/newsfirstlive-kannada/media/post_attachments/wp-content/uploads/2024/06/Vijay-devarakonda.jpg)
ಡಾರ್ಲಿಂಗ್​ ಪ್ರಭಾಸ್ ನಟನೆಯ​ ಕಲ್ಕಿ 2898 AD ಸಿನಿಮಾದಲ್ಲಿ ವಿಜಯ್​ ದೇವರಕೊಂಡ ಕೂಡ ನಟಿಸುತ್ತಿದ್ದಾರೆ ಎಂಬ ಮಾತು ಕೇಳಿಬಂದಿದೆ. ಅತಿಥಿ ಪಾತ್ರದಲ್ಲಿ ವಿಜಯ್​ ದೇವರಕೊಂಡ​ ಕಾಣಿಸಿಕೊಂಡಿದ್ದು, ಪ್ರಮುಖ ಪಾತ್ರವನ್ನೇ ನಿರ್ವಹಿಸಿದ್ದಾರಂತೆ.
ಸದ್ಯ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ಮಾಡರ್ನ್​ ಮಹಾಭಾರತದ ಕತೆಯನ್ನು ಆಧರಿಸಿ ಬರುತ್ತಿರುವ ಈ ಸಿನಿಮಾದಲ್ಲಿ ವಿಜಯ್​ ದೇವರಕೊಂಡ ಅರ್ಜುನನ ಪಾತ್ರವನ್ನು ನಿರ್ವಹಿಸಿದ್ದಾರಂತೆ. ಅಂದಹಾಗೆಯೇ ಈ ವಿಚಾರವನ್ನು ಸಿನಿಮಾ ತಂಡ ಎಲ್ಲೂ ಬಿಟ್ಟುಕೊಟ್ಟಿಲ್ಲ. ಆದರೀಗ ರಿಲೀಸ್​ಗೂ 2 ದಿನ ಬಾಕಿ ಇರುವಾಗ ಈ ವಿಚಾರ ಹೊರಬಿದ್ದಿದೆ.
/newsfirstlive-kannada/media/post_attachments/wp-content/uploads/2024/06/kalki-prabas-1.jpg)
ಇನ್ನು ಕಲ್ಕಿ ಸಿನಿಮಾ ಜೂನ್​ 27ರಂದು ತೆರೆ ಮೇಲೆ ಬರಲು ಸಜ್ಜಾಗಿದೆ. ನಾಗ್​ ಅಶ್ಚಿನ್​ ನಿದೇರ್ಶನದ ಈ ಸಿನಿಮಾಗೆ ಚಲಸಾನಿ ಅಶ್ವಿನಿ ದತ್​ ಬಂಡವಾಳ ಹೂಡಿದ್ದಾರೆ. ತಮ್ಮ ವೈಜಯಂತಿ ಸಿನಿಮಾದ ಮೂಲಕ ಕಲ್ಕಿ ರೂಪವನ್ನು ಸಿನಿ ಪ್ರಿಯರಿಗೆ ತೋರಿಸಲು ರೆಡಿಯಾಗಿದ್ದಾರೆ. ಜೂನ್​ 27 ರಂದು ತೆರೆಗೆ ಬರುತ್ತಿದೆ.
ಇದನ್ನೂ ಓದಿ: ಅಬ್ಬಾ..! ಕಲ್ಕಿ 2898 AD ಸಿನಿಮಾಗಾಗಿ ಪ್ರಭಾಸ್​ ಪಡೆದ ಸಂಭಾವನೆ ಎಷ್ಟು ಗೊತ್ತಾ?
/newsfirstlive-kannada/media/post_attachments/wp-content/uploads/2024/06/kalki-prabas.jpg)
ಕಲ್ಕಿ ಸಿನಿಮಾದಲ್ಲಿ ಪ್ರಭಾಸ್​ಗೆ ನಾಯಕಿಯಾಗಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದಾರೆ. ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದಿಶಾ ಪಟಾಣಿ ಪ್ರಮುಖ ಪಾತ್ರ ನಿಭಾಯಿಸಿದ್ದಾರೆ.
ಇದನ್ನೂ ಓದಿ: ಚಾಪೆ ಮೇಲೆ ನಿದ್ದೆ, ಸೊಳ್ಳೆ ಕಾಟದಿಂದ ಪರದಾಟ.. ಜೈಲಲ್ಲಿ ಪವಿತ್ರಾ ಗೌಡಗೆ ಕರಾಳ ರಾತ್ರಿ
ಇನ್ನು ಕಲ್ಕಿ ಸಿನಿಮಾ ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಏಕಕಾಲದಲ್ಲಿ ಬಿಡುಗಡೆ ಆಗ್ತಿದೆ. ಈಗಾಗಲೇ ಮುಂಗಡ ಟಿಕೆಟ್​ ಕೂಡ ಖರೀದಿಸುವ ಅವಕಾಶವನ್ನು ಚಿತ್ರತಂಡ ನೀಡಿದೆ. ಸದ್ಯದ ಮಾಹಿತಿ ಪ್ರಕಾರ 6 ಕೋಟಿಗೂ ಅಧಿಕ ಆದಾಯ ಮುಂಗಡ ಟಿಕೆಟ್​ ಖರೀದಿಯಲ್ಲಿ ಬಂದಿದೆ ಎಂಬ ಮಾಹಿತಿ ಹೊರಬಿದ್ದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us