RCB ಖರೀದಿಸಿದ್ದು ಕ್ರೀಡಾ ಸ್ಫೂರ್ತಿಯಿಂದಲ್ಲ, ಹಿಂದಿನ ಉದ್ದೇಶವೇ ಬೇರೆ ಆಗಿತ್ತು.. 18 ವರ್ಷದ ನಂತರ ಸತ್ಯ ಹೇಳಿದ ಮಲ್ಯ

author-image
Ganesh
Updated On
ವಿಜಯ್ ಮಲ್ಯಗೆ ತಪ್ಪದ ಸಂಕಷ್ಟಗಳು.. ಸಾಲ, ಬಡ್ಡಿ, ಚಕ್ರ ಬಡ್ಡಿಯ ಅಸಲಿ ಲೆಕ್ಕಾಚಾರ ಇಲ್ಲಿದೆ..!
Advertisment
  • ಆರ್‌ಸಿಬಿ ಖರೀದಿಯ ಹಿಂದಿನ ನಿಜವಾದ ಉದ್ದೇಶ ಏನಾಗಿತ್ತು..?
  • 18 ವರ್ಷಗಳ ಬಳಿಕ ವಿಜಯ ಮಲ್ಯ ಹೇಳಿದ ಸತ್ಯ ಏನು?
  • ಖಾಸಗಿ ಪಾಡ್​ ಕಾಸ್ಟ್​ನಲ್ಲಿ ವಿಜಯ್ ಮಲ್ಯ ಸ್ಟೋರಿ

18 ಸೀಸನ್​ಗಳ ಐಪಿಎಲ್​​ ಟೈಟಲ್ ದಾಹವನ್ನ ಈ ಬಾರಿ ಆರ್​ಸಿಬಿ ನೀಗಿಸಿದೆ. ಇದೇ ಮೊದಲ ಬಾರಿಗೆ ಚಾಂಪಿಯನ್​ ಆಗಿ ಇನ್ನೂ ಹಲ್​ಚಲ್​ ನಡೆಸ್ತಲೇ ಇದೆ. ಈ ನಡುವೆ ಸಡನ್ನಾಗಿ ಪ್ರತ್ಯಕ್ಷವಾದ ಆರ್​​ಸಿಬಿ ಫೌಂಡರ್​​ ವಿಜಯ್​ ಮಲ್ಯ, 18 ವರ್ಷಗಳ ಬಳಿಕ ಆರ್​ಸಿಬಿಯನ್ನ ಖರೀದಿ ಮಾಡಿದ್ದರ ಹಿಂದಿನ, ಅಸಲಿ ಸತ್ಯವನ್ನ ಹೇಳಿಕೊಂಡಿದ್ದಾರೆ. ಈ ವಿಷ್ಯ ಗೊತ್ತಾದರೆ ನೀವು ಶಾಕ್​ ಆಗ್ತೀರಿ..

2008ರ ಐಪಿಎಲ್​​ ಸಮಯದಲ್ಲಿ ವಿಜಯ್​​ ಮಲ್ಯಗೆ, ಮುಂಬೈ ಇಂಡಿಯನ್ಸ್ ತಂಡ ಸೇರಿ ಇನ್ನೂ ಮೂರು ಫ್ರಾಂಚೈಸಿಗಳಿಗೆ ಬಿಡ್ ಮಾಡುವ ಅವಕಾಶವಿತ್ತು. ಬಟ್​ ಆ ಟೈಮ್​ನಲ್ಲಿ ಮಲ್ಯರಿಗೂ ಒಂದು ಹೆಜ್ಜೆ ಮುಂದಿದ್ದ ಮುಕೇಶ್ ಅಂಬಾನಿ, ಮುಂಬೈ ಟೀಮ್ ಹೆಚ್ಚಿನ ಬೆಲೆಯಲ್ಲಿ ಖರೀದಿಸಿದ್ರು. ಹಾಗಾಗಿ ಮಲ್ಯಗೆ ಈ ಚಾನ್ಸ್​ ಮಿಸ್​ ಆಗಿತ್ತು. ಕೊನೆಗೆ ವಿಜಯ್ ಮಲ್ಯ RCB ಯನ್ನ 112 ಮಿಲಿಯನ್ಸ್ ಅಂದ್ರೆ 600 -700 ಕೋಟಿ ಕೊಟ್ಟು ಖರೀದಿ ಮಾಡ್ತಾರೆ.

ಇದನ್ನೂ ಓದಿ: ರಸ್ತೆಯಲ್ಲಿ ಮಲಗಿ ರಾತ್ರಿ ಕಳೆದ ಸ್ಪೀಕರ್ ಯು.ಟಿ ಖಾದರ್; ಹಜ್ ಪ್ರವಾಸದಲ್ಲಿ ವಿಶೇಷ ಪ್ರಾರ್ಥನೆ

‘IPL’ ಅನ್ನ ಗೇಮ್ ಚೇಂಜರ್ ಆಗಿ ಮಾಡಿದ್ನಾ ಮಲ್ಯ?

RCB ಫ್ರಾಂಚೈಸಿಗಾಗಿ ಮಲ್ಯ ಬಿಡ್ ಮಾಡಿದಾಗ, ಐಪಿಎಲ್​​ ಅನ್ನ ಭಾರತೀಯ ಕ್ರಿಕೆಟ್‌ಗೆ ಗೇಮ್ ಚೇಂಜರ್ ಆಗಿ ಮಾಡಲು ಮಲ್ಯ ನಿರ್ಧರಿಸಿದ್ರಂತೆ. ಬೆಂಗಳೂರಿನ ಜೋಶ್​​​ ಇರುವ ಒಂದು ತಂಡವನ್ನ ರಚಿಸಿ ಟ್ರೆಂಡ್​ ಸೆಟ್​ ಮಾಡಿ ಆ ತಂಡವನ್ನ ಮೈದಾನದಲ್ಲಷ್ಟೇ ಅಲ್ಲದೇ ಹೊರಗೂ ಬೆಸ್ಟ್​ ಅನಿಸುವ ಬ್ರ್ಯಾಂಡ್​ನಂತೆ ಮಾಡುವ ಆಲೋಚನೆ ಮಲ್ಯರದ್ದಾಗಿತ್ತು. ಇದನ್ನ ಸ್ವತಃ ವಿಜಯ್​ ಮಲ್ಯರೇ ಒಂದು ಖಾಸಗಿ ಪಾಡ್​ ಕಾಸ್ಟ್​ನಲ್ಲಿ ಹೇಳಿಕೊಂಡಿದ್ದಾರೆ​.

ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ವೈಷ್ಣವಿ ಗೌಡ.. ಶುಭ ಕ್ಷಣಗಳ ಫೋಟೋ ಹಂಚಿಕೊಂಡ ನಟಿ | Photos

ಕೊಹ್ಲಿಯನ್ನ ಖರೀದಿಸಿದ್ದೇಕೆ ಎಂದು ಹೇಳಿದ ಮಲ್ಯ

ಆ ಸಮಯದಲ್ಲೇ ಆರ್‌ಸಿಬಿಯನ್ನ ಪವರ್​ಫುಲ್​ ಆಗಿ ಮಾಡಬಲ್ಲ ಶಕ್ತಿಶಾಲಿ ಆಟಗಾರ ಕೊಹ್ಲಿ ಅನ್ನೋದು ಮಲ್ಯ ನಂಬಿಕೆ. ಕೊಹ್ಲಿ ಆಯ್ಕೆಗೂ ಮೊದಲು ಕೊಹ್ಲಿ ಅಂಡರ್ -19 ವಿಶ್ವಕಪ್ ಆಡಿ ಮಲ್ಯರನ್ನ ಸೆಳೆದಿದ್ದರಂತೆ. ಅದಕ್ಕಾಗಿಯೇ ಮಲ್ಯ ಕೊಹ್ಲಿರನ್ನ ಸೆಲೆಕ್ಟ್​ ಮಾಡಿಕೊಂಡಿದ್ದರು. ಈ ಗ್ಯಾಪ್​ನಲ್ಲಿ ಎಷ್ಟೋ ಮಂದಿ ಆಟಗಾರರು ಆರ್​ಸಿಬಿಯಲ್ಲಿ ಬಂದು ಹೋಗಿದ್ದಾರೆ. ಆದರೆ 18 ವರ್ಷಗಳ ಕಳೆದ ಮೇಲೂ ಕೊಹ್ಲಿಯನ್ನ ಆರ್​ಸಿಬಿ ತಂಡದಲ್ಲೇ ನೋಡಿ ಮಲ್ಯಗೆ ಆಶ್ಚರ್ಯವಾಗಿದೆ ಎಂದು ಹೇಳಿಕೊಂಡಿದ್ದಾರೆ.

ಆರ್​ಸಿಬಿ ಖರೀದಿಸಲು ಕಾರಣ ಕ್ರೀಡಾ ಸ್ಫೂರ್ತಿಯಲ್ಲ, ಬಿಸಿನೆಸ್​​!

ನಿಮಗೆಲ್ಲಾ ಗೊತ್ತಿದ್ದಂತೆ ವಿಜಯ್​ ಮಲ್ಯ, ಲಿಕ್ಕರ್​ ಬಿಸಿನೆಸ್​ ಮಾಡ್ತಿದ್ದರು. ಹಾಗೆ ಐಷಾರಾಮಿ ವಿಮಾನದ ಸರ್ವಿಸ್​ಗಳನ್ನೂ ಕೊಡ್ತಿದ್ದರು. ತನ್ನ ವಿಸ್ಕಿ ಬ್ರಾಂಡ್ "ರಾಯಲ್ ಚಾಲೆಂಜ್" ಅನ್ನ ಪ್ರಚಾರ ಮಾಡುವುದಕ್ಕಾಗಿಯೇ, RCB ತಂಡವನ್ನ ಖರೀದಿ ಮಾಡಿದ್ದೆ. ಅದರ ಹಿಂದೆ ಯಾವುದೇ ಕ್ರಿಕೆಟ್ ಪ್ರೀತಿ ಇಲ್ಲ ಎಂದು ಅಸಲಿ ಸತ್ಯವನ್ನ ಪಾಡ್​ಕಾಸ್ಟ್​​ನಲ್ಲಿ ವಿಜಯ್​ ಮಲ್ಯ ಬಾಯಿಬಿಟ್ಟಿದ್ದಾರೆ.

ಇದನ್ನೂ ಓದಿ: ಅಭಿಮಾನಿಗಳಿಗೆ RCB ಅಂದ್ರೆ ಜೀವ.. ಫ್ರಾಂಚೈಸಿ ಮಾಲೀಕರಿಗೆ ಫ್ಯಾನ್ಸ್ ಅಂದ್ರೆ ಜಸ್ಟ್ ಬ್ಯುಸಿನೆಸ್..!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment