/newsfirstlive-kannada/media/post_attachments/wp-content/uploads/2025/06/Ahmedabad-plane-crash-3.jpg)
ಏರ್ ಇಂಡಿಯಾ ವಿಮಾನ ದುರಂತದಲ್ಲಿ ಗುಜರಾತ್ನ ಮಾಜಿ ಸಿಎಂ ವಿಜಯ್ ರೂಪಾನಿ (Vijay Rupani ) ನಿಧನರಾಗಿದ್ದಾರೆ. ಇಂದು ಮಧ್ಯಾಹ್ನ 1.38ಕ್ಕೆ ಅಹ್ಮದಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅವರು ಲಂಡನ್ಗೆ ಪ್ರಯಾಣ ಬೆಳೆಸಿದ್ದರು.
ಇದನ್ನೂ ಓದಿ: ಭಾರತವನ್ನ ಬೆಚ್ಚಿಬೀಳಿಸಿದ 10 ಘೋರ ವಿಮಾನ ದುರಂತಗಳು.. ಒಂದಕ್ಕಿಂತ ಒಂದು ಕರಾಳ ಅಪಘಾತಗಳು..
ವಿಮಾನವು ಟೇಕ್-ಆಫ್ ಆದ ಕೆಲವೇ ಸೆಕೆಂಡ್ಗಳಲ್ಲಿ ಪತನಗೊಂಡು ದುರಂತ ಸಂಭವಿಸಿದೆ. ವಿಮಾನದಲ್ಲಿ ಒಟ್ಟು 242 ಪ್ರಯಾಣಿಕರಿದ್ದರು. ಏರ್ ಇಂಡಿಯಾ-I71 ಈ ದುರ್ಘಟನೆಯಲ್ಲಿ ವಿಜಯ್ ರೂಪಾನಿ ಪ್ರಾಣ ಕಳೆದುಕೊಂಡಿರುವ ಬಗ್ಗೆ ಕೇಂದ್ರ ಸಚಿವ ಸಿ.ಆರ್.ಪಾಟೀಲ್ ದೃಢಪಡಿಸಿದ್ದಾರೆ. ದುರಂತದಲ್ಲಿ ನಿಧನರಾದ ಎರಡನೇ ಮುಖ್ಯಮಂತ್ರಿ ವಿಜಯ್ ರೂಪಾನಿ ಆಗಿದ್ದಾರೆ.
ವಿಜಯ್ ರೂಪಾನಿ ಅವರು 2016ರಲ್ಲಿ ಮೊದಲ ಬಾರಿಗೆ ಗುಜರಾತ್ನ ಮುಖ್ಯಮಂತ್ರಿಯಾದರು. ಅಂದಿನ ಸಿಎಂ ಆನಂದಿಬೇನ್ ಪಟೇಲ್ ಅವರ ದಿಢೀರ್ ರಾಜೀನಾಮೆ ಬೆನ್ನಲ್ಲೇ, ಮುಖ್ಯಮಂತ್ರಿ ಪಟ್ಟವನ್ನು ಅಲಂಕರಿಸಿದ್ದರು. 2021ರಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿದರು.
ಇದನ್ನೂ ಓದಿ: ಇದೇ ವಿಮಾನ ನಿಲ್ದಾಣದಲ್ಲಿ ನಡೆದಿತ್ತು ಘನ ಘೋರ ದುರಂತ.. 37 ವರ್ಷಗಳ ಬಳಿಕ ಮತ್ತೊಂದು ಅಪಘಾತ..
ರಾಜ್ಕೋಟ್ನ ಪಶ್ಚಿಮ ವಿಧಾನಸಭಾ ಕ್ಷೇತ್ರವನ್ನು ರೂಪಾನಿ ಪ್ರತಿನಿಧಿಸುತ್ತಿದ್ದರು. ಇವರು ಗುಜರಾತ್ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ, ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ರೂಪಾನಿ ಅವರು ಆರ್ಎಸ್ಎಸ್ ಸಕ್ರಿಯ ಕಾರ್ಯಕರ್ತರಾಗುವ ಮೂಲಕ ಸಾರ್ವಜನಿಕ ಬದುಕಿಗೆ ಧುಮುಕಿದರು. ಆರಂಭದ ದಿನಗಳಲ್ಲಿ ಎಬಿವಿಪಿಯಲ್ಲೂ ಗುರುತಿಸಿಕೊಂಡಿದ್ದರು. 1980ರಿಂದ ಬಿಜೆಪಿಯಲ್ಲಿ ಸಕ್ರಿಯರಾಗಿದ್ದರು. ತುರ್ತು ಪರಿಸ್ಥಿತಿ ವೇಳೆ ಆರ್ಎಸ್ಎಸ್ ಪ್ರಚಾರಕರಾಗಿದ್ದ ರೂಪಾನಿ, ಜೈಲು ಶಿಕ್ಷೆ ಕೂಡ ಅನುಭವಿಸಿದ್ದರು. ಮಾತ್ರವಲ್ಲ 2006 ರಿಂದ 2012ವರೆಗೆ ರಾಜ್ಯಸಭೆ ಮೇಂಬರ್ ಆಗಿಯೂ ಕರ್ತವ್ಯ ನಿಭಾಯಿಸಿದ್ದರು.
ಇದನ್ನೂ ಓದಿ: ವಿಮಾನ ದುರಂತದಲ್ಲಿ ಒಂದು ಪಾವಡ.. ಓರ್ವ ಬದುಕಿರುವ ಬಗ್ಗೆ ಕಮಿಷನರ್ ಮಾಹಿತಿ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ