ತುಂಗಭದ್ರಾ ಡ್ಯಾಂ ನೀರಿನ ಮಟ್ಟದಲ್ಲಿ ಭಾರೀ ಇಳಿಕೆ; ಎಷ್ಟು ಅಡಿಗೆ ಬಂದು ನಿಂತಿದೆ ಗೊತ್ತಾ..?

author-image
Veena Gangani
Updated On
ತುಂಗಭದ್ರಾ ಡ್ಯಾಂಗೆ ಗೇಟ್ ಅಳವಡಿಸೋದೇ ದೊಡ್ಡ ಚಾಲೆಂಜ್; ಹೇಗಿದೆ ತಜ್ಞರ ಪ್ಲಾನ್..?
Advertisment
  • 33 ಕ್ರಸ್ಟ್ ಗೇಟ್​ಗಳ ಪೈಕಿ 25 ಗೇಟ್ ಮೂಲಕ ನೀರು ರಿಲೀಸ್
  • ಇಂದು ಮತ್ತೇ ನಾಲ್ಕು ಗೇಟ್ ಕ್ಲೋಸ್ ಮಾಡಿದ ಟಿಬಿ ಬೋರ್ಡ್
  • ಬೆಳಗ್ಗೆ 10 ಗಂಟೆಯಿಂದಲೇ ಗೇಟ್ ಕೂರಿಸುವ ಪ್ರಯತ್ನ ಆರಂಭ

ವಿಜಯನಗರ: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಕೊಚ್ಚಿ ಹೋಗಿ ಇಂದಿಗೆ ಆರು ದಿನಗಳು ಕಳೆದು ಹೋಗಿವೆ. ಹೀಗಾಗಿ ಅಧಿಕಾರಿಗಳಿಂದ ತಾತ್ಕಾಲಿಕ ಗೇಟ್ ಕೂರಿಸುವ ಕಾರ್ಯ ಭರದಿಂದ ಸಾಗಿದೆ. ಇದರ ಮಧ್ಯೆ ಜಲಾಶಯದ ನೀರಿನ ಮಟ್ಟವು ಕಡಿಮೆಯಾಗಿದೆ. ಆಗಸ್ಟ್ 11ರಿಂದ ನದಿಗೆ ನೀರು ಬಿಡಲಾಗುತ್ತಿದೆ. 1633 ಅಡಿ ಎತ್ತರವಿರುವ ಜಲಾಶಯದಲ್ಲಿನ ನೀರು 1623.79 ಅಡಿಗೆ ಇಳಿಕೆ ಕಂಡಿದೆ. ಅಂದರೆ ಡ್ಯಾಂ ಡ್ಯಾಮೇಜ್ ಆದ ಅನಾಹುತದಿಂದಾಗಿ 9 ಅಡಿ ನೀರು ಇಳಿಕೆ ಆಗಿದೆ.

ಇದನ್ನೂ ಓದಿ:ತುಂಗಭದ್ರಾ ಡ್ಯಾಂಗೆ ಗೇಟ್ ಅಳವಡಿಸೋದೇ ದೊಡ್ಡ ಚಾಲೆಂಜ್; ಹೇಗಿದೆ ತಜ್ಞರ ಪ್ಲಾನ್..?

publive-image

ಜಲಾಶಯಕ್ಕೆ 35,437 ಕ್ಯೂಸೆಕ್ ಒಳಹರಿವು ಇದೆ. ಜಲಾಶಯದಿಂದ ಒಟ್ಟು 86 ಸಾವಿರ ಕ್ಯೂಸೆಕ್ ನೀರು ನದಿಗೆ ಹರಿಬಿಡಲಾಗ್ತಿದೆ. ಈಗಾಗಲೆ ಟಿಬಿ ಬೋರ್ಡ್ ಹೊರ ಹರಿವು ಕಡಿಮೆ ಮಾಡಿದೆ. 33 ಕ್ರಸ್ಟ್ ಗೇಟ್​ಗಳ ಪೈಕಿ 25 ಗೇಟ್ ಮೂಲಕ ನೀರು ರಿಲೀಸ್ ಮಾಡಲಾಗಿದೆ. ಇಂದು ಟಿಬಿ ಬೋರ್ಡ್ ಮತ್ತೇ ನಾಲ್ಕು ಗೇಟ್ ಕ್ಲೋಸ್ ಮಾಡಿದೆ. 25 ಗೇಟ್​ಗಳಿಂದ 86 ಸಾವಿರ ಕ್ಯೂಸೆಕ್ ನೀರು ನದಿಗೆ ಹರಿ ಬಿಡಲಾಗಿದೆ.

publive-image

ನಿನ್ನೆಯವರೆಗೂ 1.20 ಲಕ್ಷ ಕ್ಯೂಸೆಕ್ ನೀರು ಜಲಾಶಯದಿಂದ ನದಿಗೆ ಬಿಡಲಾಗಿದೆ. ಈಗಾಗಲೇ ಜಲಾಶಯದಿಂದ 40 ಟಿಎಂಸಿ ನೀರು ಹರಿದು ನದಿಗೆ ಹೋಗಿದೆ. ಜಲಾಶಯದಲ್ಲಿ ಸದ್ಯ 65 ಟಿಎಂಸಿ ನೀರು ಸಂಗ್ರಹವಾಗಿದೆ. ಡ್ಯಾಂ ತಜ್ಞ ಕನ್ನಯ್ಯ ನಾಯ್ಡು ನೇತೃತ್ವದ ಮೊದಲ ಸ್ಟಾಪ್ ಲಾಗ್ ಗೇಟ್ ಕೂರಿಸುವ ಕಾರ್ಯ ಆರಂಭವಾಗಿದೆ. ಇಂದು ಸಂಜೆ ವೇಳೆಗೆ ಗೇಟ್ ಕೂರಿಸುವ ಕಾರ್ಯ ಬಹುತೇಕ ಮುಕ್ತಾಯ ಆಗುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment