ವಿಶ್ವದ ಯಾವುದೇ ಮೂಲೆಯಲ್ಲಿದ್ರೂ ಆರ್ಸಿಬಿಗಾಗಿ ಆ ಸಂದೇಶ
27 ರನ್ಗಳಿಂದ CSKಯನ್ನು ಮಣಿಸಿ ಆರ್ಸಿಬಿ ಗೆಲುವು ಪಡೆದಿದೆ
ಆರ್ಸಿಬಿ ಬಗ್ಗೆ ಉದ್ಯಮಿ ವಿಜಯ್ ಮಲ್ಯ ಹೇಳಿರುವುದು ಏನು?
ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಡು ಆರ್ ಡೈ ಮ್ಯಾಚ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಜಿದ್ದಾಜಿದ್ದಿ ನಡೆಸಿದ್ದವು. ಹೈವೋಲ್ಟೇಜ್ ಮ್ಯಾಚ್ನಲ್ಲಿ ಚೆನ್ನೈಯನ್ನು 27 ರನ್ಗಳಿಂದ ಮಣಿಸಿ ಆರ್ಸಿಬಿ ಜಯಭೇರಿ ಬಾರಿಸಿದೆ. ಇನ್ನು ಬೆಂಗಳೂರು ತಂಡ ಪ್ಲೇ ಆಫ್ಗೆ ಎಂಟ್ರಿಕೊಟ್ಟಿದ್ದಕ್ಕೆ ಆರ್ಸಿಬಿಯ ಮಾಜಿ ಮಾಲೀಕ ವಿಜಯ ಮಲ್ಯ ಅವರು ಅಭಿನಂದನೆ ತಿಳಿಸಿದ್ದಾರೆ.
ಈ ಬಗ್ಗೆ ಎಕ್ಸ್ ಪೋಸ್ಟ್ನಲ್ಲಿ ಉದ್ಯಮಿ ವಿಜಯ್ ಮಲ್ಯ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಆರ್ಸಿಬಿ ಪ್ಲೇ ಆಫ್ಗೆ ಎಂಟ್ರಿ ಕೊಟ್ಟಿದ್ದಕ್ಕೆ ತುಂಬಾ ಸಂತೋಷವಾಗುತ್ತಿದೆ. ಈ ಮೂಲಕ ಹೃದಯ ಪೂರಕವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಸತತ ಸೋಲುಗಳಿಂದ ಗೆಲುವಿನ ಟ್ರ್ಯಾಕ್ಗೆ ಮರಳಿರುವುದು ಅದ್ಭುತ. ಟ್ರೋಫಿ ಗೆಲ್ಲುವ ಕಡೆಗೆ ಆರ್ಸಿಬಿ ಇನ್ನಷ್ಟು ಆಕ್ರಮಣಕಾರಿಯಾಗಿ ಆಡಬೇಕು ಎಂದು ಉದ್ಯಮಿ ವಿಜಯ್ ಮಲ್ಯ ಹೇಳಿದ್ದಾರೆ.
Heartiest congratulations to RCB for qualifying in the top four and reaching the IPL playoffs. Great determination and skill have created a winning momentum after a disappointing start. Onward and upward towards the trophy.
— Vijay Mallya (@TheVijayMallya) May 18, 2024
ಈ ಹಿಂದೆ ಆರ್ಸಿಬಿ ಮಹಿಳಾ ತಂಡ WPL ಟೂರ್ನಿಯ ಫೈನಲ್ನಲ್ಲಿ ಕಪ್ ಗೆದ್ದಾಗಲೂ ವಿಜಯ್ ಮಲ್ಯ ಅಭಿನಂದನೆ ಸಲ್ಲಿಸಿದ್ದರು. ಇದೀಗ ಚೆನ್ನೈ ವಿರುದ್ಧ ಆರ್ಸಿಬಿ ಗೆದ್ದು ಪ್ಲೇ ಆಫ್ಗೆ ಹೋಗಿದ್ದಕ್ಕೆ ಮಲ್ಯ ಶುಭಾಶಯಗಳನ್ನು ತಿಳಿಸಿದ್ದಾರೆ. RCB ಪುರುಷರ ತಂಡ ಐಪಿಎಲ್ ಗೆದ್ದರೆ ಈ ಖುಷಿ ಡಬಲ್ ಆಗಲಿದೆ. ತಂಡಕ್ಕೆ ಒಳ್ಳೆಯದಾಗಲಿ ಎಂದು ಮಲ್ಯ ತಮ್ಮ ಎಕ್ಸ್ ಖಾತೆಯಲ್ಲಿ ಬರೆದು ಶೇರ್ ಮಾಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ