newsfirstkannada.com

ಕೊನೆಗೂ ಗುಡ್‌ನ್ಯೂಸ್‌ ಕೊಟ್ಟ ವಿಜಯ್ ಮಲ್ಯ ಪುತ್ರ ಸಿದ್ದಾರ್ಥ್‌; ಮಲ್ಯ ಸೊಸೆ ಯಾರು ಗೊತ್ತಾ?

Share :

Published June 18, 2024 at 4:32pm

  ದೇಶ ಬಿಟ್ಟು ಹೋದ ಮೇಲೆ ಶುರುವಾದ ಸಿದ್ದಾರ್ಥ್ ಹೊಸ ಪ್ರೀತಿ

  ದೀಪಿಕಾ ಪಡುಕೋಣೆಯಿಂದ ದೂರಾದ ಮೇಲೆ ಏಕಾಂಗಿಯಾಗಿದ್ದರು

  ಸಿದ್ದಾರ್ಥ್‌ ಮಲ್ಯ ಹಾಗೂ ಜಾಸ್ಮಿನ್ ಮದುವೆಗೆ ಭರ್ಜರಿ ತಯಾರಿ

ಭಾರತದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಅವರ ಪುತ್ರ ಸಿದ್ದಾರ್ಥ ಮಲ್ಯಗೆ ಕೊನೆಗೂ ಕಂಕಣ ಭಾಗ್ಯ ಕೂಡಿ ಬಂದಿದೆ. ಸಿದ್ದಾರ್ಥ್ ಅವರು ತನ್ನ ಬಹುಕಾಲದ ಗೆಳತಿ ಜಾಸ್ಮಿನ್‌ರನ್ನು ವಿವಾಹವಾಗುವುದಾಗಿ ಹೇಳಿದ್ದಾರೆ.

ಸಿದ್ದಾರ್ಥ್‌ ಮಲ್ಯ ಹಾಗೂ ಜಾಸ್ಮಿನ್ ಅವರ ಆಲ್ಬಂ ಫೋಟೋ ಒಂದನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಈ ಫೋಟೋ ಜೊತೆಗೆ ಸಿದ್ದಾರ್ಥ್ ಅವರು ವೆಡ್ಡಿಂಗ್ ವೀಕ್ ಆರಂಭವಾಗಿದೆ ಎಂದು ಬರೆದುಕೊಂಡಿದ್ದಾರೆ. ಹೀಗಾಗಿ ಮಲ್ಯ ಮನೆಯಲ್ಲಿ ಮದುವೆ ಸಂಭ್ರಮ ಕಳೆಗಟ್ಟಿದೆ ಎನ್ನಲಾಗಿದೆ.

ಇದನ್ನೂ ಓದಿ: ದರ್ಶನ್ ಸರ್ ನನಗೆ ಗುರು ಸಮಾನರು ಎಂದ ರಚಿತಾ ರಾಮ್! ರೇಣುಕಾಸ್ವಾಮಿ ಹತ್ಯೆ ಬಗ್ಗೆ ಏನಂದ್ರು ಡಿಂಪಲ್​ ಕ್ವೀನ್​ 

ಸಿದ್ದಾರ್ಥ್‌ ಮಲ್ಯ ಅವರಿಗೂ ಬಾಲಿವುಡ್ ನಟಿ ದೀಪಿಕಾ ಪಡುಕೋಣೆಗೂ ಸ್ನೇಹ ಸಂಬಂಧ ಇತ್ತು. ಸಿದ್ದಾರ್ಥ್ ಅವರು ದೀಪಿಕಾ ಅವರನ್ನೇ ಮದುವೆ ಆಗುತ್ತಾರೆ ಅನ್ನೋ ಮಾತು ಕೇಳಿ ಬಂದಿತ್ತು. ಆದರೆ ವಿಜಯ್ ಮಲ್ಯ ಅವರು ದೇಶ ಬಿಟ್ಟು ಹೋದ ಮೇಲೆ ಸಿದ್ದಾರ್ಥ್ ಅವರ ಲವ್ ಸ್ಟೋರಿ ಬದಲಾಗಿದೆ.

ಸಿದ್ದಾರ್ಥ್ ಮಲ್ಯ ಅವರು ಕಳೆದ ವರ್ಷವೇ ತನ್ನ ಗೆಳತಿ ಜಾಸ್ಮಿನ್ ಅವರನ್ನು ಮದುವೆಯಾಗುವುದಾಗಿ ಪ್ರಪೋಸ್ ಮಾಡಿದ್ದರು. ಒಂದು ವರ್ಷದಿಂದ ಸ್ನೇಹಿತರಾಗಿದ್ದ ಸಿದ್ದಾರ್ಥ್ ಹಾಗೂ ಜಾಸ್ಮಿನ್ ಜೋಡಿ ಇದೀಗ ಮದುವೆಯಾಗಲು ನಿರ್ಧರಿಸಿದ್ದಾರೆ. ಇತ್ತೀಚಿಗೆ ಸಿದ್ದಾರ್ಥ್ ಮಲ್ಯ ಅವರು ಮೆಂಟಲ್ ಹೆಲ್ತ್ ಬಗ್ಗೆ ಎರಡು ಪುಸ್ತಕ ಬರೆದಿದ್ದರು. ಲೇಖಕರಾಗಿ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದ ಸಿದ್ದಾರ್ಥ್ ಅವರು ಇದೀಗ ವೆಡ್ಡಿಂಗ್ ವೀಕ್ ಆರಂಭವಾಗಿದೆ ಅನ್ನೋ ಮೂಲಕ ಗುಡ್‌ನ್ಯೂಸ್‌ ಕೊಟ್ಟಿದ್ದಾರೆ.

ಯಾರು ಈ ಜಾಸ್ಮಿನ್?
ಸಿದ್ದಾರ್ಥ್ ಮಲ್ಯ ಅವರ ಕೈ ಹಿಡಿಯುತ್ತಿರುವ ಜಾಸ್ಮಿನ್ ಅವರು ಮಾಡೆಲ್ ಆಗಿದ್ದಾರೆ. ಕ್ಯಾಲಿಫೋರ್ನಿಯಾದ ಹ್ಯಾಲೋವಿನ್ ಪಾರ್ಟಿಯಲ್ಲಿ ಮೊದಲ ಬಾರಿಗೆ ಇವರಿಬ್ಬರ ಪರಿಚಯ ಆಗಿತ್ತು. ದೀಪಿಕಾ ಪಡುಕೋಣೆಯಿಂದ ದೂರದ ಸಿದ್ದಾರ್ಥ್ ಅವರು ಲಂಡನ್‌ಗೆ ಹೋದ ಮೇಲೆ ಏಕಾಂಗಿಯಾಗಿದ್ದರು. ಸಿದ್ದಾರ್ಥ್ ಒಂಟಿಯಾಗಿದ್ದಾಗ ಜಾಸ್ಮಿನ್ ಸ್ನೇಹ ಪ್ರೀತಿಗೆ ತಿರುಗಿತ್ತು. 2023ರಲ್ಲಿ ಎಂಗೇಜ್ ಹಾಗೂ ಡೇಟಿಂಗ್ ಮಾಡುತ್ತಿದ್ದ ಈ ಜೋಡಿ ಮದುವೆಯಾಗಲು ನಿರ್ಧರಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊನೆಗೂ ಗುಡ್‌ನ್ಯೂಸ್‌ ಕೊಟ್ಟ ವಿಜಯ್ ಮಲ್ಯ ಪುತ್ರ ಸಿದ್ದಾರ್ಥ್‌; ಮಲ್ಯ ಸೊಸೆ ಯಾರು ಗೊತ್ತಾ?

https://newsfirstlive.com/wp-content/uploads/2024/06/Siddarth-Malya-Marriage.jpg

Load More