/newsfirstlive-kannada/media/post_attachments/wp-content/uploads/2024/12/allu-arjun3.jpg)
ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣದಲ್ಲಿ ಜೈಲು ಸೇರಿದ್ದ ಸ್ಟಾರ್ ನಟ ಅಲ್ಲು ಅರ್ಜುನ್ ರಿಲೀಸ್ ಆಗಿದ್ದಾರೆ. ಇಂದು ಬೆಳಗ್ಗೆ ಚಂಚಲಗೂಡ ಸೆಂಟ್ರಲ್ ಜೈಲಿನಿಂದ ಅಲ್ಲು ಅರ್ಜುನ್ ಬಿಡುಗಡೆಯಾಗಿದ್ದಾರೆ. ಇದೇ ವಿಚಾರ ತಿಳಿದ ಕೂಡಲೇ ಕುಟುಂಬಸ್ಥರು ಹಾಗೂ ಅಭಿಮಾನಿಗಳು ಹಾಗೂ ಸ್ನೇಹಿತರು ಫುಲ್ ಖುಷ್ ಆಗಿದ್ದಾರೆ.
ಇದನ್ನೂ ಓದಿ: ಅಲ್ಲು ಅರ್ಜುನ್ ಜೊತೆ ಪೊಲೀಸರು ಅನುಚಿತ ವರ್ತನೆ ಆರೋಪ; ಅಷ್ಟಕ್ಕೂ ಮನೆಯಲ್ಲಿ ಆಗಿದ್ದೇನು..?
ನಟ ಅಲ್ಲು ಅರ್ಜುನ್ ಜೈಲಿನಿಂದ ರಿಲೀಸ್ ಆಗಿ ಮನೆಗೆ ಬರುತ್ತಿದ್ದಂತೆ ಅಪ್ಪಿಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಅಪ್ಪನ ಆಗಮನಕ್ಕೆ ಇಬ್ಬರು ಮಕ್ಕಳು ಕೂಡ ಖುಷಿಯಾಗಿದ್ದಾರೆ. ಇದಾದ ಬಳಿಕ ಕುಂಬಳಕಾಯಿ ಒಡೆದು ಅಲ್ಲು ಅರ್ಜುನ್‌ಗೆ ದೃಷ್ಟಿ ತೆಗೆದಿದ್ದಾರೆ. ಇನ್ನೂ, 4 ವಾರಗಳ ಕಾಲ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ನಿನ್ನೆಯೇ ಬೇಲ್ ಸಿಕ್ಕರೂ ಕೂಡ ಅಲ್ಲು ಅರ್ಜುನ್ ಜೈಲಿನಲ್ಲಿ ಒಂದು ರಾತ್ರಿ ಕಳೆಯುವಂತಾಗಿತ್ತು.
ಇದೀಗ ನಟ ಅಲ್ಲು ಅರ್ಜುನ್ ಮನೆಗೆ ಸ್ಟಾರ್ ನಟರು ಭೇಟಿ ಕೊಡುತ್ತಿದ್ದಾರೆ. ಈಗಾಗಲೇ ಜೈಲಿನಿಂದ ಆಚೆ ಬಂದ ಅಲ್ಲು ಅರ್ಜುನ್ ನಿವಾಸಕ್ಕೆ ನಿರ್ದೇಶಕ ಸುಕುಮಾರ್ ಹಾಗೂ ನಿರ್ಮಾಪಕ ದಿಲ್ ರಾಜ್ ಭೇಟಿ ಕೊಟ್ಟಿದ್ದಾರೆ. ಇವರ ಜೊತೆಗೆ ಸ್ಟಾರ್ ನಟಿ ವಿಜಯ್ ದೇವರಕೊಂಡ, ಸಹೋದರ ಆನಂದ್ ದೇವರಕೊಂಡ ಕೂಡ ಅಲ್ಲು ಅರ್ಜುನ್ ಭೇಟಿಗೆ ಬಂದಿದ್ದಾರೆ. ಅಲ್ಲದೇ ಅಲ್ಲು ಅರ್ಜುನ್ ಮನೆ ಮುಂದೆ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ