Advertisment

ಪವಿತ್ರಗೌಡ ಜೊತೆ ದರ್ಶನ್ ಲಾಕಪ್ ಸೇರ್ತಿದ್ದಂತೆ ಶಾಕ್ ಕೊಟ್ಟ ಪತ್ನಿ ವಿಜಯಲಕ್ಷ್ಮೀ

author-image
Bheemappa
Updated On
ಪವಿತ್ರಗೌಡ ಜೊತೆ ದರ್ಶನ್ ಲಾಕಪ್ ಸೇರ್ತಿದ್ದಂತೆ ಶಾಕ್ ಕೊಟ್ಟ ಪತ್ನಿ ವಿಜಯಲಕ್ಷ್ಮೀ
Advertisment
  • ರೇಣುಕಾಸ್ವಾಮಿ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ನಟ ದರ್ಶನ್
  • ಮರ್ಡರ್ ಕೇಸ್ ಬೆನ್ನಲ್ಲೇ ದರ್ಶನ್​​ರಿಂದ ಪತ್ನಿ ಅಂತರ ಕಾಯ್ದುಕೊಂಡ್ರಾ?
  • ಪವಿತ್ರಾ ಗೌಡ, ದರ್ಶನ್ ಸ್ನೇಹದಿಂದ ಈ ರೀತಿ ಬೇಸರ ಹೊರಹಾಕಿದ್ರಾ?

ಬೆಂಗಳೂರು: ನಟ ದರ್ಶನ್ ಆ್ಯಂಡ್ ಗ್ಯಾಂಗ್ ರೇಣುಕಾಸ್ವಾಮಿ ಕೊಲೆ ಮಾಡಿದ ಆರೋಪ ಸದ್ಯ ಇಡೀ ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಈಗಾಗಲೇ ಪ್ರಕರಣ ಸಂಬಂಧ ಪೊಲೀಸರು ನಟ ಸೇರಿದಂತೆ 13 ಮಂದಿಯನ್ನು ಅರೆಸ್ಟ್ ಮಾಡಿದ್ದಾರೆ. ಒಂದು ದಿನ ಜೈಲಿನಲ್ಲೇ ಆರೋಪಿಗಳು ದಿನ ಕಳೆದಿದ್ದಾರೆ. ಇವೆಲ್ಲದರ ಮಧ್ಯೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ಇನ್​ಸ್ಟಾಗ್ರಾಮ್​ನಲ್ಲಿ ಪತಿಯನ್ನೇ ಅನ್ ಫಾಲೋ ಮಾಡಿ ಡಿಪಿ ತೆಗೆದು ಹಾಕಿದ್ದಾರೆ.

Advertisment

ಇದನ್ನೂ ಓದಿ: ರೇಣುಕಾಸ್ವಾಮಿ ಮಾಡ್ತಿದ್ದ ಮೆಸೇಜ್ ಏನಾಗಿತ್ತು..? ಪವಿತ್ರಗೌಡ ತನಿಖೆಗೆ ಟ್ವಿಸ್ಟ್ ಕೊಡಲು ಮುಂದಾದ ಪೊಲೀಸ್..!

ಕೊಲೆ ಕೇಸ್​​ನಲ್ಲಿ ಆರೋಪಿಯಾಗಿ ಜೈಲು ಸೇರಿರುವ ನಟ ದರ್ಶನ್ ಅವರಿಂದ ಪತ್ನಿ ವಿಜಯಲಕ್ಷ್ಮಿ ಅಂತರ ಕಾಯ್ದುಕೊಂಡರೆ ಎನ್ನುವ ಪ್ರಶ್ನೆ ಮೂಡಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇನ್​​ಸ್ಟಾದಲ್ಲಿ ತನ್ನ ಗಂಡ ದರ್ಶನ್ ಅವರನ್ನು ಅನ್ ಫಾಲೋ ಮಾಡಿದ್ದಾರೆ. ಫ್ಯಾನ್​ ಪೇಜ್​ ಕೂಡ ಅನ್ ಫಾಲೋ ಮಾಡಿದ್ದಾರೆ. ಇನ್​​ಸ್ಟಾ ಡಿಪಿಗೆ ಇರುವಂತ ಫೋಟೋವನ್ನು ತೆಗೆದು ಹಾಕಿ ಬ್ಲಾಂಕ್​​ನಲ್ಲಿ ಇಟ್ಟಿದ್ದಾರೆ.

ಇದನ್ನೂ ಓದಿ:ಈ ಜಿಲ್ಲೆಗಳಲ್ಲಿ ಭಾರೀ ಮಳೆ.. ಮಲಗಿದ್ದ ವೃದ್ಧನ ಮೇಲೆ ಕುಸಿದ ಮೇಲ್ಛಾವಣಿ.. ಇಂದು ಕೂಡ ವರುಣಾರ್ಭಟ ಫಿಕ್ಸ್..!

Advertisment

publive-image

ಇತ್ತೀಚಿನ‌ ದಿನಗಳಲ್ಲಿ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ಅವರು ತುಂಬಾ ಅನ್ಯೋನ್ಯವಾಗಿದ್ದರು. ಎಲ್ಲ ಜಗಳ ಮುಗಿದು ಚೆನ್ನಾಗಿದ್ದರು ಎನ್ನುವಷ್ಟರಲ್ಲಿ ದರ್ಶನ್ ಕೊಲೆ ಕೇಸ್​ನಲ್ಲಿ ಆರೋಪಿಯಾಗಿ ಕಂಬಿ ಹಿಂದೆ ನಿಂತಿದ್ದಾರೆ. ಮೇ ತಿಂಗಳಲ್ಲಿ ದುಬೈನಲ್ಲಿ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದ ಈ ದಂಪತಿ, ಜೋಡಿಯಾಗಿ ಡ್ಯಾನ್ಸ್ ಮಾಡಿತ್ತು. ಎಲ್ಲವು ಚೆನ್ನಾಗಿದೆ ಎನ್ನವಾಗಲೇ ದರ್ಶನ್ ಮತ್ತೊಂದು ಭಾರೀ ಯಡವಟ್ಟು ಮಾಡಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment