Advertisment

ಕಾರು ಖರೀದಿಸೋ ಪ್ಲಾನ್​ ಇದೆಯಾ? ವಿಜಯ ಮಲ್ಯ ಕಾರು ಸೇಲ್​​ಗಿದೆ

author-image
AS Harshith
Updated On
ಕಾರು ಖರೀದಿಸೋ ಪ್ಲಾನ್​ ಇದೆಯಾ? ವಿಜಯ ಮಲ್ಯ ಕಾರು ಸೇಲ್​​ಗಿದೆ
Advertisment
  • ‘9999’ ವಿಐಪಿ ನೋಂದಣಿಯ ಕಾರು.. ಬೆಲೆ ಎಷ್ಟು ಗೊತ್ತಾ?
  • 6.2 ಮೀಟರ್​ನಷ್ಟು ಉದ್ದದ ಮರ್ಸಿಡಿಸ್​​ ಕಂಪನಿಯ ಕಾರು ಸೇಲ್​​ಗೆ
  • 33,971 ಕಿಮೀ ಮಾತ್ರ ಚಲಿಸಿರೋ ಈ ಸೇಡಾನ್​ ಕಾರಿನ ವಿಶೇಷತೆ ಏನು ಗೊತ್ತಾ?

ಕಾರು ಖರೀದಿಸೋ ಪ್ಲಾನ್​ ಇದೆಯಾ? ಐಷಾರಾಮಿ ಕಾರು ಖರೀದಿಯೋ ಯೋಚನೆ ಇದೆಯಾ? ಅದರಲ್ಲೂ ಕಡಿಮೆ ಬೆಲೆಗೆ ಐಷಾರಾಮಿ ಕಾರು ಮನೆಗೆ ಕೊಂಡೊಯ್ಯಲು ಬಯಸುತ್ತಿದ್ದೀರಾ?. ಕಿಂಗ್​​ಫಿಶರ್ ಏರ್​​ಲೈನ್ಸ್​ನ ಮಾಜಿ ಮಾಲೀಕನ ವಿಜಯ್​ ಮಲ್ಯರವರ ಕಾರೊಂದು ಮಾರಾಟಕ್ಕಿದೆ.​ ನೀವೂ ಖರೀದಿಸಬಹುದು!.

Advertisment

ಮರ್ಸಿಡಿಸ್​ ಮೇಬ್ಯಾಕ್​​​ 62 ಕಾರನ್ನು ಮಾರಾಟಕ್ಕೆ ಇರಿಸಲಾಗಿದೆ. ಇದು ಕಿಂಗ್​​ಫಿಶರ್ ಏರ್​​ಲೈನ್ಸ್​ನ ಮಾಜಿ ಮಾಲೀಕನ ವಿಜಯ್​ ಮಲ್ಯರವರಿಗೆ ಸೇರಿದ್ದಾಗಿದೆ. ಅಲ್ಟ್ರಾ ಐಷಾರಾಮಿ ಸೆಡಾನ್​ ಕಾರೆಂದೇ ಇದು ಗುರುತಿಸಿಕೊಂಡಿದೆ.

publive-image

ಇದನ್ನೂ ಓದಿ: VIDEO: ಡಿವೋರ್ಸ್​​ ಪಾರ್ಟಿ ಆಯೋಜಿಸಿ ಹುಚ್ಚೆದ್ದು ಕುಣಿದ ಮಹಿಳೆ! ಈಕೆ ಯಾರು ಗೊತ್ತಾ?

ವಿಜಯ್​ ಮಲ್ಯ 2009ರಲ್ಲಿ ಈ ಕಾರು ಖರೀದಿಸಿದ್ದಾರೆ. ಆದರೆ ಮರ್ಸಿಡಿಸ್​ ಕಂಪನಿ 2013ರಲ್ಲಿ ಈ ಮಾಡೆಲ್​ನ ಉತ್ಪಾದನೆ ಸ್ಥಗಿತ ಮಾಡಿದೆ. ಸದ್ಯ ವಿಜಯ್​ ಮಲ್ಯರವರ ಮೇಬ್ಯಾಕ್​ 62 ಹೆಸರಿನ ಕಾರು ಮಾರಾಟಕ್ಕಿದ್ದು, 2.49 ಕೋಟಿಗೆ ಸೇಲ್​ ಮಾಡಲಾಗುತ್ತಿದೆ.

Advertisment

publive-image

ಇದನ್ನೂ ಓದಿ: ಶಾಲಾ ​ಮಕ್ಕಳನ್ನು ಕರೆದೊಯ್ಯುವ ವೇಳೆ ಹೃದಯಾಘಾತ.. ಸ್ಕೂಲ್​​ ಬಸ್​ ಚಾಲಕ ಸಾವು, 20 ಮಕ್ಕಳ ಪರಿಸ್ಥಿತಿ?

ಅಂದಹಾಗೆಯೇ ಈ ಕಾರಿನ ನಂಬರ್​ ವಿಶೇಷವಾಗಿದೆ. ‘9999’ ವಿಐಪಿ ನೋಂದಣಿಯ ಕಾರು ಇದಾಗಿದೆ. ಪಾಂಡಿಚೇರಿಯಲ್ಲಿ ನೋಂದಾಯಿಸಲ್ಪಟ್ಟಿದೆ. ಕಪ್ಪು ಮತ್ತು ಚಿನ್ನದ ಡ್ಯುಯೆಲ್​ ಟೋನ್​ ಶೇಡ್​ನಲ್ಲಿದೆ.

publive-image

ಮರ್ಸಿಡಿಸ್​ ಮೇಬ್ಯಾಕ್​​​ 62 ಕಾರಿನ ಪೂರ್ತಿ ಬಣ್ಣ ಕಪ್ಪು ಆಗಿದೆ. ಆದರೆ ಕಾರಿನ ಸೈಡ್​​ ಪ್ಯಾನೆಲ್​​​ಗಳ ಗೋಲ್ಡ್​ ಬಣ್ಣದ ದೊಡ್ಡ ಪಟ್ಟಿಯಿದೆ. ವಿಜಯ ಮಲ್ಯರವರು ಈ ಕಾರನ್ನು 2004ರಲ್ಲಿ ತರಿಸಿದ್ದರು. ಆದೆ 2009ರಲ್ಲಿ ನೋಂದಯಿಸಿದರು.

Advertisment

ಇದನ್ನೂ ಓದಿ: ಕೊಲೆಯಾದ ವ್ಯಕ್ತಿ ತೊಡೆ ಮೇಲೆ ಬರೋಬ್ಬರಿ 22 ಹೆಸರು ಪತ್ತೆ.. ಬೆಚ್ಚಿಬಿದ್ದ ಪೊಲೀಸ್ರು!

ಮೇಬ್ಯಾಕ್​ 62 ಕಾರು ಒಟ್ಟು 33,971 ಕಿಮೀ ಮಾತ್ರ ಚಲಿಸಿದೆ. ಇನ್ನು ಈ ಕಾರಿನಲ್ಲಿ 5.5 ಲೀಟರ್​​ ಟ್ವಿನ್​ ಟರ್ಬೋ ಚಾರ್ಜರ್ ಹೊಂದಿದ್ದು, ವಿ12 ಪೆಟ್ರೋಲ್​ ಎಂಜಿನ್ ಹೊಂದಿದೆ. 543ಬಿಹೆಚ್​ಪಿ ಎಂಜಿನ್​​ ಮತ್ತು 900 ಎನ್​​ಎಮ್​ ಟಾರ್ಕ್​ ಉತ್ಪಾದಿಸುತ್ತದೆ. ಐದು ಗೇರ್​ನಿಂದ ಕೂಡಿರುವ ಮೇಬ್ಯಾಕ್​ 62 ಕಾರು 6.2 ಮೀಟರ್​ನಷ್ಟು ಉದ್ದವಿದೆ.​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment