/newsfirstlive-kannada/media/post_attachments/wp-content/uploads/2024/11/vijayalaxmi5.jpg)
ಸ್ಯಾಂಡಲ್ವುಡ್ ನಟ ದರ್ಶನ್ ತೂಗುದೀಪ ಪತ್ನಿ ವಿಜಯಲಕ್ಷ್ಮೀ ದರ್ಶನ್ ಹಾಗೂ ಕನ್ನಡ ಕಿರುತೆರೆ ನಟಿ ಕಾವ್ಯಾ ಗೌಡ ಎಷ್ಟು ಆತ್ಮೀಯರಾಗಿದ್ದಾರೆ ಎಂದು ಎಲ್ಲರಿಗೂ ಗೊತ್ತಿರೋ ವಿಚಾರ. ನಟಿ ಕಾವ್ಯಾ ಗೌಡ ಅವರ ಮನೆಯಲ್ಲಿ ಯಾವುದೇ ಸಮಾರಂಭ ನಡೆದರೂ ಅಲ್ಲಿ ವಿಜಯಲಕ್ಷ್ಮೀ ದರ್ಶನ್ ಭಾಗವಹಿಸುತ್ತಾರೆ. ಅಷ್ಟರ ಮಟ್ಟಿಗೆ ವಿಜಯಲಕ್ಷ್ಮೀ ದರ್ಶನ್ ಹಾಗೂ ನಟಿ ಕಾವ್ಯಾ ಗೌಡ ಆಪ್ತರಾಗಿದ್ದಾರೆ.
ಇದನ್ನೂ ಓದಿ:‘ಭೂತದ ವೇಷದಲ್ಲೂ ಬ್ಯೂಟಿಫುಲ್ ಆಗಿ ಕಾಣೋ ಏಕೈಕ ಚೆಲುವೆ’- ದೀಪಿಕಾ ದಾಸ್ ಹೊಸ ಅವತಾರ; ಏನಿದರ ವಿಶೇಷ?
ನಿನ್ನೆಯಷ್ಟೇ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಹುಟ್ಟುಹಬ್ಬದ ಇತ್ತು. ಇದೇ ಹಿನ್ನೆಲೆಯಲ್ಲಿ ಕನ್ನಡ ಕಿರುತೆರೆ ನಟಿ ಕಾವ್ಯಾ ಗೌಡ ಮುದ್ದಾಗಿ ವಿಶ್ ಮಾಡಿದ್ದರು. ಅಲ್ಲದೇ ಕಾವ್ಯಾ ಗೌಡ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಮೊದಲಿಗೆ ತಮ್ಮ ಮಗಳು ಸಿಯಾಳೊಂದಿಗೆ ವಿಜಯಲಕ್ಷ್ಮೀ ಅವರ ವಿಡಿಯೋ ಶೇರ್ ಮಾಡಿಕೊಂಡಿದ್ದರು. ಅದರ ಕೆಳಗಡೆ ಹ್ಯಾಪಿ ಬರ್ತ್ ಡೇ ದೊಡ್ಡಮ್ಮ ಎಂದು ಬರೆದಿತ್ತು.
ಅಲ್ಲದೇ ನಟಿ ಕಾವ್ಯಾ ಗೌಡ ಅವರ ಮಗಳು ಸಿಯಾಳ ಜೊತೆಗಿನ ಕೆಲವು ವಿಶೇಷ ಕ್ಷಣಗಳ ಫೋಟೊ ಶೇರ್ ಮಾಡಿ ನನ್ನ ಸುಂದರಿ ಅಕ್ಕನಿಗೆ ಹ್ಯಾಪಿ ಬರ್ತ್ ಡೇ, ಪದಗಳಲ್ಲಿ ಹೇಳೋದಕ್ಕಿಂತ ಜಾಸ್ತಿ ನಿಮ್ಮನ್ನ ಪ್ರೀತಿಸ್ತೇನೆ. ಯಾವಾಗ್ಲೂ ಖುಷಿಯಾಗಿರಿ, ಆ ದೇವರು ನಿಮಗೆ ಎಲ್ಲಾ ರೀತಿಯ ಸಂತೋಷ ಮತ್ತು ಯಶಸ್ಸನ್ನು ನೀಡಲಿ, ಯಾವಾಗ್ಲೂ ಶೈನ್ ಆಗ್ತಾನೆ ಇರಿ, ಯು ಆರ್ ಸ್ಟ್ರಾಂಗ್ ಲೇಡಿ, ಲವ್ ಯು ಜಾಸ್ತಿ ಎಂದಿದು ಬರೆದುಕೊಂಡಿದ್ದರು.
View this post on Instagram
ಸಿಯಾಳ ಜೊತೆಗೆ ಫೋನಿನಲ್ಲಿ ವಿಡಿಯೋವನ್ನು ನೋಡುತ್ತಿರೋ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದೇ ವಿಡಿಯೋ ನೋಡಿದ ಅಭಿಮಾನಿಗಳು ಮುದ್ದಿನ ದೊಡ್ಡಮ್ಮ, ಸಿಯಾ ತುಂಬಾ ಲಕ್ಕಿ ಅಂತೆಲ್ಲಾ ಕಾಮೆಂಟ್ಸ್ ಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ