/newsfirstlive-kannada/media/post_attachments/wp-content/uploads/2024/11/VIJ-ONLINE-TRADING.jpg)
ಆನ್‌ಲೈನ್ ಟ್ರೇಡಿಂಗ್ ನಂಬುವ ಮುನ್ನ ಸಾವಿರ ಬಾರಿ ಯೋಚನೆ ಮಾಡಬೇಕು. ಹಣ ಹೂಡಿ ಕೊನೆಗೆ ಮೋಸ ಹೋದ ಕಥೆಗಳು ನಿತ್ಯವೂ ನಮ್ಮ ಕಣ್ಣ ಮುಂದೆ ಇದ್ದರೂ ಕೂಡ ಭಾರೀ ಲಾಭದಾಸೆಗೆ ಜನ ಯಾಮಾರುವುದು ತಪ್ಪುತ್ತಿಲ್ಲ. ವಿಜಯಪುರದಲ್ಲಿ ಇದೇ ರೀತಿ ಆನ್‌ಲೈನ್ ಟ್ರೇಡಿಂಗ್ ನಂಬಿ ದುಡ್ಡು ಹಾಕಿದ ಜನರು ಈಗ ಗೋಳಾಡುತ್ತಿದ್ದಾರೆ.
ಕ್ಯಾಪ್ಮೋರ್ ವೆಲ್ತ್ ಮ್ಯಾನೇಜರ್, ದಿ ಟಚೇಬಲ್ ಟೆಕ್ ಕಂಪನಿಯಿಂದ ಭಾರೀ ವಂಚನೆ ಯಾಗಿದೆ. ಆ್ಯಪ್ಮೂಲಕ ಜನರನ್ನುವಂಚಿಸಿ ಈಗ ಗ್ಯಾಂಗ್ ನಾಪತ್ತೆಯಾಗಿದೆ. ಒಂದಲ್ಲ ಎರಡಲ್ಲ ಬರೋಬ್ಬರಿ 285 ಕೋಟಿ ರೂಪಾಯಿಗೂ ಅಧಿಕ ಹಣ ವಂಚನೆ ನಡೆದಿದೆ ಎಂದು ಮೋಸ ಹೋದ ಜನರು ಹೇಳುತ್ತಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ಕ್ಯಾಪ್ಮೋರ್ ಕಂಪನಿಯವರು. ನೀವು ಹೂಡುವ ಹಣಕ್ಕೆ ಶೇಕಡಾ 8 ರಿಂದ 10 ರಷ್ಟು ಲಾಭಾಂಶ ಕೊಡ್ತೀವಿ ಎಂದು ನಂಬಿಸಿ ಮೋಸ ಮಾಡಿದ್ದಾರೆ. ಕಂಪನಿ ರಾಜಸ್ಥಾನದ ಮೂಲದ್ದು ಎಂದು ಹೇಳಲಾಗುತ್ತಿದೆ. ಸದ್ಯ ರಾಜಸ್ಥಾನ ಮೂಲದ ಅಜೇಯ್ ಕುಮಾರ್ ಆರ್ಯ, ಸೌರಬ ಚಾವ್ಲಾ, ಕಮರಜಿತ್ ಸಿಂಗ್, ರಾಜೇಂದ್ರ, ಬಲ್ಜಿತ್ ಸಿಂಗ್, ಸಲೋನಿ ಚಾವ್ಲಾ ವಿರುದ್ಧ ದೂರು ದಾಖಲಾಗಿದೆ.
ಇದನ್ನೂ ಓದಿ:ಬರೋಬ್ಬರಿ ₹1.50 ಕೋಟಿ ಕಳ್ಕೊಂಡ ಗಂಡ, ಹೆಂಡತಿ.. ಆನ್‌ಲೈನ್ ಹೂಡಿಕೆ ಮಾಡೋರು ಓದಲೇಬೇಕಾದ ಸ್ಟೋರಿ
ಈ ಒಂದು ಗ್ಯಾಂಗ್ ವಿಜಯಪುರ ಜಿಲ್ಲೆಯಲ್ಲಿ ಟೀಮ್ ಕಟ್ಟಿಕೊಂಡು ವ್ಯವಸ್ಥಿತವಾಗಿ ವಂಚಿಸಿ ಪರಾರಿಯಾಗಿದೆ. ಎಎಲ್ಐ ನಂತರ ದೊಡ್ಡ ಕಂಪನಿ ನಮ್ಮದೇ ಎಂದು ಬಿಲ್ಡಪ್ ಕೊಟ್ಟಿದೆ. ರಿತೇಶ್ ಭಿಸೆ ಎಂಬುವವರಿಂದ 2023ರಲ್ಲಿಯೇ ದೂರು ದಾಖಲಾಗಿತ್ತು. ಇವರೇ ರಾಜಸ್ಥಾನ ಮೂಲದ ಈ ಗ್ಯಾಂಗ್ನ್ನು ವಿಜಯಪುರಕ್ಕೆ ಕರೆಯಿಸಿ ಟ್ರೇಡಿಂಗ್ ಮಾಡಿಸಿದ್ದಾರೆಂದು ಹೇಳಲಾಗುತ್ತಿದೆ.
ಇದನ್ನೂ ಓದಿ:ತಂಗಿ ಮದುವೆ ಕಾರ್ಡ್ ಕೊಟ್ಟು ಬರ್ತಿದ್ದಾಗ ಕಾದು ಕೂತಿದ್ದ ರೌಡಿಗಳು.. ಮುಂದೆ ಏನಾಯ್ತು..?
ವಿಜಯಪುರ ಮೂಲದ ರಿತೇಶ್ ಭಿಸ್ಸೆ ವಿರುದ್ಧ ಈಗ ವಂಚನೆಗೊಳಗಾದವರು ಆರೋಪ ಮಾಡುತ್ತಿದ್ದಾರೆ. ಕಂಪನಿ ಆರಂಭದಲ್ಲಿ ಲಾಭಾಂಶ ಕೊಟ್ಟು ನಂಬಿಸಿ ಬಳಿಕ ಕೋಟ್ಯಾಂತರ ರೂಪಾಯಿ ಹೂಡಿಕೆ ಮಾಡಿಸಿಕೊಂಡು ಪರಾರಿಯಾಗಿದೆ. ಈಗ ಹಣ ವಾಪಸ್ ಬಾರದಿದ್ದರೆ ನಮಗೆ ಸಾವು ಒಂದೇ ಕೊನೆಯ ದಾರಿ ಎಂದು ಪರಿತಪಿಸುತ್ತಿದ್ದಾರೆ ಹಣ ಹೂಡಿ ಕೈಸುಟ್ಟುಕೊಂಡ ಜನ
ರಾಜ್ಯಸ್ಥಾನ ಮೂಲದ ಈ ಗ್ಯಾಂಗ್ ಇಡೀ ದೇಶಾದ್ಯಂತ ಇದೇ ಮಾದರಿಯಲ್ಲಿ ವಂಚನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಹಣ ಕಳೆದುಕೊಂಡಿರುವ ಜನರು ವಿಜಯಪುರ ಜಿಲ್ಲೆಯ ಪೊಲೀಸರಿಗೆ ಗ್ಯಾಂಗ್ ಪತ್ತೆ ಮಾಡಿ ನಮ್ಮ ಹಣ ವಾಪಸ್ ಕೊಡಿಸುವಂತೆ ಮನವಿ ಮಾಡಿದ್ದಾರೆ. ಕಳೆದ 16 ತಿಂಗಳಿನಿಂದ ನೊಂದ ಗ್ರಾಹಕರು ಅಲೆದಾಡುತ್ತಿದ್ದು ವಿಜಯಪುರ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ