ದರ್ಶನ್‌ಗೆ ದೇವರ ಪ್ರಸಾದ ಕೊಟ್ಟು ಧೈರ್ಯ ತುಂಬಿದ ವಿಜಯಲಕ್ಷ್ಮಿ; ಮನೆ ಊಟದ ಅರ್ಜಿ ವಾಪಸ್; ಕಾರಣವೇನು?

author-image
admin
Updated On
ದರ್ಶನ್ ಬಾಯಲ್ಲಿ ಈಗ 10 ಪಶ್ಚಾತಾಪದ ಮಾತು.. ಪತ್ನಿ ವಿಜಯಲಕ್ಷ್ಮಿ ನೆನೆದು ಭಾವುಕ; ಹೇಳಿದ್ದೇನು?
Advertisment
  • ಜೈಲಿಗೆ ಭೇಟಿ ಕೊಟ್ಟ ಪತ್ನಿ ವಿಜಯಲಕ್ಷ್ಮಿ, ಸಹೋದರ ದಿನಕರ್
  • ಗಂಡನ ಸಂಕಷ್ಟ ದೂರವಾಗಲು ಕೊಲ್ಲೂರಲ್ಲಿ ನವಚಂಡಿಕಾ ಯಾಗ
  • ಮನೆ ಊಟದ ಮನವಿ ಅರ್ಜಿ ವಾಪಸ್ ಪಡೆಯಲು ಕೋರ್ಟ್‌ ಅನುಮತಿ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿರೋ ದರ್ಶನ್‌ ಅವರಿಗೆ ಕಂಬಿ ಹಿಂದಿನ ಸೆರೆವಾಸಕ್ಕಿಂತ ಜೈಲೂಟವೇ ದೊಡ್ಡ ಶಿಕ್ಷೆಯಾಗಿದೆ. ಪ್ರತಿ ದಿನ ಜೈಲೂಟದಿಂದ ಪಾರಾದ್ರೆ ಸಾಕು ಅನ್ನೋ ಭಜನೆ ಮಾಡುತ್ತಿದ್ದಾರೆ. ಆದರೆ, ಮನೆ ಊಟದ ಮಹದಾಸೆ ದರ್ಶನ್ ಅವರ ಪಾಲಿಗೆ ಮರೀಚಿಕೆಯಾಗಿಯೇ ಉಳಿಯುತ್ತಿದೆ.

ಇಂದು ಜೈಲಿಗೆ ಭೇಟಿ ಕೊಟ್ಟ ಪತ್ನಿ ವಿಜಯಲಕ್ಷ್ಮಿ ಹಾಗೂ ಸಹೋದರ ದಿನಕರ್, ದರ್ಶನ್‌ ಅವರಿಗೆ ದೇವರ ಪ್ರಸಾದ ನೀಡಿ ಧೈರ್ಯ ತುಂಬಿದ್ದಾರೆ. ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸಿದ ದರ್ಶನ್ ಕುಟುಂಬಸ್ಥರು ಕೆಲ ಕಾಲ ಚರ್ಚೆ ಮಾಡಿದ್ದಾರೆ.

ಇದನ್ನೂ ಓದಿ: ರೇಣುಕಾಸ್ವಾಮಿ ಮನೆಯಲ್ಲೇ ದರ್ಶನ್ ಪರ ಮಾತು.. ಕೆಂಗಣ್ಣಿಗೆ ಗುರಿಯಾದ ಸ್ಯಾಂಡಲ್​ವುಡ್​ ನಟ..!

ಇತ್ತೀಚೆಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದರು. ಗಂಡನ ಸಂಕಷ್ಟ ದೂರವಾಗಿ ಜೈಲಿನಿಂದ ಬೇಗ ಬಿಡುಗಡೆಗೊಳ್ಳಲಿ ಎಂದು ನವಚಂಡಿಕಾ ಯಾಗ ಮಾಡಿಸಿದ್ದರು. ಪತಿಗೆ ಒಳಿತಾಗಲಿ ಎಂದು ದೇವತೆಯ ಬಳಿ ಕೇಳಿ ಕೊಂಡ ವಿಜಯಲಕ್ಷ್ಮಿ ಅವರು ದೇವರ ಪ್ರಸಾದ ಕೊಟ್ಟಿದ್ದಾರೆ. ದರ್ಶನ್‌ಗೆ ದೇವರ ಪ್ರಸಾದ ನೀಡಿ ವಿಜಯಲಕ್ಷ್ಮಿ, ಸಹೋದರ ದಿನಕರ್ ಅವರು ಸಮಾಧಾನ ಮಾಡಿದ್ದಾರೆ.

publive-image

ಇದನ್ನೂ ಓದಿ: EXCLUSIVE: ರೇಣುಕಾಸ್ವಾಮಿ ಕುಟುಂಬ ಕ್ಷಮಿಸಿದ್ರೆ ದರ್ಶನ್ ಸೇಫ್ ಆಗ್ತಾರಾ? ಕಾಂಪ್ರಮೈಸ್ ಸಾಧ್ಯನಾ?

ದರ್ಶನ್ ಮನೆಯೂಟದ ಅರ್ಜಿ ವಾಪಸ್‌!
ದರ್ಶನ್ ಫ್ಯಾಮಿಲಿ ದೇವರ ಮೊರೆ ಹೋಗಿದ್ರೆ, ಅವರ ಪರ ವಕೀಲರು ನ್ಯಾಯಾಲಯದಲ್ಲಿ ಮನೆ ಊಟಕ್ಕಾಗಿ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಅರ್ಜಿ ವಜಾಗೊಂಡ ಬಳಿಕ ದರ್ಶನ್​ ಮನೆ ಊಟಕ್ಕಾಗಿ ಮನವಿ ಮಾಡಿದ್ದ ಅರ್ಜಿಯನ್ನೇ ವಾಪಸ್ ಪಡೆಯಲಾಗಿದೆ. ಇದರಿಂದ ಸದ್ಯಕ್ಕೆ ದರ್ಶನ್‌ ಅವರಿಗೆ ಮನೆ ಊಟ, ಹಾಸಿಗೆ, ಬುಕ್ & ಪಾತ್ರೆಗಳು ಸಿಗೋದು ಕಷ್ಟವಾಗಿದೆ.

ಇಂದು ದರ್ಶನ್ ಮನೆ ಊಟದ ಮನವಿ ವಿಚಾರಣೆ ವೇಳೆ ಅರ್ಜಿ ವಾಪಸ್‌ ಪಡೆಯುವ ಮೆಮೊ ಕೋರ್ಟ್ ಸಲ್ಲಿಕೆ ಮಾಡಲಾಗಿದೆ. ದರ್ಶನ್‌ ಪರ ಮಾಜಿ ಅಡ್ವೊಕೇಟ್ ಜನರಲ್ ಪ್ರಭುಲಿಂಗ್ ನಾವದಗಿ ಅವರು ಹಾಜರಾಗಿದ್ದು, ಹೈಕೋರ್ಟ್‌ ಕಳೆದ ಜುಲೈ 19ರಂದು ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಹೋಗಲು ಹೇಳಿದ್ದರು. ಅಲ್ಲಿ ಅರ್ಜಿಯೂ ರಿಜಿಕ್ಟ್ ಆಗಿದೆ. ಹೀಗಾಗಿ ಅರ್ಜಿಯನ್ನು ವಾಪಸ್ ಪಡೆಯುತ್ತಿದ್ದೇವೆ ಎಂದು ಕೋರ್ಟ್‌ ಗಮನಕ್ಕೆ ತಂದರು.

ಹೊಸ ಅರ್ಜಿ ಸಲ್ಲಿಸುತ್ತಿದ್ದೇವೆ ಹೀಗಾಗಿ ದರ್ಶನ್ ಮನೆ ಊಟದ ಮನವಿ ಅರ್ಜಿ ವಾಪಸ್ ಪಡೆಯಲು ಅನುಮತಿ ಕೋರಲಾಗಿದ್ದು, ಹೈಕೋರ್ಟ್‌ ಏಕಸದಸ್ಯ ಪೀಠ ಅನುಮತಿ ಸಹ ನೀಡಿದೆ. 482 ಅಡಿಯಲ್ಲಿ ಹೊಸ ಅರ್ಜಿ ಸಲ್ಲಿಸಲು ಕೋರ್ಟ್‌ನಲ್ಲಿ ಅವಕಾಶವಿದೆ. ಹೀಗಾಗಿ ಕೆಲ ದಿನಗಳಲ್ಲಿ ಹೊಸ ಅರ್ಜಿ ಸಲ್ಲಿಸಲು ದರ್ಶನ್ ಪರ ವಕೀಲರು ತಯಾರಿ ನಡೆಸುತ್ತಿದ್ದಾರೆ. ಆ ಬಳಿಕ ಅರ್ಜಿಗೆ ಸರ್ಕಾರದ ಕಡೆಯಿಂದ ಆಕ್ಷೇಪಣೆ ಸಲ್ಲಿಕೆಯಾಗಬೇಕು. ಎರಡು ಕಡೆಯ ವಾದ ಆಲಿಸಿದ ಬಳಿಕ ಕೋರ್ಟ್‌ ಈ ಬಗ್ಗೆ ನಿರ್ಧಾರ ಮಾಡಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment