/newsfirstlive-kannada/media/post_attachments/wp-content/uploads/2024/05/Vijaya-sethupathi.jpg)
ವಿಜಯ್​ ಸೇತುಪತಿ ‘ಮಹಾರಾಜ‘ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದು ಅವರ 50ನೇ ಸಿನಿಮಾವಾಗಿದ್ದು, ಸದ್ಯ ಈ ಸಿನಿಮಾದ ಟ್ರೇಲರ್​ ಲಾಂಚ್​ ಆಗಿದೆ. ಯುಟ್ಯೂಬ್​ನಲ್ಲಿ ಮಹಾರಾಜ ಸಿನಿಮಾ ಟ್ರೇಲರ್​ ಧೂಳೆಬ್ಬಿಸುತ್ತಿದೆ.
ಅಂದಹಾಗೆಯೇ ಮಹಾರಾಜ ಸಿನಿಮಾದ ಟ್ರೇಲರ್​ನಲ್ಲಿ ವಿಜಯ್​ ಸೇತುಪತಿ ಅವರ ಪಾತ್ರವನ್ನು ಪರಿಚಯಿಸಲಾಯಿಸಲಾಗಿದೆ. ‘‘ಸರ್​ ನನ್ನ ಹೆಸರು ಮಹಾರಾಜ. ನಾನು ಸಲೂನ್​ ನಡೆಸುತ್ತಿದ್ದೇನೆ. ನನ್ನ ಮನೆಯಲ್ಲಿ ಲಕ್ಷ್ಮೀ ಇದ್ದಾಳೆ. ಎಫ್​ಐಆರ್​ ದಾಖಲಿಸಿ ಬಂದಿದ್ದೇನೆ’’ ಎಂದು ಹೇಳುವ ಮೂಲಕ ಪಾತ್ರ ಪರಿಚಯ ಮಾಡಲಾಗಿದೆ.
ಸದ್ಯ ಟ್ರೇಲರ್​ ಸಾಕಷ್ಟು ಕುತೂಹಲ ಕೆರಳಿಸಿದೆ. ವಿಜಯ್​ ಸೇತುಪತಿ ಏನನ್ನು ಹುಡುತ್ತಿದ್ದಾರೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಅಂದಹಾಗೆಯೇ ಈ ಸಿನಿಮಾದಲ್ಲಿ ಅನುರಾಗ್​ ಕಶ್ಯಪ್​ ಕೂಡ ನಟಿಸಿದ್ದು, ಟ್ರೇಲರ್​ ಕೊನೆ ಅವರಿಂದಲೇ ಮುಕ್ತಾಯವಾಗುತ್ತದೆ.
ಇದನ್ನೂ ಓದಿ: ಕೇರಳದಲ್ಲಿ ಗಗನಸಖಿ ಅರೆಸ್ಟ್.. ಭಾರೀ ಸಂಚಲನ ಮೂಡಿಸಿದ ಗಗನ ಸುಂದರಿ
ಸದ್ಯ ಪ್ರೇಕ್ಷಕರ ತಲೆಯಲ್ಲಿ ಮಹಾರಾಜ ಟ್ರೇಲರ್​ ಹುಳಬಿಟ್ಟಂತಾಗಿದೆ. ಅಂದಹಾಗೆಯೇ ನಿತಿಲನ್​ ಸಾಮಿನಾಥನ್​ ಈ ಸಿನಿಮಾದ ಚಿತ್ರಕತೆ ಮತ್ತು ನಿರ್ದೇಶನ ಮಾಡುತ್ತಿದ್ದಾರೆ. ಅಜನೀಶ್​ ಲೋಕನಾಥ್​ ​ ಸಂಗೀತ ಸಂಯೋಜನೆ ಈ ಸಿನಿಮಾಕ್ಕಿದೆ. ಅಂದಹಾಗೆಯೇ ಸೇತುಪತಿ ಜೊತೆಗೆ ಮಮ್ತಾ ಮೋಹನ್​ದಾಸ್, ನಟರಾಜ್​, ಭಾರತಿರಾಜ, ಅಭಿರಾಮಿ ಸೇರಿ ಅನೇಕರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us