ಕಾಮಾಕ್ಯ ದೇವಿ ಮುಂದೆ ನಿಂತು ವಿಜಯಲಕ್ಷ್ಮೀ ಸಂದೇಶ.. ಪ್ರಥಮ್ ಕೇಸ್​​ನಲ್ಲಿ FIR, ಜಗ್ಗೇಶ್ ಏನಂದ್ರು..?

author-image
Ganesh
Updated On
ಕಾಮಾಕ್ಯ ದೇವಿ ಮುಂದೆ ನಿಂತು ವಿಜಯಲಕ್ಷ್ಮೀ ಸಂದೇಶ.. ಪ್ರಥಮ್ ಕೇಸ್​​ನಲ್ಲಿ FIR, ಜಗ್ಗೇಶ್ ಏನಂದ್ರು..?
Advertisment
  • ವಿರೋಧಿಗಳಿಗೆ ಮಾರ್ಮಿಕ ಸಂದೇಶ ರವಾನಿಸಿದ ಪತ್ನಿ!
  • 8 ದಶಕಗಳ ಕನ್ನಡ ಚಿತ್ರರಂಗದ ಹೆಸರು ಹಾಳು ಮಾಡಬೇಡಿ
  • ದರ್ಶನ್, ಪ್ರಥಮ್, ರಮ್ಯಾ ಕಿತ್ತಾಟಕ್ಕೆ ಜಗ್ಗೇಶ್ ಬುದ್ಧಿಮಾತು

ಕಾಮಾಕ್ಯ ದೇವಿ ಮುಂದೆ ನಿಂತು ದರ್ಶನ್​ ವಿಜಯಲಕ್ಷ್ಮೀ ಸಂದೇಶ ಕೊಟ್ಟಿದ್ದಾರೆ. ಅದೆಷ್ಟೆ ಜನರು ನಿಮ್ಮನ್ನು ತುಳಿಯಲು ಯತ್ನಿಸಿದ್ರೂ, ದೇವರು ಉನ್ನತ ಮಟ್ಟಕ್ಕೆ ಕರೆದೊಯ್ತಾನೆ ಅಂತ ಮಾರ್ಮಿಕವಾಗಿ ಹೇಳಿದ್ದಾರೆ. ಇತ್ತ ಪ್ರಥಮ್​ ಆರೋಪ ಸಂಬಂಧ ದೊಡ್ಡಬಳ್ಳಾಪುರದಲ್ಲಿ ಎಫ್​​ಐಆರ್​​ ದಾಖಲಾಗಿದೆ.

ಅವಳು ಶಕ್ತಿಮಾತೆ.. ಜಗನ್ಮಾತೆ ಕಾಮಾಕ್ಯ ದೇವಿ.. ಬೇಲ್​​ ಸಿಗದೇ ಬೆಂಡಾಗಿದ್ದಾಗ ಅಭಯ ನೀಡಿದ್ದೆ ಈ ಮಹಾಮಾತೆ ಅನ್ನೋದು ದಾಸನ ನಂಬಿಕೆ. ಈಗ ಸುಪ್ರೀಂ ಛಡಿ ಏಟಿನ ಬೆನ್ನಲ್ಲೆ ಗವಾಹಟಿಗೆ ಓಡಿದ ಕಾಟೇರ, ಕಾಪಾಡು ತಾಯಿ ಅಂತ ಉದ್ದಂಡ ಬಿದ್ದಿದ್ದಾರೆ. ಇತ್ತ ರಾಜ್ಯದಲ್ಲಿ ನಡೆಯುತ್ತಿರುವ ಕದನದ ನಡುವೆ ಅದೇ ಸನ್ನಿದಾನದಿಂದ ದರ್ಶನ್​​​ ಪತ್ನಿ ವಿಜಯಲಕ್ಷ್ಮೀ ಖಡಕ್​​ ಸಂದೇಶ ಕೊಟ್ಟಿದ್ದಾರೆ.

ಇದನ್ನೂ ಓದಿ: ಅಲ್​ಖೈದಾಗೆ ಸಪೋರ್ಟ್, ಸಂಪರ್ಕ ಹೊಂದಿರೋ ಆರೋಪ.. ಬೆಂಗಳೂರಲ್ಲಿ ದಿಗಿಲು ಹುಟ್ಟಿಸಿದ ಓರ್ವ ಮಹಿಳೆ..

ವಿರೋಧಿಗಳಿಗೆ ಮಾರ್ಮಿಕ ಸಂದೇಶ

ದರ್ಶನ್​ ಅಭಿಮಾನಿಗಳ ವಿರುದ್ಧ ನಟಿ ರಮ್ಯಾ ಕೆಂಡವಾಗಿದ್ದಾರೆ. ಪೊಲೀಸ್ ಕಚೇರಿ ಮೆಟ್ಟಿಲು ಹತ್ತಿದ ರಮ್ಯಾ ಸಮರಕ್ಕೆ ನಿಂತಿದ್ದಾರೆ. ಎಲ್ಲೂ ಕೂಡ ತುಟಿಪಿಟಕ್​​ ಎನ್ನದ ದರ್ಶನ್​​, ಸಂಕಷ್ಟಗಳ ಸರಮಾಲೆ ಹೊತ್ತು ಅಸ್ಸಾಂಗೆ ಓಡಿದ್ರು. ಕಾಮಾಕ್ಯ ದೇವಸ್ಥಾನ ಎದುರುಗಡೆ ನಿಂತು ಫೋಟೋ ಪೋಸ್ಟ್​​ ಮಾಡಿ ವಿರೋಧಿಗಳಿಗೆ ಖಡಕ್​​ ಸಂದೇಶ ಕೊಟ್ಟಿದ್ದಾರೆ..

ಮಾರ್ಮಿಕ ಫೋಟೋ ಪೋಸ್ಟ್
‘ಹೆಚ್ಚು ಜನರು ನಿಮ್ಮನ್ನು ಕೆಳಗೆ ತಳ್ಳಲು ಪ್ರಯತ್ನಿಸಿದರೆ, ದೇವರು ನಿಮ್ಮನ್ನು ಉನ್ನತ ಮಟ್ಟಕ್ಕೆ ಕರೆದೊಯ್ಯುತ್ತಾನೆ. ದೇವರು ನಿಮಗೆ ಒಳ್ಳೆಯದನ್ನ ಮಾಡಲಿ- ವಿಜಯಲಕ್ಷ್ಮೀ ದರ್ಶನ್​

ದರ್ಶನ್, ಪ್ರಥಮ್, ರಮ್ಯಾ ಕಿತ್ತಾಟಕ್ಕೆ ಜಗ್ಗೇಶ್ ಬುದ್ಧಿಮಾತು

ಇತ್ತ ಹಿರಿಯ ನಟ ಜಗ್ಗೇಶ್​​ ಇಡೀ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ದರ್ಶನ್, ಪ್ರಥಮ್, ರಮ್ಯಾ ಹೆಸರೇಳದೇ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡು ಬುದ್ಧಿ ಮಾತು ಹೇಳಿದ್ದಾರೆ.

‘ಇಂಡಸ್ಟ್ರಿ ಹೆಸರು ಹಾಳು ಮಾಡ್ಬೇಡಿ’

80 ವರ್ಷದ ಇತಿಹಾಸವಿರೋ ಇಂಡಸ್ಟ್ರಿ ಹೆಸರು ಹಾಳು ಮಾಡ್ಬೇಡಿ. ಲೈಕ್, ಪ್ರಮೋಷನ್ನಿಂದ ಯಾರೂ ಬೆಳೆಯಲ್ಲ.. ಕ್ಷೇತ್ರಕ್ಕೆ ವಿಧೇಯರಾಗಿ ಕೆಲಸ ಮಾಡ್ಬೇಕು. ಅನ್ಯಭಾಷಿಕರು ನಮ್ಮ ನೋಡಿ ನಗುವಂತಾಗಿದೆ. ಒಗಟ್ಟಾಗಿ ಇರುವಂತೆ ಮನವಿ- ನಟ ಜಗ್ಗೇಶ್

ನಟ ಪ್ರಥಮ್​ಗೆ ಜೀವ ಬೆದರಿಕೆ ಆರೋಪ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.. ರೌಡಿಶೀಟರ್​​​ ಬೇಕರಿ ರಘು ಮೇಲೆ ಭಾರತೀಯ ನ್ಯಾಯ ಸಂಹಿತೆ 126(2), 3(5), 351(2), 351(3), 352 ರ ಅಡಿ ಎಫ್​​​ಐಆರ್​​​ ಆಗಿದೆ. ಒಟ್ಟಾರೆ, ದರ್ಶನ್​​ ಬೇಲ್​​​​ ವಿಚಾರಣೆ ಸಂಬಂಧ ಸುಪ್ರೀಂ ಕೋರ್ಟ್​​ ಮುಂದಿನ ವಾರ ತನ್ನ ತೀರ್ಪು ನೀಡುವ ಸಾಧ್ಯತೆ ಇದೆ.

ಇದನ್ನೂ ಓದಿ: ಫ್ಯಾನ್ಸ್​ ವಿರುದ್ಧ ಆರೋಪ ಬೆನ್ನಲ್ಲೇ ದರ್ಶನ್ ಪತ್ನಿ ಮಾರ್ಮಿಕ ಸಂದೇಶ.. ವಿಜಯಲಕ್ಷ್ಮೀ ಪೋಸ್ಟ್​ನಲ್ಲಿ ಏನಿದೆ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment