕಾಣಿಸಿಕೊಳ್ತಿರುವ ವೀಘ್ನೇಶ್, ಇದೇ ಆಟ ಮುಂದುವರೆಸಿದ್ರೆ ಮುಂದೊಂದು ದಿನ ಟೀಮ್ ಇಂಡಿಯಾ ಸೇರೋದು ಪಕ್ಕಾ.

ಇದನ್ನೂ ಓದಿ: ರಿಷಬ್ ಪಂತ್​ಗೂ ಗೊಯೆಂಕಾ ಎಚ್ಚರಿಕೆ; KL ರಾಹುಲ್​ ಘಟನೆ ನೆನಪಿಸಿದ ಫ್ಯಾನ್ಸ್..! Video

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment