Advertisment

RCBvsRR: ಎಲಿಮಿನೇಟ್​ ಪಂದ್ಯಕ್ಕೂ ಮುನ್ನ ಆರ್​ಸಿಬಿಗೆ ವಿಶೇಷ ಸಂದೇಶ ಕಳುಹಿಸಿದ ವಿಜಯ ಮಲ್ಯ! ಏನಂದ್ರು?

author-image
AS Harshith
Updated On
RCBvsRR: ಎಲಿಮಿನೇಟ್​ ಪಂದ್ಯಕ್ಕೂ ಮುನ್ನ ಆರ್​ಸಿಬಿಗೆ ವಿಶೇಷ ಸಂದೇಶ ಕಳುಹಿಸಿದ ವಿಜಯ ಮಲ್ಯ! ಏನಂದ್ರು?
Advertisment
  • ಇಂದು ಆರ್​ಸಿಬಿ ಮತ್ತು ರಾಜಸ್ಥಾನ್​ ನಡುವೆ ಎಲಿಮಿನೇಟೆಡ್​​ ಪಂದ್ಯ
  • ವಿದೇಶದಲ್ಲಿ ಕುಳಿತು ಆರ್​ಸಿಬಿ ಕುರಿತು ಟ್ವೀಟ್​ ಮಾಡಿದ ವಿಜಯ ಮಲ್ಯ
  • ಆರ್​ಸಿಬಿಗಾಗಿ ನಾನು ಮಾಡಿದ ಉತ್ತಮ ಆಯ್ಕೆಯೇ ಅವನು ಎಂದ ಮದ್ಯದ ದೊರೆ

ಇಂದು ಎಲಿಮಿನೇಟ್​ ಪಂದ್ಯಕ್ಕಾಗಿ ಫ್ಯಾನ್ಸ್​ ಮಾತ್ರವಲ್ಲ, ಆರ್​ಸಿಬಿ ತಂಡದ ಮಾಜಿ ಒಡೆಯ ವಿಜಯ ಮಲ್ಯ ಕೂಡ ಕಾಯುತ್ತಿದ್ದಾರೆ. ಮಾತ್ರವಲ್ಲದೆ ಟ್ವೀಟ್​ ಮಾಡುವ ಮೂಲಕ ಇಂದಿನ ಪಂದ್ಯಕ್ಕಾಗಿ ಕಾಯುತ್ತಾ ಚಡಪಡಿಕೆಯನ್ನು ತೋರ್ಪಡಿಸಿದ್ದಾರೆ. ಜೊತೆಗೆ ತಂಡಕ್ಕೆ ಶುಭ ಹಾರೈಸಿದ್ದಾರೆ.

Advertisment

‘‘ನಾನು ಆರ್‌ಸಿಬಿ ಫ್ರಾಂಚೈಸಿಗಾಗಿ ಬಿಡ್ ಮಾಡಿದಾಗ ಮತ್ತು ನಾನು ವಿರಾಟ್‌ ಕೊಹ್ಲಿಯನ್ನು ತಂಡಕ್ಕೆ ಸೇರಿಸಲು ಬಿಡ್ ಮಾಡಿದಾಗ, ನನ್ನ ಒಳಗಿನ ಪ್ರವೃತ್ತಿ ಇದಕ್ಕಿಂತ ಉತ್ತಮ ಆಯ್ಕೆಗಳನ್ನು ಮಾಡಲು ಸಾಧ್ಯವಿಲ್ಲ ಎಂದು ಹೇಳಿತು. ಆದರೀಗ ಐಪಿಎಲ್ ಟ್ರೋಫಿ ಪಡೆಯಲು ಆರ್‌ಸಿಬಿಗೆ ಉತ್ತಮ ಅವಕಾಶವಿದೆ ಎಂದು ನನ್ನ ಆಂತರಿಕ ಪ್ರವೃತ್ತಿ ಹೇಳುತ್ತದೆ. ತಂಡಕ್ಕೆ ಒಳ್ಳೆಯದಾಗಲಿ’’ ಎಂದು ಹೇಳುವ ಮೂಲಕ ಹಾರೈಸಿದ್ದಾರೆ.


">May 21, 2024

ಇದನ್ನೂ ಓದಿ: RCBvsRR: ಇಂದು ಯಾರಿದ್ದಾರೆ? ಯಾರಿಲ್ಲ? ಇತ್ತಂಡಗಳ ಸಂಭಾವ್ಯ ಆಟಗಾರರು ಇವರೇ ನೋಡಿ

Advertisment

ಸದ್ಯ ಭಾರತದಿಂದ ಕಾಲ್ಕಿತ್ತಿರುವ ಮದ್ಯದ ದೊರೆ ವಿಜಯ್​ ಮಲ್ಯ ಲಂಡನ್​ನಲ್ಲಿ ಬೀಡುಬಿಟ್ಟಿದ್ದಾರೆ. ಆದರೂ ತಾನು ಹುಟ್ಟು ಹಾಕಿದ ತಂಡವನ್ನು ಮಲ್ಯ ಮರೆಯಲಿಲ್ಲ ಎಂಬುದಕ್ಕೆ ಅವರ ಈ ಟ್ವೀಟ್​ ಸಾಕ್ಷಿ. ಅದರಲ್ಲೂ ಭಾರತದಲ್ಲಿ ನಡೆಯುತ್ತಿರುವ ಇಂದಿನ ಎಲಿಮಿನೇಟ್​ ಪಂದ್ಯದ ಬಗ್ಗೆ ವಿಜಯ್​ ಮಲ್ಯಗೆ ಮಾಹಿತಿ ಇದೆ. ಹಾಗಾಘಿ ಮಧ್ಯರಾತ್ರಿ 2 ಗಂಟೆಗ ಸುಮಾರಿಗೆ ವಿದೇಶದಲ್ಲಿ ಕುಳಿತು ಟ್ವೀಟ್​ ಮಾಡಿದ್ದಾರೆ. ಜೊತೆಗೆ ಇಂದಿನ ಪಂದ್ಯ ವೀಕ್ಷಿಸುವ ಕುತೂಹಲದಲ್ಲಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment