ಕರ್ನಾಟಕ ವಿರುದ್ಧ ಫೈನಲ್​ಗೆ ಯಾರಿಗೆ ಚಾನ್ಸ್​.. ಎದುರಾಳಿಗೆ ಬೃಹತ್ ಟಾರ್ಗೆಟ್ ಕೊಟ್ಟ ವಿದರ್ಭ

author-image
Bheemappa
Updated On
ಕರ್ನಾಟಕ ವಿರುದ್ಧ ಫೈನಲ್​ಗೆ ಯಾರಿಗೆ ಚಾನ್ಸ್​.. ಎದುರಾಳಿಗೆ ಬೃಹತ್ ಟಾರ್ಗೆಟ್ ಕೊಟ್ಟ ವಿದರ್ಭ
Advertisment
  • ಈಗಾಗಲೇ ಫೈನಲ್​ಗೆ ಲಗ್ಗೆ ಇಟ್ಟಿರುವ ಕರ್ನಾಟಕ ತಂಡ
  • ಧೃವ್ ಜುರೇಲ್ ಹಾಗೂ ಯಶ್ ರಾಥೋಡ್ ಸೆಂಚುರಿ
  • 2ನೇ ಸೆಮಿಸ್​ನಲ್ಲಿ ಭರ್ಜರಿ ರನ್​ ಕೊಳ್ಳೆ ಹೊಡೆದ ವಿದರ್ಭ

ವಿಜಯ್ ಹಜಾರೆ ಟ್ರೋಫಿಯ 2ನೇ ಸೆಮಿಫೈನಲ್ ಪಂದ್ಯ ಮಹಾರಾಷ್ಟ್ರ ಹಾಗೂ ವಿದರ್ಭ ತಂಡಗಳ ನಡುವೆ ನಡೆಯುತ್ತಿದೆ. ಈಗಾಗಲೇ ಮೊದಲ ಬ್ಯಾಟಿಂಗ್ ಮಾಡಿದ ಕರುಣ್ ನಾಯರ್ ನೇತೃತ್ವದ ವಿದರ್ಭ ಟೀಮ್ ಬೃಹತ್​ ಮೊತ್ತದ ರನ್​ಗಳನ್ನು ಕಲೆ ಹಾಕಿದೆ. 50 ಓವರ್​ಗಳಲ್ಲಿ 3 ವಿಕೆಟ್​ಗೆ 380 ರನ್​ಗಳ ಗುರಿ ನೀಡಿದೆ.

ವಡೋದರದ ಕೋಟಂಬಿ ಸ್ಟೇಡಿಯಂನಲ್ಲಿ ನಡೆದ 2ನೇ ಸೆಮಿಫೈನಲ್ ಪಂದ್ಯದಲ್ಲಿ ಮಹಾರಾಷ್ಟ್ರ ತಂಡದ ನಾಯಕ ರುತುರಾಜ್ ಗಾಯಕ್ವಾಡ್​ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ವಿದರ್ಭ ಪರ ಓಪನರ್ ಆಗಿ ಬ್ಯಾಟಿಂಗ್​ಗೆ ಆಗಮಿಸಿದ ಧೃವ್ ಜುರೇಲ್ ಹಾಗೂ ಯಶ್ ರಾಥೋಡ್ ಬ್ಯಾಟಿಂಗ್​ನಲ್ಲಿ ಪರಾಕ್ರಮ ಮೆರೆದರು. ಮಹಾರಾಷ್ಟ್ರದ ಆಟಗಾರರನ್ನು ಬೆಂಬಿಡದೇ ಕಾಡಿದ ಈ ಜೋಡಿ ಬಾಲ್​ ಅನ್ನ ಮೈದಾನದ ಎಲ್ಲ ಕಡೆ ಬಾರಿಸಿ ಬೌಲರ್​ಗಳ ಬೆವರಿಸಿಳಿದರು. ಹೀಗಾಗಿಯೇ ಓಪನರ್ ಆಗಿ ಬಂದ ಇಬ್ಬರು ಸೆಂಚುರಿ ಸಿಡಿಸಿ ಸಂಭ್ರಮಿಸಿದರು.

publive-image

ಇದನ್ನೂ ಓದಿ: ಸೆಮಿಸ್​ನಲ್ಲಿ ಕರ್ನಾಟಕಕ್ಕೆ ಭರ್ಜರಿ ಗೆಲುವು.. ಫೈನಲ್​ಗೆ ಎಂಟ್ರಿ ಕೊಟ್ಟ ಮಯಾಂಕ್ ನೇತೃತ್ವದ ಟೀಮ್

ಮನಮೋಹಕ ಬ್ಯಾಟಿಂಗ್ ಮಾಡಿದ ಧೃವ್ ಜುರೇಲ್, 120 ಎಸೆತಗಳಲ್ಲಿ 14 ಬೌಂಡರಿ, 1 ಸಿಕ್ಸರ್ ಸಮೇತ 114 ರನ್​ಗಳನ್ನು ಗಳಿಸಿದರು. ಯಶ್ ರಾಥೋಡ್ ಕೂಡ ನಾನೇನು ಕಮ್ಮಿ ಇಲ್ಲ ಎನ್ನುವಂತೆ ಕೇವಲ 101 ಎಸೆತಗಳಲ್ಲಿ 14 ಬೌಂಡರಿ 1 ಸಿಕ್ಸರ್ ಸಮೇತ 116 ರನ್​ ಗಳಿಸಿ ಮಹಾರಾಷ್ಟ್ರಕ್ಕೆ ದೊಡ್ಡ ಪೆಟ್ಟು ಕೊಟ್ಟರು. ಇವರ ಬಳಿಕ ಕ್ರೀಸ್​ಗೆ ಆಗಮಿಸಿದ ಕ್ಯಾಪ್ಟನ್ ಕರುಣ್ ನಾಯರ್ ಕೂಡ ಹೊಡಿಬಡಿ ಬ್ಯಾಟಿಂಗ್ ಮಾಡಿ ಕೇವಲ 44 ಎಸೆತಗಳಲ್ಲಿ 9 ಫೋರ್, 5 ಭರ್ಜರಿ ಸಿಕ್ಸರ್ ಸಮೇತ 88 ರನ್​ ಚಚ್ಚಿ ನಾಟೌಟ್ ಆಗಿ ಉಳಿದರು. ಜೀತೇಶ್ ಶರ್ಮಾ ಕೂಡ ಕೇವಲ 33 ಎಸೆತಗಳಲ್ಲೇ ಅರ್ಧ ಶತಕ ಸಿಡಿಸಿ ತಂಡಕ್ಕೆ ನೆರವಾದರು.

ಈ ಎಲ್ಲರ ಬ್ಯಾಟಿಂಗ್ ನೆರವಿನಿಂದ ವಿದರ್ಭ ತಂಡ ನಿಗದಿತ 50 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 380 ರನ್​ಗಳ ಬೃಹತ್ ಟಾರ್ಗೆಟ್ ನೀಡಿದೆ. ಸದ್ಯ ಈ ಗುರಿ ಬೆನ್ನತ್ತಿದ ಮಹಾರಾಷ್ಟ್ರ ಈಗಾಗಲೇ 31 ರನ್​ಗೆ ಕ್ಯಾಪ್ಟನ್ ರುತುರಾಜ್ ಗಾಯಕ್ವಾಡ್ ಔಟ್ ಆಗಿದ್ದಾರೆ. ಮಹಾರಾಷ್ಟ್ರ ತಂಡದ ಗೆಲುವು ಕಠಿಣವಾಗಿದೆ. ಸದ್ಯ ಈ 2ನೇ ಸೆಮಿಫೈನಲ್​ ಪಂದ್ಯದಲ್ಲಿ ವಿನ್ ಆದವರು ಕರ್ನಾಟಕ ತಂಡದ ವಿರುದ್ಧ ಫೈನಲ್ ಪಂದ್ಯವನ್ನು ಆಡಲಿದ್ದಾರೆ. ​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment