/newsfirstlive-kannada/media/post_attachments/wp-content/uploads/2025/07/ramya4.jpg)
ರೇಣುಕಾಸ್ವಾಮಿ ಪ್ರಕರಣದಲ್ಲಿ ರಮ್ಯಾ ಮತ್ತು ದರ್ಶನ್ ಅಭಿಮಾನಿಗಳ ನಡುವಿನ ವಾರ್ಗೆ ವಿಜಯಲಕ್ಷ್ಮೀ ಅವರು ಎಂಟ್ರಿ ಕೊಟ್ಟಿದ್ದಾರೆ. ನಟಿ ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ರೇಣುಕಾಸ್ವಾಮಿ ಪ್ರಕರಣದ ಆರೋಪಿ, ನಟ ದರ್ಶನ್ ಅಭಿಮಾನಿಗಳ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಇದನ್ನೂ ಓದಿ: ರಮ್ಯಾ ಪರ ಒಳ್ಳೆ ಹುಡುಗ ಬ್ಯಾಟ್; ದರ್ಶನ್ ಅಭಿಮಾನಿಗಳಿಗೆ ಕೊಟ್ಟ ಸಂದೇಶ ಏನು..?
ಅಲ್ಲದೇ ದರ್ಶನ್ ಅಭಿಮಾನಿಗಳ ವಿರುದ್ಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ರಮ್ಯಾ ಮುಂದಾಗಿರೋ ಹೊತ್ತಲ್ಲೇ, ಈ ಕೇಸ್‌ಗೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಟ್ವಿಸ್ಟ್ ಕೊಟ್ಟಿದ್ದಾರೆ. ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಇನ್ಸ್ಟಾ ಸ್ಟೋರಿಯಲ್ಲಿ ಮಾರ್ಮಿಕವಾದ ಪೋಸ್ಟ್ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.
ದರ್ಶನ್ ಪತ್ನಿ ವಿಜಯಲಕ್ಷ್ಮಿ ಪೋಸ್ಟ್ನಲ್ಲಿ ಏನಿದೆ?
ಬುದ್ಧನ ಫೋಟೋ ಕೆಳಗಡೆ ಇಂಗ್ಲಿಷ್ನಲ್ಲಿ "A fool is known by his speech; and a wise man by silence ಎಂದು ಬರೆಯಲಾಗಿದೆ. ಅಂದರೆ ಕನ್ನಡದಲ್ಲಿ ಇದರರ್ಥ, ಮೂರ್ಖರನ್ನ ಅವರ ಮಾತಿನಿಂದ ಗುರ್ತಿಸಬಹುದು; ಬುದ್ದಿವಂತನನ್ನ ಮೌನದಿಂದ ಗುರುತಿಸಬಹುದು" ಎಂದಿರೋ ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ