ಮಲ್ಯ, ನೀರವ್ ಮೋದಿ ಬಗ್ಗೆ ಬಿಗ್​ ಅಪ್​​ಡೇಟ್ಸ್; G20 ಶೃಂಗಸಭೆಯಲ್ಲಿ ನಡೆದಿದ್ದೇನು..?

author-image
Ganesh
Updated On
ಮಲ್ಯ, ನೀರವ್ ಮೋದಿ ಬಗ್ಗೆ ಬಿಗ್​ ಅಪ್​​ಡೇಟ್ಸ್; G20 ಶೃಂಗಸಭೆಯಲ್ಲಿ ನಡೆದಿದ್ದೇನು..?
Advertisment
  • G20 ಶೃಂಗಸಭೆಯಲ್ಲಿ ಮೋದಿ-ಕಿಯರ್ ಸ್ಟಾರ್ಮರ್ ಭೇಟಿ
  • ಇಂಗ್ಲೆಂಡ್ ಹಾಗೂ ಭಾರತದ ನಡುವೆ FTA ಒಪ್ಪಂದ
  • ವಿಜಯ್ ಮಲ್ಯ, ನೀರವ್ ಮೋದಿ ಶೀಘ್ರದಲ್ಲೇ ಭಾರತಕ್ಕೆ?

G20 ಶೃಂಗಸಭೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬ್ರೆಜಿಲ್​ ಪ್ರವಾಸದಲ್ಲಿದ್ದಾರೆ. ಈ ವೇಳೆ ಇಂಗ್ಲೆಂಡ್ ಪ್ರಧಾನಿ ಕಿಯರ್ ಸ್ಟಾರ್ಮರ್ (Keir Starmer) ಅವರ ಜೊತೆ ಮಹತ್ವದ ಮಾತುಕತೆ ನಡೆಸಿದ್ದಾರೆ.

ವಿದೇಶಾಂಗ ಇಲಾಖೆ ಬಿಡುಗಡೆ ಮಾಡಿರುವ ಹೇಳಿಕೆ ಪ್ರಕಾರ..ಉಭಯ ದೇಶಗಳ ನಡುವೆ ಫ್ರೀ ಟ್ರೇಡ್​ ಅಗ್ರೀಮೆಂಟ್ (FTA) ನಡೆದಿದೆ. ಇದೇ ವೇಳೆ ಭಾರತದಲ್ಲಿ ನಡೆದಿರುವ ಆರ್ಥಿಕ ಅಪರಾಧಗಳ ಬಗ್ಗೆಯೂ ಮೋದಿ ಅವರು ಪ್ರಸ್ತಾಪ ಮಾಡಿದ್ದಾರೆ ಎಂದು ತಿಳಿಸಿದೆ.

ಅಂದರೆ ನೀರವ್ ಮೋದಿ, ವಿಜಯ್ ಮಲ್ಯ ಅವರಂತಹ ಅನೇಕ ಉದ್ಯಮಿಗಳು ದೇಶದ ಬ್ಯಾಂಕ್​ಗಳಲ್ಲಿ ಕೋಟಿ ಕೋಟಿ ಸಾಲ ಮಾಡಿ, UKನಲ್ಲಿ ತಲೆಮರೆಸಿಕೊಂಡಿದ್ದಾರೆ. ಇದೇ ವಿಚಾರವನ್ನು ಮೋದಿ ಇಂಗ್ಲೆಂಡ್ ಪ್ರಧಾನಿ ಜೊತೆ ಪ್ರಸ್ತಾಪಿಸಿದ್ದಾರೆ. ಈ ವಿಚಾರ ಎರಡು ದೇಶಗಳ ನಡುವೆ ಅನೇಕ ವರ್ಷಗಳಿಂದ ಮಾತುಕತೆಯಲ್ಲಿದೆ. ಭಾರತ ಸರ್ಕಾರವು ಅಪಾರಧಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಇಂಗ್ಲೆಂಡ್​ ಅನ್ನು ಒತ್ತಾಯಿಸುತ್ತ ಬಂದಿದೆ.

ಇದನ್ನೂ ಓದಿ:ಕನ್ನಡ ಕಲಿಯಿರಿ, ಬೆಂಗಳೂರಿಗೆ ಬಂದು ನೆಲೆಸಿರಿ; ದೆಹಲಿಯ ನಿವಾಸಿಗಳಿಗೆ ಹಾಸ್ಯಭರಿತ ಆಹ್ವಾನ ನೀಡಿದ್ದು ಯಾರು?

ಭಾರತದಲ್ಲಿ ಆರ್ಥಿಕ ಅಪರಾಧಗಳನ್ನು ನಡೆಸಿ ಇಂಗ್ಲೆಂಡ್​ನಲ್ಲಿ ತಲೆಮರೆಸಿಕೊಂಡಿರುವ ವಿಚಾರದ ಬಗ್ಗೆ ಮೋದಿ ಪ್ರಸ್ತಾಪ ಮಾಡಿದ್ದಾರೆ. ಅಪರಾಧಿಗಳ ವಲಸೆ, ಚಟುವಟಿಕೆಗೆ ಸಂಬಂಧಿಸಿ ಚರ್ಚೆಗಳು ಆಗಿವೆ ಎಂದು ವಿದೇಶಾಂಗ ಇಲಾಖೆ ಹೇಳಿದೆ. ಬೆನ್ನಲ್ಲೇ ಶೀಘ್ರದಲ್ಲೇ ನೀರವ್ ಮೋದಿ ಹಾಗೂ ವಿಜಯ್ ಮಲ್ಯ ಭಾರತಕ್ಕೆ ಹಸ್ತಾಂತರ ಆಗುತ್ತಾರಾ ಎಂಬ ಪ್ರಶ್ನೆ ಎದ್ದಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment