ಅಪ್ಪನ ಕನಸು, ಅಮ್ಮನ ತ್ಯಾಗ.. ಕಡು ಬಡತನದಲ್ಲಿ ಡಾಕ್ಟರ್‌ ಆದ ವಿಜಯಲಕ್ಷ್ಮಿ ದೇಶಮಾನೆ ಬದುಕೇ ಪ್ರೇರಣೆ!

author-image
admin
Updated On
ಅಪ್ಪನ ಕನಸು, ಅಮ್ಮನ ತ್ಯಾಗ.. ಕಡು ಬಡತನದಲ್ಲಿ ಡಾಕ್ಟರ್‌ ಆದ ವಿಜಯಲಕ್ಷ್ಮಿ ದೇಶಮಾನೆ ಬದುಕೇ ಪ್ರೇರಣೆ!
Advertisment
  • ಅಪ್ಪ ಬಿತ್ತಿದ್ದ ಕನಸಿಗೆ ರೆಕ್ಕೆ ಕಟ್ಟಿ ನನಸು ಮಾಡಿಕೊಂಡವರು ಇವ್ರು
  • ಅಮ್ಮ ತನ್ನ ಮಾಂಗಲ್ಯ ಸರ ಕೊಟ್ಟು ಮಗಳ ಅಡ್ಮಿಶನ್ ಮಾಡಿಸಿದ್ರು
  • ರೋಗಿಗಳ ಸೇವೆಗಾಗಿ ತ್ಯಾಗ, ನಿಷ್ಠೆ, ಪ್ರಾಮಾಣಿಕತೆಗೆ ಹೆಸರುವಾಸಿ

ಹಳೇ ಚಪ್ಪಲಿ ಹೊಲಿಯೋ ಸಮುದಾಯದಿಂದ ಬಂದ ಈ ಸಾಧಕಿಯ ಕತೆ ಇದ್ಯಲ್ಲ.. ಇದು ರೋಮಾಂಚಕ ಅಷ್ಟೇ ಅಲ್ಲ. ಎಲ್ಲರ ಬದುಕಿಗೆ ಪ್ರೇರಕ. ಮೂಲತಃ ಕಲ್ಬುರ್ಗಿಯವರು. ಅಮ್ಮ ನಿತ್ಯ ರಸ್ತೆ ಬದಿ ಹಣ್ಣು - ತರಕಾರಿ ಮಾರುತ್ತಿದ್ದರು. ಇವರು ಅಮ್ಮನ ಜೊತೆ ಕೈ ಜೋಡಿಸೋಕೆ ಹೋದ ಎಷ್ಟೋ ದಿನಗಳಿವೆ. 5ನೇ ಕ್ಲಾಸ್‌ನಲ್ಲಿದ್ದಾಗ ನೀನು ಸರ್ಜನ್ ಆಗಬೇಕು ಅಂತ ಅಪ್ಪ ಬಿತ್ತಿದ್ದ ಕನಸಿಗೆ ರೆಕ್ಕೆ ಕಟ್ಟಿ ನನಸು ಮಾಡಿಕೊಂಡವರು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ವಿಜಯಲಕ್ಷ್ಮಿ ದೇಶಮಾನೆ.

ಶೋಷಿತ ಸಮುದಾಯದಿಂದ ಬಂದರೂ, ಬಡತನವೇ ಹಾಸಿ ಹೊದ್ದರೂ 6 ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿರುವ ವಿಜಯಲಕ್ಷ್ಮೀ ದೇಶಮಾನೆ ಹೆತ್ತವರು ಎಲ್ಲರಿಗೂ ಮಾದರಿ. ಹೆತ್ತವರು ಅನಕ್ಷರಸ್ಥರಾಗಿದ್ರೂ ಮಗಳಿಗೆ MBBS ಓದಿಸೋಕೆ ಮುಂದಾದಾಗ ಕೈಯಲ್ಲಿ ಕಾಸು ಇರಲಿಲ್ಲ.

publive-image

ಅಪ್ಪ ಸ್ನೇಹಿತರ ಬಳಿಯೆಲ್ಲಾ ಹಣ ಕೇಳಿದ್ರೂ ಸಿಕ್ಕಿರ್ಲಿಲ್ಲ. ಕೊನೆಗೆ ಅಮ್ಮ ತನ್ನ ಮಾಂಗಲ್ಯ ಸರವನ್ನ ಕೊಟ್ಟು ಮಗಳ ಅಡ್ಮಿಶನ್ ಮಾಡಿಸಿದ್ರು. 1985ರಲ್ಲಿ ಕಿದ್ವಾಯಿ ಆಸ್ಪತ್ರೆಗೆ ಮೊದಲ ದಿನ ಹೆಜ್ಜೆ ಇಟ್ಟಾಗ ನಮಸ್ಕಾರ ಮಾಡ್ತಾ ಹೋದವ್ರು ಆ ನಂತ್ರ ತಿರುಗಿ ನೋಡಿದ್ದೇ ಇಲ್ಲ. ಫಸ್ಟ್ ಲೇಡಿ ರೆಸಿಡೆಂಟ್‌, ಫಸ್ಟ್ ಲೇಡಿ ಸರ್ಜನ್‌, ಫಸ್ಟ್ ಹೆಡ್‌ ನಂತ್ರ ಇನ್‌ಚಾರ್ಜ್ ಡೈರೆಕ್ಟರ್‌ ಕೂಡ ಆದ್ರು ಡಾ.ವಿಜಯಲಕ್ಷ್ಮಿ ದೇಶಮಾನೆ.

ಇದನ್ನೂ ಓದಿ: UPSC ಅಲ್ಲಿ ಕರ್ನಾಟಕದಿಂದ ನಂಬರ್-1 ಶ್ರೇಣಿ, ಈಗ ಮಂಡ್ಯದ ಸಿಇಓ.. ನ್ಯೂಸ್‌ ಫಸ್ಟ್‌ ಮಹಿಳಾ ಮಾಣಿಕ್ಯ ನಂದಿನಿ ಕೆ.ಆರ್‌! 

publive-image

ಕರ್ನಾಟಕ ಕ್ಯಾನ್ಸರ್ ಸೊಸೈಟಿಯ ಉಪಾಧ್ಯಕ್ಷೆಯಾಗಿದ್ದ ವಿಜಯಲಕ್ಷ್ಮಿ ದೇಶಮಾನೆ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ, ಮಹಿಳಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಅಂತಾರಾಷ್ಟ್ರೀಯ ವಲಯ ರಾಷ್ಟ್ರೀಯರತ್ನ ಸೇರಿದಂತೆ ದೇಶ ವಿದೇಶಗಳಿಂದಲೂ ಪ್ರಶಸ್ತಿಗಳು ಒಲಿದು ಬಂದಿವೆ. ಈ ವರ್ಷ ಭಾರತ ಸರ್ಕಾರ ಕೊಡಮಾಡುವ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ ಡಾ.ವಿಜಯಲಕ್ಷ್ಮಿ ದೇಶಮಾನೆ.

publive-image

ಅಮೆರಿಕ, ಸ್ವೀಡನ್, ಮುಂಬೈ, ಕೊಲಂಬೋಗಳಿಗೆ ಪ್ರತಿನಿಧಿಯಾಗಿ ಭೇಟಿ ನೀಡಿರುವ ಡಾ.ವಿಜಯಲಕ್ಷ್ಮಿ ದೇಶಮಾನೆ ಅವರು, ರಾಷ್ಟ್ರ, ರಾಜ್ಯದ ಅನೇಕ ಪತ್ರಿಕೆ, ಮ್ಯಾಗಝೀನ್‌ಗಳಲ್ಲಿ ಕ್ಯಾನ್ಸರ್ ಕುರಿತು ಹಲವಾರು ಲೇಖನಗಳನ್ನು ಬರೆದಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಕುಟುಂಬದಿಂದ ಬಂದು, ಮದುವೆಯೂ ಆಗದೇ, ಕ್ಯಾನ್ಸರ್ ರೋಗಕ್ಕೆ ತುತ್ತಾದ ರೋಗಿಗಳ ಸೇವೆಗಾಗಿ ತ್ಯಾಗ, ನಿಷ್ಠೆ, ಪ್ರಾಮಾಣಿಕತೆ ಮತ್ತು ಸಾಮಾಜಿಕ ಕಳಕಳಿಯಿಂದ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಅಪಾರ ಸೇವೆಯನ್ನು ಗುರುತಿಸಿರುವ ನಿಮ್ಮ ನ್ಯೂಸ್​ಫಸ್ಟ್​ ಮಹಿಳಾ ಮಾಣಿಕ್ಯ ಪ್ರಶಸ್ತಿ ನೀಡಿ ಗೌರವಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment