newsfirstkannada.com

ಫ್ಯಾನ್ಸ್​​ಗೆ ಗುಡ್​​ನ್ಯೂಸ್​​; ಮತ್ತೆ ರಿಯಾಲಿಟಿ ಶೋನತ್ತ ಮರಳಿದ ವಿಜಯ್​ ರಾಘವೇಂದ್ರ

Share :

01-09-2023

    ಎಲ್ಲರ ನೋವಿಗೂ ಸ್ಪಂದಿಸೋ ವ್ಯಕ್ತಿತ್ವ ಹೊಂದಿರುವ ಸರಳ ಜೀವಿ!

    ಲವಲವಿಕೆಯಿಂದ ಇರುತ್ತಿದ್ದ ರಾಘು ಮುಖದಲ್ಲಿ ಮಾಯವಾದ ನಗು

    ಕಿರುತೆರೆ ಶೋಗಳಲ್ಲಿ ಮತ್ತೆ ಕಾಣಿಸಿಕೊಂಡ ನಟ ವಿಜಯ್​ ರಾಘವೇಂದ್ರ

ಕಿರುತೆರೆಯ ಅಂಗಳದ ಅಚ್ಚು ಮೆಚ್ಚಿನ ಚಿನ್ನಾರಿ ಮುತ್ತ. ಗುಲಾಬ್ ಜಾಮೂನ್​ಗೆ ಇರೋ ಸಿಹಿ ಇವರ ಮನಸ್ಸಲ್ಲಿ ಅಚ್ಚೊತ್ತಿದೆ. ಯಾರೊಬ್ಬರಿಗೂ ಕೆಟ್ಟದ್ದನ್ನ ಬಯಸದ ಇವರಿಗೆ ಅವರ ನಿಜ ಜೀವನದಲ್ಲಿ ಮರೆಯಲಾಗದ ಘಟನೆಯೊಂದು ನಡೆದು ಹೋಯಿತು.

ಪ್ರೀತಿಯ ಮಡದಿ ಸ್ಪಂದನಾ ಅವರನ್ನು ಕಳೆದುಕೊಂಡು ನಟ ವಿಜಯ್ ರಾಘವೇಂದ್ರ ಒಂಟಿಯಾಗಿದ್ದಾರೆ. ಪತ್ನಿ ಮೃತಪಟ್ಟ ನಂತರ ನಟ ವಿಜಯ್ ರಾಘವೇಂದ್ರ ಡಿಕೆಡಿಗೆ ಕಳೆದ ಎರಡು ವಾರಗಳಿಂದ ಬಂದಿರಲಿಲ್ಲ. ಆದರೆ ಚಿನ್ನಾರಿ ಮುತ್ತ ನಿಮಗೆಲ್ಲಾ ಒಂದು ಗುಡ್​ನ್ಯೂಸ್ ತಂದಿದ್ದಾರೆ. ನಟ ವಿಜಯ್ ರಾಘವೇಂದ್ರ ಈ ವಾರ ಡಿಕೆಡಿನಲ್ಲಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆ. ಹೌದು ಕಳೆದ ಎರಡು ವಾರಗಳಿಂದ ಡ್ಯಾನ್ಸ್ ಶೋ ಇಂದ ದೂರ ಉಳಿದುಕೊಂಡು ವಿಶ್ರಾಂತಿ ಪಡೆದು ಸ್ಪಂದನಾ ಅವರ ನೆನಪಿನೊಂದಿಗೆ ಮತ್ತೆ ವೇದಿಕೆಗೆ ಗ್ರ್ಯಾಂಡ್ ಎಂಟ್ರಿ ಪಡೆದುಕೊಂಡು ಬಂದಿದ್ದಾರೆ.

ಇಡೀ ವೇದಿಕೆ ವಿಜಯ್ ಅವರನ್ನು ತುಂಬಾನೆ ಮಿಸ್ ಮಾಡಿಕೊಂಡಿತ್ತು. ಆದರೆ ಯಾರ ಆಸೆಯನ್ನು ಹುಸಿ ಮಾಡದೆ ವಿಜಯ್ ಮತ್ತೆ ಜಡ್ಜ್ ಪಾನೆಲ್​ಗೆ ರಿ-ಎಂಟ್ರಿ ತೆಗೆದುಕೊಂಡಿದ್ದಾರೆ. ಈ ವಾರದಿಂದ ಮತ್ತೆ ವಿಜಯ್ ರಾಘವೇಂದ್ರ ನಿಮ್ಮೆಲ್ಲರೊಟ್ಟಿಗೆ ಇರಲಿದ್ದಾರೆ. ಒಟ್ಟಿನಲ್ಲಿ ವಿಜಯ್ ಅವರ ತಮ್ಮ ಕತ್ತಲೆಯ ಲೋಕದಿಂದ ಸುಧಾರಿಸಿಕೊಂಡು ಈಗ ಅಭಿಮಾನಿಗಳಿಗೋಸ್ಕರ ಮತ್ತೊಮ್ಮೆ ಡಿಕೆಡಿಗೆ ಹಿಂತಿರುಗಿದ್ದಾರೆ. ಇನ್ನು ನಟನ ಕಮ್​ಬ್ಯಾಕ್​ಗೆ ಅಭಿಮಾನಿಗಳು ಹರ್ಷವನ್ನು ವ್ಯಕ್ತಪಡಿಸಿದ್ದಾರೆ. ‘‘ರಾಘು ಸರ್ ನೀವು ಬಂದಿದ್ದು ತುಂಬಾ ಖುಷಿ ಆಯ್ತು. ನೋವುಗಳ ಜೊತೆ ಜವಾಬ್ದಾರಿ ನಿಭಾಯಿಸಿಕೊಂಡು ಹೋಗುವುದು ಮುಖ್ಯ ಅನ್ನೋದನ್ನ ಸಮಾಜಕ್ಕೆ ಕಲಿಸುವ ನಿಮ್ಮ ನಡವಳಿಕೆ ನಮಗೆಲ್ಲ ಮಾದರಿ ಸರ್, ನೀವು ಮತ್ತೆ ಡಿಕೆಡಿಗೆ ಬಂದಿರೋದು ತುಂಬಾ ಖುಷಿ ಇದೆ ರಾಘು ಸರ್, ಡಿಕೆಡಿಯ ರಿಯಲ್ ಸ್ಟಾರ್ ಎಂದು ಬಗೆ ಬಗೆಯಾಗಿ ಕಾಮೆಂಟ್​ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಫ್ಯಾನ್ಸ್​​ಗೆ ಗುಡ್​​ನ್ಯೂಸ್​​; ಮತ್ತೆ ರಿಯಾಲಿಟಿ ಶೋನತ್ತ ಮರಳಿದ ವಿಜಯ್​ ರಾಘವೇಂದ್ರ

https://newsfirstlive.com/wp-content/uploads/2023/09/vijay-1.jpg

Load More