/newsfirstlive-kannada/media/post_attachments/wp-content/uploads/2025/06/RCB-Mallya.jpg)
ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಮೊದಲ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಚಾಂಪಿಯನ್ ಆಗಿದೆ. ಬೆನ್ನಲ್ಲೇ ಆರ್‌ಸಿಬಿ ಮಾಜಿ ಮಾಲೀಕ ವಿಜಯ್ ಮಲ್ಯ ಫುಲ್ ಖುಷಿಯಾಗಿದ್ದು, ತಂಡವನ್ನು ಅಭಿನಂದಿಸಿದ್ದಾರೆ.
ಸೋಶಿಯಲ್ ಮೀಡಿಯಾ ವೇದಿಕೆ X ನಲ್ಲಿ ಮಲ್ಯ ಬರೆದುಕೊಂಡಿದ್ದಾರೆ. 18 ವರ್ಷಗಳ ನಂತರ RCB ಅಂತಿಮವಾಗಿ IPL ಚಾಂಪಿಯನ್ ಆಗಿದೆ. ಐಪಿಎಲ್ ಶುರುವಾದಗಿಂದ ಇಲ್ಲಿಯವರೆಗೆ ಆರ್‌ಸಿಬಿ ಉತ್ತಮ ಅಭಿಯಾನ ಮಾಡಿದೆ. ಟ್ರೋಫಿ ಗೆದ್ದ ನಿಮಗೆ ಅನಂತ ಅಭಿನಂದನೆಗಳು! ಈ ಸಲ ಕಪ್ ನಮ್ದೇ!! ಎಂದು ಮಲ್ಯ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಇಂದು ರಾತ್ರಿ ನಾನು ಮಗುವಿನಂತೆ ಮಲಗುತ್ತೇನೆ.. ಕಪ್ ಗೆದ್ದ ಬಳಿಕ ಕೊಹ್ಲಿ ಏನಂದ್ರು..?
RCB are IPL Champions finally after 18 years. Superb campaign right through the 2025 tournament. A well balanced team Playing Bold with outstanding coaching and support staff. Many congratulations ! Ee sala cup namde !!
— Vijay Mallya (@TheVijayMallya) June 3, 2025
ಐಪಿಎಲ್ 2025ರ ಚಾಂಪಿಯನ್ ಆಗಿರುವ ಆರ್‌ಸಿಬಿಗೆ 20 ಕೋಟಿ ರೂಪಾಯಿ ಹಣ ಬಹುಮಾನವಾಗಿ ನೀಡಲಾಗಿದೆ. ಕಳೆದ ವರ್ಷ ಕೋಲ್ಕತ್ತಾ ನೈಟ್ ರೈಡರ್ಸ್ ಚಾಂಪಿಯನ್ ಆಗಿತ್ತು. ಸೋತ ತಂಡ ಪಂಜಾಬ್ ಕಿಂಗ್ಸ್ಗೆ 13 ಕೋಟಿ ರೂಪಾಯಿ ಬಹುಮಾನ ಸಿಕ್ಕಿದೆ. ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟಾನ್ಸ್ ಕೂಡ ಖಾಲಿ ಕೈಯಲ್ಲಿ ಹಿಂತಿರುಗುವುದಿಲ್ಲ. ಪ್ಲೇ-ಆಫ್‌ಗೆ ಪ್ರವೇಶ ಹಿನ್ನೆಲೆಯಲ್ಲಿ ಕ್ರಮವಾಗಿ 7 ಕೋಟಿ ಮತ್ತು 6.5 ಕೋಟಿ ರೂಪಾಯಿ ಹಣ ಪಡೆದಿವೆ.
ಪಂದ್ಯ ಏನಾಯಿತು?
ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್ ಮ್ಯಾಚ್ ನಡೆಯಿತು. ಟಾಸ್ ಸೋತು ಆರ್‌ಸಿಬಿ ಮೊದಲು ಬ್ಯಾಟಿಂಗ್ ಮಾಡಿತ್ತು. ಕೊಹ್ಲಿ ಅವರ 43 ರನ್‌ಗಳ ನೆರವಿನಿಂದ ಆರ್‌ಸಿಬಿ 190 ರನ್‌ಗಳ ಬೃಹತ್ ಸ್ಕೋರ್ ಗಳಿಸಿತ್ತು. 191 ರನ್‌ಗಳ ಗುರಿ ಬೆನ್ನು ಹತ್ತಿದ್ದ ಪಂಜಾಬ್ ಕಿಂಗ್ಸ್, 20 ಓವರ್‌ಗಳಲ್ಲಿ ಕೇವಲ 184 ರನ್‌ಗಳಿಸಿ ಸೋಲಿಗೆ ಶರಣಾಯ್ತು.
ಇದನ್ನೂ ಓದಿ: ಪಂಜಾಬ್ ಕಿಂಗ್ಸ್ಗೆ 13 ಕೋಟಿ ಹಣ.. ಚಾಂಪಿಯನ್ ಆರ್‌ಸಿಬಿಗೆ ಕೋಟಿ ಕೋಟಿ ದುಡ್ಡು..!