newsfirstkannada.com

ರಿಯಾಲಿಟಿ ಶೋಗಳಿಗೆ ಮತ್ತೆ ಬರ್ತಾರಾ ನಟ ವಿಜಯ್​​ ರಾಘವೇಂದ್ರ..?

Share :

10-08-2023

    ಎಲ್ಲರ ನೋವಿಗೂ ಸ್ಪಂದಿಸೋ ವ್ಯಕ್ತಿತ್ವ ಹೊಂದಿರುವ ಸರಳ ಜೀವಿ!

    ಲವಲವಿಕೆಯಿಂದ ಇರುತ್ತಿದ್ದ ರಾಘು ಮುಖದಲ್ಲಿ ಮಾಯಾವಾದ ನಗು

    ಕಿರುತೆರೆ ಶೋಗಳಲ್ಲಿ ಕಾಣಿಸಿಕೊಳ್ತಾರಾ ನಟ ವಿಜಯ್​ ರಾಘವೇಂದ್ರ

ಕಿರುತೆರೆಯಲ್ಲಿ ಹಲವು ವರ್ಷಗಳಿಂದ ಸಕ್ರಿಯರಾಗಿದ್ದಾರೆ ನಟ ವಿಜಯ್​​ ರಾಘವೇಂದ್ರ. ಸದಾ ನಗುಮುಖದಿಂದ ಎಲ್ಲರ ನೋವಿಗೂ ಸ್ಪಂದಿಸೋ ವ್ಯಕ್ತಿತ್ವ ಹೊಂದಿರುವ ಸರಳ ಜೀವಿ. ರಿಯಾಲಿಟಿ ಶೋಗಳಲ್ಲಿ ಲವಲವಿಕೆಯಿಂದ ಇರುತ್ತಿದ್ದ ರಾಘು ಜೀವನದ ನಗುವೆ ಮಾಯವಾಗಿದೆ. ಇಂತಹ ಸಂದರ್ಭದಲ್ಲಿ ಮತ್ತೆ ರಾಘು ರಿಯಾಲಿಟಿ ಶೋಗೆ ಬರುತ್ತಾರಾ? ಅವರ ಆ ಪ್ರೀತಿ ತುಂಬಿದ ಮಾತುಗಳನ್ನ ಕೇಳಬಹುದಾ ಅನ್ನೋದು ಎಷ್ಟೋ ಅಭಿಮಾನಿಗಳಲ್ಲಿ ಪ್ರಶ್ನೆಯೊಂದು ಮೂಡಿದೆ.

ಜ್ಹೀ ಕನ್ನಡದ ಡ್ರಾಮಾ ಜೂನಿಯರ್ಸ್​, ಡಿಕೆಡಿ, ಸೂಪರ್​ ಕ್ವೀನ್​​​​, ಕಲರ್ಸ್​ನ ಡ್ಯಾನ್ಸಿಂಗ್​ ಚಾಂಪಿಯನ್​ ಸೇರಿದಂತೆ ಹಲವು ಶೋಗಳಲ್ಲಿ ಜಡ್ಜ್​ ಸೀಟ್​ ಅಲಂಕರಿಸಿದ್ದರು ನಟ ವಿಜಯ್​ ರಾಘವೇಂದ್ರ. ಸದ್ಯ ಡಿಕೆಡಿಗೆ ಮತ್ತೆ ಕಮ್​ ಬ್ಯಾಕ್​ ಮಾಡಿದ್ದ ರಾಘು, ತುಂಬಾನೇ ಆ್ಯಕ್ಟಿವ್​ ಆಗಿದ್ದರು. ಅವರ ಈ ಎನರ್ಜಿ ಹಿಂದಿನ ಶಕ್ತಿ ಪ್ರೀತಿಯ ಮಡದಿ ಸ್ಪಂದನಾ ಅವರು 37ನೇ ವಯಸ್ಸಿಗೆ ಹೃದಯಾಘಾತದಿಂದ ಆಗಸ್ಟ್ 7ರಂದು ವಿಧಿವಶರಾಗಿದ್ದಾರೆ. ಈಗ ಆ ಶಕ್ತಿಯನ್ನ ಕಳೆದುಕೊಂಡ ನೋವಿನಲ್ಲಿರುವ ನಟ ವಿಜಯ್​ ರಾಘವೇಂದ್ರ ಅವರು​ ಸದ್ಯಕ್ಕೆ ಡಿಕೆಡಿಯಿಂದ ದೂರ ಉಳಿಯೋ ಚಾನ್ಸ್​ ಇದೆ. ಹೌದು, ಅಪ್ಪು ಮಾಮನ ಅಗಲಿಕೆಯ ನೋವನ್ನೇ ಇನ್ನೂ ಅವರಿಗೆ ಅರಗಿಸಿಕೊಳ್ಳಲು ಆಗುತ್ತಿರಲಿಲ್ಲ.

ಅಪ್ಪು ಬಗ್ಗೆ ಮಾತು ಬಂದಾಗೆಲ್ಲ ಬಿಕ್ಕಿಬಿಕ್ಕಿ ಮಗು ಥರಹ ಕಣ್ಣೀರಿಟ್ಟಿರೋದನ್ನ ಫ್ಯಾನ್ಸ್​ ನೋಡಿದ್ದಾರೆ. ಆ ನೋವಿನ ಗಾಯದ ಮೇಲೆ ಮತ್ತೊಂದು ಬರೆ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಪತ್ನಿಯ ಅಗಲಿಕೆ. ಫ್ಯಾಮಿಲಿ ಜೊತೆ ತುಂಬಾನೇ ಅಟ್ಯಾಚ್​ ಆಗಿರೋ ರಾಘು, ಭಾವುಕ ಜೀವಿ. ಶೋಗಳಲ್ಲಿ ಕುಟುಂಬದವರ ಬಗ್ಗೆ ಮಾತನಾಡುತ್ತಾ ಭಾವುಕರಾಗುತ್ತಿದ್ದರು. ಮೊನ್ನೆ ತಮ್ಮ ಸಹೋದರಿ ಬಗ್ಗೆ ಮಾತನಾಡಿದ್ದರು. ಈಗ ಪ್ರೀತಿಯ ಮಡದಿ ಇನ್ನಿಲ್ಲ ಅನ್ನೋ ನೋವಿನ ಜೊತೆಗೆ ಮಗನ ಭವಿಷ್ಯ ರಾಘು ಹೆಗಲ ಮೇಲಿದೆ.

ಎಲ್ಲಾ ನೋವುಗಳನ್ನ ಮರೆತು ಮಗ ಶೌರ್ಯನಿಗಾಗಿ ಬದುಕನ್ನ ಮತ್ತೆ ಕಟ್ಟಿಕೊಳ್ಳುವ ಸ್ಥೈರ್ಯವನ್ನ ತೆಗೆದುಕೊಳ್ಳಬೇಕಿದೆ. ಕಲಾವಿದರ ಶಕ್ತಿ, ಸ್ಥೈರ್ಯನೇ ಅವರ ಕೆಲಸ. ರಾಘು ಕೂಡ ತಮ್ಮ ಕೆಲಸವನ್ನ ದೈವದಂತೆ ಪೂಜಿಸುವ ವ್ಯಕ್ತಿ. ಹೀಗಾಗಿ ಕೊಂಚ ಗ್ಯಾಪ್​ನ ನಂತರ ಮತ್ತೆ ಶೋಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಒಟ್ಟಿನಲ್ಲಿ ಎಂದಿಗೂ ಮಾಸದ ಘಾಡವಾದ ಗಾಯ ರಾಘು ಮನಸ್ಸಿಗಾಗಿದೆ. ಆದಷ್ಟು ಬೇಗ ರಾಘು ಈ ನೋವಿನಿಂದ ಹೊರಬರುವಂತಾಗಲಿ ಮತ್ತೆ ಎಲ್ಲರ ಜೊತೆ ಬರೆಯುವಂತಾಗಲಿ ಅನ್ನೋದು ಅಭಿಮಾನಿಗಳ ಆಶಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಿಯಾಲಿಟಿ ಶೋಗಳಿಗೆ ಮತ್ತೆ ಬರ್ತಾರಾ ನಟ ವಿಜಯ್​​ ರಾಘವೇಂದ್ರ..?

https://newsfirstlive.com/wp-content/uploads/2023/08/raguhu.jpg

Load More