newsfirstkannada.com

ವಿಜಯ್ ದೇವರಕೊಂಡ ಟೀಮ್​ನಿಂದ ಸೈಬರ್ ಕ್ರೈಮ್​ಗೆ ಕಂಪ್ಲೇಟ್.. ಕಾರಣ?

Share :

Published April 8, 2024 at 2:34pm

    ಫ್ಯಾಮಿಲಿ ಸ್ಟಾರ್ ಸಿನಿಮಾ ಸಖತ್ ಆಗಿ ಕೆಲಕ್ಷನ್ ಮಾಡುತ್ತಿದೆಯಾ.?

    ಮೊನ್ನೆ ಮೊನ್ನೆ ವಿಜಯ್ ದೇವರಕೊಂಡ ನಟನೆಯ ಸಿನಿಮಾ ರಿಲೀಸ್

    ಪರ್ಸನಲ್ ಮ್ಯಾನೇಜರ್, ಅಭಿಮಾನಿ ಸಂಘದ ಅಧ್ಯಕ್ಷನಿಂದ ದೂರು

ಟಾಲಿವುಡ್​ ಸ್ಟಾರ್​ ವಿಜಯ್ ದೇವರಕೊಂಡ ಅಭಿನಯದ ಫ್ಯಾಮಿಲಿ ಸ್ಟಾರ್​ ಸಿನಿಮಾ ವಿರುದ್ಧ ಸೋಷಿಯಲ್​ ಮೀಡಿಯಾದಲ್ಲಿ ಫೇಕ್​ ಪೋಸ್ಟ್​, ನೆಗೆಟಿವ್ ಕಾಮೆಂಟ್ಸ್ ಬರುತ್ತಿರುವ ಹಿನ್ನೆಲೆಯಲ್ಲಿ ಸೈಬರ್​ ಕ್ರೈಂ ಪೊಲೀಸರಿಗೆ ದೂರು ನೀಡಲಾಗಿದೆ.

ವಿಜಯ್ ದೇವರಕೊಂಡ ಅಭಿನಯದ ಫ್ಯಾಮಿಲಿ ಸ್ಟಾರ್​ ಸಿನಿಮಾವು ಇದೇ 5 ರಂದು ಗ್ರ್ಯಾಂಡ್ ಆಗಿ ಬಿಡುಗಡೆಯಾಗಿದೆ. ಥಿಯೇಟರ್​ಗಳಲ್ಲಿ ಸಿನಿಮಾವು ಸಖತ್ ಕಲೆಕ್ಷನ್ ಮಾಡುತ್ತಿದ್ದು ಈಗಾಗಲೇ 11 ಕೋಟಿ ರೂಪಾಯಿಗಳನ್ನ ಗಳಿಸಿ ಮುನ್ನುಗ್ಗುತ್ತಿದೆ. ಆದರೆ ಈ ನಡುವೆ ಫ್ಯಾಮಿಲಿ ಸ್ಟಾರ್ ಸಿನಿಮಾದ ಫೋಟೋ, ವಿಡಿಯೋಗಳನ್ನ ಸೋಷಿಯಲ್​ ಮೀಡಿಯಾದಲ್ಲಿ ಹಾಕಿ ಫುಲ್ ಟ್ರೋಲ್​ ಮಾಡಲಾಗುತ್ತಿದೆ. ಸಿನಿಮಾ ನೋಡಿರುವವರ ಸ್ಪಂದರೆ ಚೆನ್ನಾಗಿದ್ದರೆ, ಇತ್ತ ಸೋಷಿಯಲ್ ಮೀಡಿಯಾದಲ್ಲಿ ಇನ್ನೊಂದು ರೀತಿಯಲ್ಲಿ ಟ್ರೋಲ್ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.

ಇದರಿಂದ ಸಿನಿಮಾಕ್ಕೆ ಭಾರೀ ನಷ್ಟವಾಗುತ್ತಿರುವ ಕಾರಣ ಟ್ರೋಲ್​ ಮಾಡುತ್ತಿರುವವರ ವಿರುದ್ಧ ನಟ ದೇವರಕೊಂಡ ಸೇರಿದಂತೆ ಚಿತ್ರತಂಡ ಗರಂ ಆಗಿದೆ. ನಮಗೆ ಆಗದ ಕೆಲವರು ಈ ರೀತಿ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ. ಹೀಗಾಗಿಯೇ ವಿಜಯ್ ದೇವರಕೊಂಡ ಅವರ ಪರ್ಸನಲ್ ಮ್ಯಾನೇಜರ್ ಅನುರಾಗ್ ಪರ್ವತನೇನಿ ಮತ್ತು ಅವರ ಅಭಿಮಾನಿಗಳ ಸಂಘದ ಅಧ್ಯಕ್ಷ ನಿಶಾಂತ್ ಕುಮಾರ್ ಸೇರಿ ಮಾದಪುರದ ಪಿಎಸ್​ ಸೈಬರ್​ ಕ್ರೈಂ ಠಾಣೆಯಲ್ಲಿ ಕೇಸ್ ದಾಖಲು ಮಾಡಿದ್ದಾರೆ. ಸಿನಿಮಾ ಬಗ್ಗೆ ಫೇಕ್​ ಪೋಸ್ಟ್, ಕಾಮೆಂಟ್ಸ್​ ಮಾಡುತ್ತಿರುವವರ ವಿರುದ್ಧ ಕ್ರಮ ಎಗೆದುಕೊಳ್ಳುವಂತೆ ಕೇಸ್​ನಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದು ಬಂದಿದೆ. ಸಿನಿಮಾಕ್ಕೆ ಬಂಡವಾಳ ಹಾಕಿರುವ ದಿಲ್​ ರಾಜು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಜಯ್ ದೇವರಕೊಂಡ ಟೀಮ್​ನಿಂದ ಸೈಬರ್ ಕ್ರೈಮ್​ಗೆ ಕಂಪ್ಲೇಟ್.. ಕಾರಣ?

https://newsfirstlive.com/wp-content/uploads/2024/04/VIJAY_DEVARAKONDA.jpg

Load More