ಬ್ಯೂಟಿ ಕೃತಿ ಶೆಟ್ಟಿ ಜೊತೆ ಸ್ಕ್ರೀನ್ ಶೇರ್ ಮಾಡಿಕೊಳ್ಳಲ್ಲ ಅಂದಿದ್ದೇಕೆ ವಿಜಯ್ ಸೇತುಪತಿ; ಸೀಕ್ರೆಟ್ ರಿವೀಲ್‌!

author-image
Bheemappa
Updated On
ಬ್ಯೂಟಿ ಕೃತಿ ಶೆಟ್ಟಿ ಜೊತೆ ಸ್ಕ್ರೀನ್ ಶೇರ್ ಮಾಡಿಕೊಳ್ಳಲ್ಲ ಅಂದಿದ್ದೇಕೆ ವಿಜಯ್ ಸೇತುಪತಿ; ಸೀಕ್ರೆಟ್ ರಿವೀಲ್‌!
Advertisment
  • ಈ ಹಿಂದಿನ ಸಿನಿಮಾದಲ್ಲಿ ಕೃತಿ ಶೆಟ್ಟಿ ಜೊತೆ ನಟಿಸಲು ಒಪ್ಪಿರಲಿಲ್ಲ
  • ಮಹಾರಾಜದಲ್ಲಿ ಮೇನ್ ರೋಲ್​ನಲ್ಲಿ ನಟಿಸಿದ ವಿಜಯ್ ಸೇತುಪತಿ
  • ಉಪ್ಪೇನಾ ಸಿನಿಮಾದಲ್ಲಿ ಅಭಿನಯ ಮಾಡಿದ್ದ ಹೀರೋಯಿನ್ ಕೃತಿ

ವಿಜಯ್ ಸೇತುಪತಿ ತಮಿಳಿನ ಸ್ಟಾರ್ ನಟ. ಭಾರತದ ಹಲವು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಅಭಿನಯ ಮಾಡಿದ್ದಾರೆ. ಇವರು ಯಾವುದೇ ಸಿನಿಮಾದಲ್ಲಿ ಅಭಿನಯ ಮಾಡಿದರು ಅದರಲ್ಲೂ ಹೊಸತನ ಇರುತ್ತದೆ. ಸದ್ಯ ಇವರ ಹೊಸ ಸಿನಿಮಾ ಮಹಾರಾಜ ಇನ್ನೇನು ರಿಲೀಸ್ ಆಗಲಿದೆ. ತೆಲುಗಿನ ಬ್ಯೂಟಿ ಹೀರೋಯಿನ್ ಕೃತಿ ಶೆಟ್ಟಿ ಜೊತೆ ಈ ಹಿಂದೆ ಯಾಕೆ ನಟಿಸಲಿಲ್ಲ ಎಂಬುದರ ಸತ್ಯವನ್ನು ಬಹುಭಾಷ ನಟ ವಿಜಯ್ ಸೇತುಪತಿಯವರು ಹೇಳಿಕೊಂಡಿದ್ದಾರೆ.

ವಿಜಯ್ ಸೇತುಪತಿಯವರ ಹೊಸ ಮೂವಿ ಮಹಾರಾಜ ಜೂನ್ 14 ರಂದು ರಿಲೀಸ್ ಆಗಲಿದೆ. ಈ ಸಂಬಂಧ ಖಾಸಗಿ ಚಾನೆಲ್​​ಗೆ ಸಂದರ್ಶನ ನೀಡುವಾಗ ತಮ್ಮ ಹಳೆಯ ಸಿನಿಮಾ ಡಿಎಸ್​ಪಿಯಲ್ಲಿ ಕೃತಿ ಶೆಟ್ಟಿ ಅವರು ಹೀರೋಯಿನ್ ಆಗಿ ಆಯ್ಕೆ ಆಗಿದ್ದರೂ ಯಾಕೆ ಅಭಿನಯ ಮಾಡಲಿಲ್ಲ ಎಂಬುದನ್ನು ಹೇಳಿದ್ದಾರೆ. ಡಿಎಸ್​ಪಿ ಸಿನಿಮಾದಲ್ಲಿ ಕೃತಿ ಶೆಟ್ಟಿ ಜೊತೆ ರೋಮ್ಯಾನ್ಸ್ ಮಾಡಲು ವಯಸ್ಸಿನ ಅಂತರವಿದೆ. ಮಗಳ ವಯಸ್ಸಿನವರ ಜೊತೆ ಹೇಗೆ ರೋಮ್ಯಾಂಟಿಕ್ ಆಗಿ ಮಾಡುವುದು. ಹೀಗಾಗಿ ಡಿಎಸ್‌ಪಿ ಚಿತ್ರದಲ್ಲಿ ಕೃತಿಗೆ ಜೋಡಿಯಾಗಿ ನಟಿಸುವುದನ್ನು ನಾನು ನಿರಾಕರಿಸಿದೆ. ತೆಲುಗಿನ ಉಪ್ಪೇನಾ ಮೂವಿಯಲ್ಲಿ ನಾನು ಅವಳ ತಂದೆಯಾಗಿ ನಟಿಸಿದ್ದೆ ಇದು ಡೈರೆಕ್ಟರ್ ಪೊನ್ರಾಮ್ ಅವರಿಗೆ ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಚಂದನ್ ಶೆಟ್ಟಿಗೆ ಆ ವಿಡಿಯೋ ಕಳುಹಿಸ್ತೀನಿ -ಇಬ್ಬರೂ ಒಂದಾಗುವ ಬಗ್ಗೆ ಮಾತಾಡಿದ ಪ್ರಥಮ್..!

publive-image

ಉಪ್ಪೇನಾದಲ್ಲಿ ನನ್ನ ಜೊತೆ ಅಭಿನಯ ಮಾಡುವಾಗ ಕೃತಿ ಸಖತ್ ನರ್ವಸ್ ಆಗಿದ್ದರು. ಈ ವೇಳೆ ಅವರನ್ನು ಬಳಿಗೆ ಕರೆದು ಇದು ಸಿನಿಮಾ ನರ್ವಸ್ ಆಗಬೇಡ. ಜಸ್ಟ್ ಆ್ಯಕ್ಟ್ ಮಾಡು. ನನ್ನನ್ನು ಸ್ವಂತ ನಿಮ್ಮ ತಂದೆ ಎಂದು ತಿಳಿದುಕೊಂಡು ನಟಿಸು ಎಂದು ಧೈರ್ಯ ಹೇಳಿದ್ದೆ. ಕೃತಿ ನನ್ನ ಮಗನಿಗಿಂತ ಸ್ವಲ್ಪ ದೊಡ್ಡವಳಷ್ಟೇ. ಡಿಎಸ್​ಪಿ ಸಿನಿಮಾದಲ್ಲಿ ಕೃತಿ ಇದ್ದರೇ ಅವಳ ಜೊತೆ ರೋಮ್ಯಾನ್ಸ್​ ಮಾಡಬೇಕಿತ್ತು. ಇದರಿಂದ ಸಿನಿಮಾದಲ್ಲಿ ಕೃತಿ ಜೊತೆ ಅಭಿನಯ ಮಾಡಲ್ಲ ಎಂದು ನಿರ್ದೇಶಕರಿಗೆ ಹೇಳಿದೆ. ಬಳಿಕ ಬೇರೆ ಹೀರೋಯಿನ್​ ಅನ್ನ ಸಿನಿಮಾಕ್ಕೆ ಕರೆತಂದರು ಎಂದು ವಿಜಯ್ ಸೇತುಪತಿಯವರು ಸಂದರ್ಶನದಲ್ಲಿ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment