/newsfirstlive-kannada/media/post_attachments/wp-content/uploads/2025/07/Vijay-Devarakonda.jpg)
ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ (Vijay Deverakonda) ಕೆಲವೇ ದಿನಗಳಲ್ಲಿ ಕಿಂಗ್‌ಡಮ್ (KINGDOM) ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಗೌತಮ್ ತಿನ್ನನುರಿ (Gowtam Tinnanuri) ನಿರ್ದೇಶನದ ಈ ಚಿತ್ರದಲ್ಲಿ ಭಾಗ್ಯಶ್ರೀ ಭೋರ್ಸ್ ನಾಯಕಿಯಾಗಿ ನಟಿಸಿದ್ದಾರೆ.
ಸತ್ಯದೇವ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಚಿತ್ರೀಕರಣ ಪೂರ್ಣಗೊಂಡಿದ್ದು, ಜುಲೈ 31 ರಂದು ಬಿಡುಗಡೆಯಾಗಲಿದೆ. ಲೆಟೆಸ್ಟ್​ ವಿಷಯ ಏನೆಂದರೆ ವಿಜಯ್ ದೇವರಕೊಂಡ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಾಹಿತಿಗಳ ಪ್ರಕಾರ ಅವರು, ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಏರ್ ಇಂಡಿಯಾ ವಿಮಾನದ ಇಂಧನ ಸ್ವಿಚ್ ಕಟ್ ಆಫ್ ಮಾಡಿದ್ದು ಇವರೇನಾ? ಸ್ಫೋಟಕ ಸತ್ಯ ರಿವೀಲ್​!
ಇದನ್ನು ತಿಳಿದ ಅಭಿಮಾನಿಗಳು ಆಘಾತಕ್ಕೆ ಒಳಗಾಗಿದ್ದಾರೆ. ವಿಜಯ್ ಬೇಗ ಚೇತರಿಸಿಕೊಳ್ಳಲಿ ಅಂತಾ ಹಾರೈಸಿದ್ದಾರೆ. ವಿಜಯ್ ದೇವರಕೊಂಡ ಅವರಿಗೆ ಸಾಕಷ್ಟು ವಿಶ್ರಾಂತಿಯ ಅಗತ್ಯ ಇದೆ. ಜುಲೈ 20 ರ ನಂತರ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಆದರೆ ಅವರ ಕುಟುಂಬಸ್ಥರು ಯಾರೂ ಕೂಡ ದೇವರಕೊಂಡ ಆರೋಗ್ಯದ ಬಗ್ಗೆ ಮಾಹಿತಿ ನೀಡಿಲ್ಲ.
ಇದನ್ನೂ ಓದಿ: ರಾಮಾಚಾರಿ ಬೆನ್ನಲ್ಲೇ ವೀಕ್ಷಕರ ನೆಚ್ಚಿನ ಮತ್ತೊಂದು ಸೀರಿಯಲ್​ ಅಂತ್ಯ.. ಯಾವುದು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ