ಶಾಲೆಗೆ ಬರುವಾಗ ಬೈಕ್ ಸ್ಕಿಡ್, ಶಿಕ್ಷಕ ನಿಧನ.. ನೆಚ್ಚಿನ ಮಾಸ್ಟರ್​​​ನ ಕಳೆದುಕೊಂಡ ವಿದ್ಯಾರ್ಥಿಗಳು ಕಣ್ಣೀರು

author-image
Bheemappa
Updated On
ಶಾಲೆಗೆ ಬರುವಾಗ ಬೈಕ್ ಸ್ಕಿಡ್, ಶಿಕ್ಷಕ ನಿಧನ.. ನೆಚ್ಚಿನ ಮಾಸ್ಟರ್​​​ನ ಕಳೆದುಕೊಂಡ ವಿದ್ಯಾರ್ಥಿಗಳು ಕಣ್ಣೀರು
Advertisment
  • ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿದ್ದರು
  • ಶಾಲೆಯಲ್ಲಿ ಸುದ್ದಿ ತಿಳಿಯುತ್ತಿದ್ದಂತೆ ಸಹ ಶಿಕ್ಷಕರು, ಮಕ್ಕಳು ಕಣ್ಣೀರು
  • ನಾಯಿ ಅಡ್ಡ ಬಂದಿದ್ದನ್ನ ತಪ್ಪಿಸಲು ಹೋಗಿ ಬೈಕ್ ಸ್ಕಿಡ್ ಆಗಿಬಿಟ್ಟಿದೆ

ವಿಜಯಪುರ: ರಸ್ತೆಯಲ್ಲಿ ನಾಯಿ ಅಡ್ಡ ಬಂದಾಗ ಅದನ್ನು ತಪ್ಪಿಸಲು ಹೋಗಿ ಬೈಕ್ ಸ್ಕಿಡ್ ಅಗಿ ಶಿಕ್ಷಕರೊಬ್ಬರು ಜೀವ ಕಳೆದುಕೊಂಡಿರುವ ಘಟನೆ ಬಸವನ ಬಾಗೇವಾಡಿ ತಾಲೂಕಿನ ಅಂಬಳನೂರ ಕ್ರಾಸ್ ಬಳಿ ನಡೆದಿದೆ. ನೆಚ್ಚಿನ ಶಿಕ್ಷಕರನ್ನು ಕಳೆದುಕೊಂಡ ಶಾಲೆಯ ಮಕ್ಕಳು ಕಣ್ಣೀರು ಹಾಕಿದ್ದಾರೆ.

ಶಿಕ್ಷಕ ವಾಸುದೇವ ಹಂಚಾಟೆ (46) ಮೃತಪಟ್ಟವರು. ಇವರು ತಾಲೂಕಿನ ಕಣಕಾಲ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಶಿಕ್ಷಕ ಎಂದಿನಂತೆ ಬೈಕ್​ನಲ್ಲಿ ಶಾಲೆಗೆ ಹೋಗುತ್ತಿದ್ದರು. ಈ ವೇಳೆ ಅಂಬಳನೂರ ಕ್ರಾಸ್ ಬಳಿ ನಾಯಿಯೊಂದು ಬೈಕ್​ಗೆ ಅಡ್ಡ ಬಂದಿದೆ. ಇದನ್ನು ತಪ್ಪಿಸಲು ಹೋದ ಶಿಕ್ಷಕ, ಬೈಕ್ ಸ್ಕಿಡ್ ಆಗಿ ಕೆಳಗೆ ಬಿದ್ದು ತಲೆಗೆ ಗಂಭೀರವಾದ ಗಾಯವಾಗಿತ್ತು. ಆದರೆ ಬಿದ್ದ ತಕ್ಷಣವೇ ಸ್ಥಳದಲ್ಲೇ ಶಿಕ್ಷಕ ಕೊನೆಯುಸಿರೆಳೆದಿದ್ದರು.

ಇದನ್ನೂ ಓದಿ: ಸಾವಿನಲ್ಲೂ ಸಾರ್ಥಕತೆ ಮೆರೆದ ಅಕ್ಷಯ್.. ಇಬ್ಬರಿಗೆ ನೇತ್ರದಾನ

publive-image

ಶಿಕ್ಷಕ ಇನ್ನಿಲ್ಲ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆ ಶಾಲೆಯಲ್ಲಿ ಅವರ ಸಹ ಶಿಕ್ಷಕರು ಸೇರಿ ವಿದ್ಯಾರ್ಥಿಗಳೆಲ್ಲಾ ಕಣ್ಣೀರು ಹಾಕಿದ್ದಾರೆ. ನೆಚ್ಚಿನ ಶಿಕ್ಷಕನನ್ನ ಕಳೆದುಕೊಂಡು ಮಕ್ಕಳು ದುಃಖಿತರಾಗಿದ್ದಾರೆ. ಶಾಲೆಯಲ್ಲಿ ಹೆಲ್ಮೆಟ್ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದ ಶಿಕ್ಷಕ. ನಿತ್ಯ ತಾವು ಕೂಡ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿಕೊಂಡೇ ಸಂಚಾರ ಮಾಡುತ್ತಿದ್ದರು. ದುರಾದೃಷ್ಟವಶಾತ್ ಇಂದು ಶಾಲೆಗೆ ಬರುವಾಗ ಹೆಲ್ಮೆಟ್ ಬಿಟ್ಟು ಬಂದಿದ್ದರು. ಇದೇ ವೇಳೆ ನಾಯಿ ಅಡ್ಡ ಬಂದಿದ್ದರಿಂದ ಬೈಕ್​ ಸ್ಕಿಡ್ ಆಗಿ ಬಿದ್ದು ಶಿಕ್ಷಕ ನಿಧನ ಹೊಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment