ವಿಜಯ್​ ರೂಪಾನಿ ದುರಂತ ಅಂತ್ಯದಲ್ಲೂ ಒಂದಾದ ಲಕ್ಕಿ ನಂಬರ್.. ಕುಟುಂಬಕ್ಕೆ ಎರಡೆರಡು ಆಘಾತ

author-image
Ganesh
Updated On
ವಿಜಯ್​ ರೂಪಾನಿ ದುರಂತ ಅಂತ್ಯದಲ್ಲೂ ಒಂದಾದ ಲಕ್ಕಿ ನಂಬರ್.. ಕುಟುಂಬಕ್ಕೆ ಎರಡೆರಡು ಆಘಾತ
Advertisment
  • ವಿಮಾನ ಅಪಘಾತದಲ್ಲಿ ವಿಜಯ್ ರೂಪಾನಿ ದುರ್ಮರಣ
  • ಪತ್ನಿಯನ್ನು ಕರೆತರಲು ಲಂಡನ್​ಗೆ ಹೊರಟ್ಟಿದ್ದ ಮಾಜಿ ಸಿಎಂ
  • ಮಾಜಿ ಸಿಎಂ ವಿಜಯ್​ ರೂಪಾನಿಯವರ ಲಕ್ಕಿ ನಂಬರ್​ 1206

ವಿಜಯ್ ರೂಪಾನಿ.. ಗುಜರಾತ್​ನ ಮಾಜಿ ಸಿಎಂ.. ನಿನ್ನೆ ನಡೆದಿರೋ ಘೋರ ದುರಂತದಲ್ಲಿ ಪ್ರಾಣ ಬಿಟ್ಟವರಲ್ಲಿ ಇವ್ರೂ ಒಬ್ರು.. ಮಯನ್ಮಾರ್​​ನಲ್ಲಿ ಜನನ.. ತುರ್ತುಪರಿಸ್ಥಿತಿಯಲ್ಲಿ ಜೈಲು.. ಸಾಲದಕ್ಕೆ ಲಾಯರ್​.. ಗುಜರಾತಿನ 16ನೇ ಮುಖ್ಯಮಂತ್ರಿಯಾಗಿ ಸೇವೆ.. ಹೀಗೆ ಅನೇಕ ರೀತಿ ಜನರ ಸೇವೆ ಸಲ್ಲಿಸಿದವರು.. ದುರಂತ ಅಂತ್ಯ ಕಂಡಿದ್ದಾರೆ.

ಪತ್ನಿಯನ್ನು ಕರೆತರಲು ಲಂಡನ್​ಗೆ ಹೊರಟ್ಟಿದ್ದ ಮಾಜಿ ಸಿಎಂ

ಏರ್ ಇಂಡಿಯಾ ವಿಮಾನ ಪತನ ಅದೆಷ್ಟೋ ಕುಟುಂಬಗಳ ನಗುವನ್ನ ಕಸಿದುಕೊಂಡಿದೆ ಪ್ರಯಾಣಿಕರ ಮೇಲೆ ಬಿದ್ದ ಬೆಂಕಿ ತಮ್ಮವರನ್ನ ಕಳೆದುಕೊಂಡ ನೋವಿನ ಕಣ್ಣೀರಿಗೆ ಕಾರಣವಾಗಿದೆ. ಹೀಗೆ ಕಣ್ಣೀರಲ್ಲಿ ಮರುಗಿತ್ತಿರುವ ಜನರ ಪೈಕಿ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕುಟುಂಬ ಕೂಡ ಒಂದು. ಲಂಡನ್‌ಗೆ ತೆರಳೋದಕ್ಕೆ ಅಂತ ಏರ್ ಇಂಡಿಯಾ ಫ್ಲೈಟ್​ ಏರಿದ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ದುರಂತ ಅಂತ್ಯ ಕಂಡಿದ್ದಾರೆ.

ಇದನ್ನೂ ಓದಿ: ದುರಂತದಲ್ಲಿ ಜೀವ ಕಳೆದುಕೊಂಡ ಕುಟುಂಬಕ್ಕೆ ತಲಾ ಒಂದು ಕೋಟಿ ಪರಿಹಾರ ಘೋಷಿಸಿದ ಟಾಟಾ ಗ್ರೂಪ್​..

publive-image

ಲಂಡನ್​ನಲ್ಲಿರುವ ಮಗಳ ಮನೆಯಲ್ಲಿದ್ದ ತಮ್ಮ ಪತ್ನಿಯನ್ನು ಕರೆತರಲು ವಿಜಯ್​ ರೂಪಾನಿ ಏರ್​ ಇಂಡಿಯಾ 171 ವಿಮಾನದಲ್ಲಿ ಲಂಡನ್​ಗೆ ಹೊರಟ್ಟಿದ್ದರು.. ವಿಮಾನದೊಳಗೆ ಮಹಿಳೆಯೊಬ್ಬರು ಮಾಜಿ ಸಿಎಂ ವಿಜಯ್​ ರೂಪಾನಿಯವರನ್ನು ನೋಡಿದ ಖುಷಿಯಲ್ಲಿ ಸೆಲ್ಫಿ ತೆಗೆದುಕೊಂಡಿದ್ದಾರೆ. ದುರಂತ ಅಂದ್ರೆ ಇದೇ ಅವರ ಕೊನೆಯ ಫೋಟೋ ಆಗಿದೆ. ವಿಜಯ್​ ರೂಪಾನಿಯವರ ಸಾವು ಖಚಿತವಾಗ್ತಿದ್ದಂತೆ ಅವರ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

ವಿಜಯ್​ ರೂಪಾನಿ ಸಾವಿಗೂ ಲಕ್ಕಿ ನಂಬರ್​ ಲಿಂಕ್​

ಗುಜರಾತ್​ನ ಮಾಜಿ ಸಿಎಂ ವಿಜಯ್​ ರೂಪಾನಿಯವರ ಅಂತಿಮ ಯಾತ್ರೆಯಲ್ಲೂ ಲಕ್ಕಿ ನಂಬರ್ ನಿಗೂಢತೆ ಇದೀಗ ನೋವಿನ ಜೊತೆಗೆ ಅಚ್ಚರಿಗೂ ಕಾರಣವಾಗಿದೆ. ವಿಜಯ್ ರೂಪಾನಿಯ ಅತ್ಯಂತ ಲಕ್ಕಿ ನಂಬರ್ ಎಂದೇ ಪರಿಗಣಿಸಲ್ಪಟ್ಟಿದ್ದ 1206.. ಕೊನೆಯ ಯಾತ್ರೆಯಲ್ಲೂ ಜೊತೆಯಾಗಿದೆ.

ಇದನ್ನೂ ಓದಿ: ಅಪಘಾತದ ನಂತರ ಎದ್ದು ನಡೆಯಲು ಪ್ರಾರಂಭಿಸಿದ.. ಏರ್ ಇಂಡಿಯಾ ದುರಂತದ ವಿಡಿಯೋ..

publive-image

ಲಕ್ಕಿ ನಂಬರ್ ನಿಗೂಢತೆ!
ಮಾಜಿ ಸಿಎಂ ವಿಜಯ್ ರೂಪಾನಿಯ ಲಕ್ಕಿ ನಂಬರ್ ಸಾವಿನಲ್ಲೂ ಜೊತೆಯಾಗಿದೆ. 1206 ಮಾಜಿ ಸಿಎಂ ವಿಜಯ್​ ರೂಪಾನಿಯವರ ಲಕ್ಕಿ ನಂಬರ್​.. ಅವರ ಎಲ್ಲ ಕಾರುಗಳ ರಿಜಿಸ್ಟರ್​ ನಂಬರ್​ 1206.. ರಾಜಕೀಯ ಆರಂಭಿಕ ದಿನಗಳಲ್ಲಿ ಅವರು ಬಳಸಿದ್ದ ಸ್ಕೂಟರ್​ನ ರಿಜಿಸ್ಟರ್​ ನಂಬರ್​ ಕೂಡ 1206.. ಈ ಸಂಖ್ಯೆ ವಿಜಯ್​ ರೂಪಾನಿಗೆ ರಾಜಕೀಯವಾಗಿಯೂ ಯಶಸ್ಸು ತಂದು ಕೊಟ್ಟಿದೆ. ನಿನ್ನೆ ಅವರು ಲಂಡನ್​ಗೆ ತೆರಳಲು ಏರ್​ಪೋರ್ಟ್​ನಲ್ಲಿ ಬೋರ್ಡಿಂಗ್​ ಆದ ಸಮಯ.. 12 ಗಂಟೆ 10 ನಿಮಿಷ.. ಅವರ ಸೀಟ್​ ನಂಬರ್​ ಕೂಡ 12 ಆಗಿತ್ತು. ಇದೀಗ ಕೊನೆಯ ಪ್ರಯಾಣದ ದಿನಾಂಕ ಜೂನ್ 12, ಅಂದರೆ 12-06.. ಹೀಗೆ ಲಕ್ಕಿ ನಂಬರ್ ದಿನವೇ ವಿಜಯ್ ರೂಪಾನಿ ಬದುಕು ಅಂತ್ಯವಾಗಿದ್ದು ನಿಜಕ್ಕೂ ಅಚ್ಚರಿ..

ಇದನ್ನೂ ಓದಿ: ಹಾಸ್ಟೆಲ್​​ನಲ್ಲಿದ್ದ 24 ಭಾವಿ ವೈದ್ಯರೂ ಸೇರಿ 265 ಮಂದಿಯ ಜೀವ ತೆಗೆದ ವಿಮಾನ ದುರಂತ..

ಗುಜರಾತ್​ನ ಮಾಜಿ ಸಿಎಂ ವಿಜಯ್​ ರೂಪಾನಿಯವರ ದುರ್ಮರಣಕ್ಕೆ ಬಿಜೆಪಿ ನಾಯಕರು ಸಂತಾಪವನ್ನು ಸೂಚಿಸಿದ್ದಾರೆ. ಮಾಜಿ ಸಿಎಂ ಕುಟುಂಬಕ್ಕೆ ಏನಾದ್ರೂ ಶಾಪ ಕಾಡ್ತಿದೆಯಾ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ವಿಜಯ್​ ರೂಪಾನಿಯವರ ಕಿರಿಯ ಮಗ. ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಈಗ ವಿಜಯ್​​ ರೂಪಾನಿ ವಿಮಾನ ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದು, ಏನಾದ್ರೂ ಶಾಪ ಇತ್ತಾ ಎಂದು ಸಂಬಂಧಿಕರು ಚರ್ಚೆ ಮಾಡ್ತಿದ್ದಾರೆ.

ಎರಡೆರಡು ಆಘಾತ

ಇತ್ತೀಚೆಗಷ್ಟೇ ವಿಜಯ್ ರೂಪಾನಿ ಕಿರಿಯ ಮಗ ಪೂಜಿತ್ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದ. ಈ ನೋವು ಮರೆಯಾಗೋದಕ್ಕೂ ಮುಂಚೆನೇ ವಿಜಯ್ ಸಾವಿನಿಂದಾಗಿ ಅವರ ಕುಟುಂಬ ನೋವಿನಲ್ಲಿ ಮುಳುಗಿದೆ. ಮಾಜಿ ಸಿಎಂ ನಿಧನಕ್ಕೆ ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರ ಸಂತಾಪ ಸೂಚಿಸಿದ್ದಾರೆ. ಅವರ ಕುಟುಂಬಕ್ಕೆ ಧೈರ್ಯ ತುಂಬುವ ಕೆಲಸ ಮಾಡ್ತಿದ್ದಾರೆ.

ಇದನ್ನೂ ಓದಿ: ಮದುವೆ ಬಳಿಕ ಮೊದಲ ಬಾರಿ ಪತಿಯ ಭೇಟಿಗೆ ಅಂತಾ ಲಂಡನ್ ವಿಮಾನ ಹತ್ತಿದ್ದಳು.. ಕೊನೆಯ ವಿಡಿಯೋ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment