ಕೇಂದ್ರದ ಕಠಿಣ ಕ್ರಮಕ್ಕೆ ಉರ್ಕೊಂಡ ವಿಜಯ್ ಮಲ್ಯ; 8,000 ಸಾವಿರ ಕೋಟಿ ವಸೂಲಿಗೆ ತಬ್ಬಿಬ್ಬು..!

author-image
Bheemappa
Updated On
ಕೇಂದ್ರದ ಕಠಿಣ ಕ್ರಮಕ್ಕೆ ಉರ್ಕೊಂಡ ವಿಜಯ್ ಮಲ್ಯ; 8,000 ಸಾವಿರ ಕೋಟಿ ವಸೂಲಿಗೆ ತಬ್ಬಿಬ್ಬು..!
Advertisment
  • ಉದ್ಯಮಿಯಿಂದ ಭಾರೀ ಹಣ ವಸೂಲಿ ಮಾಡಿತಾ ಕೇಂದ್ರ ಸರ್ಕಾರ?
  • ಇಂಗ್ಲೆಂಡ್​ನಿಂದ ಪ್ರಶ್ನೆಗಳನ್ನು ಕೇಳಿರುವ ಉದ್ಯಮಿ ವಿಜಯ್ ಮಲ್ಯ
  • ವಿಜಯ್ ಮಲ್ಯ ಕೇಳಿದ ಪ್ರಶ್ನೆಗೆ ಉತ್ತರ ಕೊಡ್ತಾರಾ ಹಣಕಾಸು ಸಚಿವೆ?

ನವದೆಹಲಿ: 8,000 ಸಾವಿರ ಕೋಟಿಗೂ ಅಧಿಕ ಹಣವನ್ನು ನನ್ನಿಂದ ವಸೂಲಿ ಮಾಡಲಾಗಿದೆ. ಈ ಘೋರ ಅನ್ಯಾಯವನ್ನ ಯಾರದರೂ ಪ್ರಶ್ನೆ ಮಾಡುತ್ತೀರಾ ಎಂದು ಉದ್ಯಮಿ ವಿಜಯ್ ಮಲ್ಯ ಪ್ರಶ್ನೆ ಮಾಡಿದ್ದಾರೆ.

ಸಂಸತ್ತಿನಲ್ಲಿ ಮಾತನಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ವಿಜಯ್‌ ಮಲ್ಯ ಅವರಿಂದ 14,131 ಕೋಟಿ ರೂಪಾಯಿ ಮೌಲ್ಯದ ಆಸ್ತಿ ವಶಕ್ಕೆ ಪಡಿಯಲಾಗಿದೆ ಎಂದು ಹೇಳಿದ್ದರು. ಇದು ಅಲ್ಲದೇ ಮಲ್ಯ, ಮೆಹುಲ್ ಚೋಕ್ಸಿ, ನೀರವ್ ಮೋದಿ ಸೇರಿ ಇತರೆ ವಾಂಟೆಡ್ ವ್ಯಕ್ತಿಗಳ ಸಾಲವನ್ನು ಮರುಪಾವತಿಸಲು ಇಡಿ 22,280 ಕೋಟಿ ಮೌಲ್ಯದ ಆಸ್ತಿ ವಶಕ್ಕೆ ಪಡೆದಿದೆ. ಆರ್ಥಿಕ ಅಪರಾಧಿಗಳ ವಿರುದ್ಧ ಹೋರಾಟ ಮುಂದುವರೆದಿದೆ ಎಂದು ಹೇಳಿದ್ದರು.

ಸದ್ಯ ಈ ಸಂಬಂಧ ಸಚಿವೆ ನಿರ್ಮಲಾ ಸೀತಾರಾಮನ್​ಗೆ ಇಂಗ್ಲೆಂಡ್​ನಿಂದಲೇ ತಿರುಗೇಟು ಕೊಟ್ಟಿರುವ ವಿಜಯ್ ಮಲ್ಯ ಅವರು, ಸಾಲ ವಸೂಲಾತಿ ನ್ಯಾಯಮಂಡಳಿ 1,200 ಕೋಟಿ ರೂ. ಬಡ್ಡಿ ಸೇರಿ ಕಿಂಗ್ ಫಿಶರ್ ಏರ್ ಲೈನ್ಸ್ (ಕೆಎಫ್​ಎ) ಸಾಲವನ್ನು 6,203 ಕೋಟಿ ರೂಪಾಯಿ ಎಂದು ಅಂದಾಜಿಸಿದೆ. ಆದರೆ ಬ್ಯಾಂಕ್​ಗಳು ₹14,131 ಕೋಟಿ ವಸೂಲಿ ಮಾಡಿವೆ. ಇಷ್ಟು ಆದರೂ ನಾನು ಹೇಗೆ ‘ಆರ್ಥಿಕ ಅಪರಾಧಿ’ ಆಗುತ್ತೇನೆ ಎಂದು ನಿರ್ಮಲಾ ಸೀತಾರಾಮನ್​ ಅವರನ್ನು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ:ಕನ್ನಡ ಹಬ್ಬದಲ್ಲಿ ಭೂರಿ ಭೋಜನ.. ಮೊದಲ ದಿನದ ಉಪಾಹಾರ-ಊಟ ಏನೇನು ಇದೆ?


">December 18, 2024

ಇಡಿ ಮತ್ತು ಬ್ಯಾಂಕ್‌ಗಳು 2 ಪಟ್ಟು ಹೆಚ್ಚು ಸಾಲವನ್ನು ಹೇಗೆ ಸರಿದೂಗಿಸಿಕೊಂಡಿವೆ ಎಂಬುದನ್ನು ಕಾನೂನು ಪ್ರಕಾರ ಸಮರ್ಥಿಸದಿದ್ದರೆ, ಪರಿಹಾರಕ್ಕೆ ನಾನು ಅರ್ಹನಾಗಿರುತ್ತೇನೆ. ಈ ಹೋರಾಟ ಮುಂದುವರೆಯಲಿದೆ. ನಾನು ಹೇಳಿದ ಮಾತುಗಳನ್ನು ಕಾನೂನು ಪ್ರಕಾರ ಪರಿಶೀಲಿಸಬಹುದು. ₹8,000 ಕೋಟಿಗೂ ಹೆಚ್ಚು ಹಣ ವಸೂಲಿ ಮಾಡಲಾಗಿದೆ. ನನ್ನನ್ನು ನಿಂದಿಸುವವರು ಸೇರಿ ಯಾರಾದರೂ ಈ ಘೋರ ಅನ್ಯಾಯವನ್ನು ಪ್ರಶ್ನಿಸುತ್ತಾರೆಯೇ?. 9 ವರ್ಷ ಕಳೆದರು ಹಣದ ವಂಚನೆಯ ಯಾವುದೇ ಪುರಾವೆಗಳು ಯಾರ ಬಳಿಯೂ ಯಾಕೆ ಇಲ್ಲ ಎಂದು ಮಲ್ಯ ಕೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment