Advertisment

ಅಯ್ಯೋ.. ಇದೆಂಥಾ ಜಾತ್ರೆ! ಬಡಿಗೆಯಿಂದ ಹೊಡೆದು ಕೊಳ್ತಾರೆ ಜನರು! ಶತಮಾನದ ಇತಿಹಾಸ ಇದಕ್ಕಿದೆ

author-image
AS Harshith
Updated On
ಅಯ್ಯೋ.. ಇದೆಂಥಾ ಜಾತ್ರೆ! ಬಡಿಗೆಯಿಂದ ಹೊಡೆದು ಕೊಳ್ತಾರೆ ಜನರು! ಶತಮಾನದ ಇತಿಹಾಸ ಇದಕ್ಕಿದೆ
Advertisment
  • ಜುಮ್ಮಣ್ಣ ಅಜ್ಜ ನೆನಪಿಗಾಗಿ ನಡೆಯುತ್ತೆ ಈ ವಿಚಿತ್ರ ಜಾತ್ರೆ
  • ಬ್ರಿಟಿಷ್ ಕಾಲವನ್ನು ನೆನಪಿಸುತ್ತೆ ಕಣ್ರಿ ಈ ಬಡಿಗೆ ಜಾತ್ರೆ
  • ಇದು ಬೇರೆಲ್ಲೂ ಅಲ್ಲ, ವಿಜಯಪುರಲ್ಲಿ ನಡೆಯುವ ವಿಚಿತ್ರ ಜಾತ್ರೆ

ಸಾಮಾನ್ಯವಾಗಿ ಜಾತ್ರೆ ಎಂದ ತಕ್ಷಣ ದೇವರು, ಪೂಜಾರಿ, ಭಂಡಾರ ಹೀಗೆ ಇವೆಲ್ಲವೂ ನೆನಪಿಗೆ ಬರುತ್ತದೆ. ಇನ್ನು ಕೆಲವು ಜಾತ್ರೆಗಳು ವಿಲಕ್ಷಣ ಪದ್ಧತಿಯನ್ನು ಹೊಂದಿರುತ್ತವೆ. ಅದರಲ್ಲು ಕೆಲವು ಜಾತ್ರೆಗಳು ಅಚ್ಚರಿಯಿಂದ ಕೂಡಿರುತ್ತವೆ. ಆದರೆ ಇಲ್ಲೊಂದು ಜಾತ್ರೆ ಬಗ್ಗೆ ಕೇಳಿದ್ದೀರಾ. ಇಲ್ಲಿ ಬಡಿಗೆಯಲ್ಲಿ ಹೊಡೆದಾಡಿಕೊಳ್ತಾರೆ ಜನರು!. 

Advertisment

ಇದು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕವಡಿಮಟ್ಟಿ ಗ್ರಾಮದಲ್ಲಿ ಬೆಳಕಿಗೆ ಬಂದ ಜಾತ್ರೆ. ಮೂರು ವರ್ಷಕ್ಕೊಮ್ಮೆ ಇಲ್ಲಿ ಜಾತ್ರೆ ನಡೆಯುತ್ತದೆ. ಈ ಜಾತ್ರೆಯ ವಿಶೇಷವೆಂದರೆ ಪರಸ್ಪರ ಬಡಿಗೆಯಿಂದ ಹೊಡೆದಾಡುತ್ತಾ ಇಲ್ಲಿ ಜಾತ್ರೆ ಆಚರಿಸುತ್ತಾರೆ.

ಜುಮ್ಮಣ್ಣ ಅಜ್ಜನ ಜಾತ್ರೆ ಎಂದೇ ಪ್ರಸಿದ್ಧಿ ಪಡೆದ ಬಡಿಗೆ ಜಾತ್ರೆ ಇದಾಗಿದೆ. ಬಡಿಗೆಗಳು ಮುರಿದು ಹೋದರು ಜನರಿಗೆ ಮಾತ್ರ ಏನು ಆಗುವುದಿಲ್ಲ. ಭಂಡಾರ ಹಾರಿಸುವ ಮೂಲಕ ಇಲ್ಲಿ ಅದ್ಧೂರಿ ಜಾತ್ರೆ ಆಚರಿಸಲಾಗುತ್ತದೆ.

ಇದನ್ನೂ ಓದಿ: ಆಟವಾಡುತ್ತ ನೀರಿನ ಸಂಪ್​ಗೆ ಬಿದ್ದ ಕಂದಮ್ಮ.. ಅನ್ಯಾಯವಾಗಿ ಸಾವನ್ನಪ್ಪಿದ 2 ವರ್ಷದ ಮಗು

Advertisment

ಬ್ರಿಟಿಷ್ ಕಾಲದಲ್ಲಿ ತೆರಿಗೆ ಕೇಳಲು ಬಂದಾಗ ಜುಮ್ಮಣ್ಣ ಅಜ್ಜ ಬಡಿಗೆಗಳಿಂದ ಹೋರಾಟ ಮಾಡಿ ಅವರನ್ನು ಎದುರಿಸುತ್ತಿದ್ದನಂತೆ. ಹಾಗಾಗಿ ಜನರು ಇಂದಿಗೂ ಅವರ ನೆನಪಿಗಾಗಿ ಬಡಿಗೆಗಳಿಂದ ಆಟವಾಡುತ್ತಾ ಜಾತ್ರೆ ಆಚರಿಸುತ್ತಿದ್ದಾರೆ. ಶತಮಾನಗಳಿಂದಲೂ ಕವಡಿಮಟ್ಟಿ ಗ್ರಾಮಸ್ಥರು ಈ ಜಾತ್ರೆ ಆಚರಣೆ ಮಾಡುತ್ತಾ ಬಂದಿದ್ದಾರೆ. ಜಾತ್ರೆ ವೇಳೆ ಜನರು 1001 ಬಡಿಗೆಗಳನ್ನು ಹಿಡಿದು ಪರಸ್ಪರ ಬಡಿದಾಡಿಕೊಳ್ಳುತ್ತಾರೆ.

ಇದನ್ನೂ ಓದಿ: ಅತ್ತಿಗೆಯಿಂದ ದೂರ ಇರು.. ಬುದ್ಧಿವಾದ ಹೇಳಿದ್ದಕ್ಕೆ ಮೈದುನನ್ನೇ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಕಿರಾತಕ

ಕೊರೊನಾ ಹಿನ್ನೆಲೆ 10 ವರ್ಷ ಜಾತ್ರೆ ಸ್ಥಗಿತಗೊಂಡಿತ್ತು. ಆದರೆ ಈ ವರ್ಷ ಗ್ರಾಮಸ್ಥರು ಅದ್ಧೂರಿಯಾಗಿ ಜಾತ್ರೆ ಮಾಡಿದ್ದಾರೆ. ಸದ್ಯ ಜಾತ್ರೆಯ ಝಲಕ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment