newsfirstkannada.com

ಪವಾಡ ರೀತಿಯಲ್ಲಿ ಸಾವನ್ನೇ ಗೆದ್ದು ಬಂದ ಮಗು; ಸಾತ್ವಿಕ್ ಹೆಸರು ಬದಲಾಯಿಸಲು ಹೆತ್ತವರ ನಿರ್ಧಾರ

Share :

Published April 4, 2024 at 6:39pm

    ಅಮ್ಮನ ಜೊತೆ ಆಟವಾಡ್ತಿದ್ದ ಎರಡು ವರ್ಷದ ಸಾತ್ವಿಕ್​ ತೆರೆದ ಬಾವಿಗೆ ಬಿದ್ದಿದ್ದೇಗೆ?

    ಕೊನೆ ಘಳಿಗೆಯಲ್ಲಿ ಸಿದ್ದಲಿಂಗ ಮಹಾರಾಜರ ಪವಾಡ ನಡೆಯಿತೆ ಏನಿದರ ಅಸಲಿಯತ್ತು

    ಮಗು ಬದುಕಿ ಬರಲು ಸಾಧ್ಯವಾಗಿದ್ದೇಗೆ? ಹೇಗಿತ್ತು 20 ಗಂಟೆಗಳ ಕಾರ್ಯಾಚರಣೆ?

ವಿಜಯಪುರ: ಕೋಟ್ಯಂತರ ಕರುನಾಡಿಗರ ಪ್ರಾರ್ಥನೆ ಕೊನೆಗೂ ಫಲ ಕೊಟ್ಟಿದೆ. ಬೋರ್​ವೆಲ್​​ಗೆ ಬಿದ್ದಿದ್ದ ಪುಟ್ಟ ಮಗು ಸಾತ್ವಿಕ್ ಕೊನೆಗೂ ಸಾವು ಗೆದ್ದು ಬಂದಿದ್ದಾನೆ. ಇತಿಹಾಸದ ಪುಟದಲ್ಲಿ ಅಚ್ಚಳಿಯದೇ ಉಳಿಯುವ ಕ್ಷಣಕ್ಕೆ ವಿಜಯಪುರ ಸಾಕ್ಷಿಯಾಗಿದೆ. ಲಚ್ಯಾಣದ ಸಿದ್ದಲ್ಲಿಂಗ ಮಹರಾಜರ ಪವಾಡದಿಂದ ಮಗು ಪ್ರಾಣ ಉಳಿದಿದೆ. ಒಂದಲ್ಲ ಎರಡಲ್ಲ ಬರೋಬ್ಬರಿ 20 ಗಂಟೆಗಳ ಕಾಲ ನಡೆದ ಆ ರೋಚಕ ಕಾರ್ಯಾಚರಣೆ ಹೇಗಿತ್ತು ಎಂಬ ಸ್ಟೋರಿ ಇಲ್ಲದೆ.

ಫಲಿಸಿತು ಕರುನಾಡ ಪ್ರಾರ್ಥನೆ! ಸಾವು ಗೆದ್ದು ಬಂದ ಮಗು ಸಾತ್ವಿಕ್‌

ಪುಟ್ಟ ಪುಟ್ಟ ಹೆಜ್ಜೆಯಿಟ್ಟು ಕಿಲ ಕಿಲ ನಗುತ್ತಾ ಮನೆಯಂಗಳದಲ್ಲಿ ಆಡವಾಡುತ್ತಿದ್ದ ಸಾತ್ವಿಕ ಒಂದಲ್ಲ ಎರಡಲ್ಲ ಬರೋಬ್ಬರಿ 265 ಅಡಿಯ ಕೊಳವೆ ಬಾವಿಗೆ ಬಿದ್ದಿದ್ದ. ಬುಧವಾರ ಸಂಜೆ 5 ಗಂಟೆಗೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಮಂಚ್ಯಾಣ್ ಗ್ರಾಮದ ಸತೀಶ್ ಮತ್ತು ಪೂಜಾ ದಂಪತಿಯ ಮಗು ಕೊಳವೆ ಬಾವಿಗೆ ಬಿದ್ದು ಜೀವನ್ಮರಣದ ಹೋರಾಟ ನಡೆಸಿತ್ತು. 20 ಗಂಟೆಗಳ ಕಾಲ ನಡೆದ ರಣ ರೋಚಕ ಕಾರ್ಯ ಕೊನೆಗೂ ಸಕ್ಸಸ್​ ಕಂಡಿದ್ದು, ಪುಟ್ಟ ಮುಗು ಸಾತ್ವಿಕ್ ಸಾವನ್ನೇ ಗೆದ್ದು ಬಂದಿದ್ದಾನೆ.

ದೇಶದಲ್ಲಿ ಅದೆಷ್ಟು ಕೊಳವೆ ಬಾವಿ ಪ್ರಕರಣಗಳು ನಡೆದಿವೆ. ಆದ್ರೆ ಬಾವಿಗೆ ಬಿದ್ದ ಕಂದಮ್ಮಗಳು ಬದುಕಿ ಬಂದ ಪ್ರಕರಣಗಳು ತುಂಬಾ ಕಮ್ಮಿ. ಅಚ್ಚರಿಯೋ ಪವಾಡವೋ ಅಥವಾ ಕೋಟ್ಯಾಂತರ ಹೃದಯಗಳ ಪ್ರಾರ್ಥನೆಯೂ ಸಾತ್ವಿಕ್ ಪ್ರಕರಣದಲ್ಲಿ ಪವಾಡವೇ ನಡೆದು ಹೋಗಿದೆ. 265 ಅಡಿ ಆಳದ ಬಾವಿಗೆ ಬಿದ್ದಿದ್ದ ಪುಟ್ಟ ಕಂದ 16 ಅಡಿಯಲ್ಲಿ ಸಿಲುಕಿ ಸಾವು ಬದುಕಿನ ಹೋರಾಟ ನಡೆಸ್ತಿದ್ದ ಕಂದಮ್ಮಗೆ ಮರು ಜೀವ ಸಿಕ್ಕಿದೆ. ಸಾತ್ವಿಕ್ ಪುನರ್ಜನ್ಮಕ್ಕೆ ಇಡೀ ಕರುನಾಡೇ ಸಂತಸಗೊಂಡಿದೆ.
ಹೌದು 16 ಅಡಿಯ ಕೊಳವೆ ಬಾವಿಯಲ್ಲಿ ಸಿಲುಕಿದ್ದ ಸಾತ್ವಿಕ್​ನ್ನ ರಕ್ಷಾಣ ಸಿಬ್ಬಂದಿ ಕೊಳವೆ ಬಾವಿಯಿಂದ ಮೇಲಕ್ಕೆ ತರ್ತಿದ್ದಂತೆ ಸಂಭ್ರಮ ಆಕಾಶದೆತ್ತರಕ್ಕೆ ಮುಟ್ಟಿತ್ತು. ಪುನರ್ಜನ್ಮ ಕಂಡ ಸಾತ್ವಿಕ್​ನನ್ನ ಕಂಡು ಊರಿಗೇ ಉರೇ ಸಂತೋಷದಿಂದ ಜಯಘೋಷಗಳನ್ನ ಕೂಗಿ ಖುಷಿ ಪಟ್ಟಿದೆ. ಇಲ್ಲಿ ನೆರೆದಿದ್ದ ಪ್ರತಿಯೊಬ್ಬರು ಸಾರ್ಥಕದ ಭಾವದ ಜೊತೆಗೆ ಮನಸ್ಸಲ್ಲಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ರು.

ಮಗುವಿನ ಅಳುವಿನ ಶಬ್ಧದಿಂದ ಸಿಕ್ಕಿತ್ತು ಬದುಕಿಗೆ ಭರವಸೆ

ಬುಧವಾರ ಸಂಜೆ 5 ಗಂಟೆಯಿಂದ ಕಾರ್ಯಾಚರಣೆ ಶುರು ಮಾಡಿದ್ರು ಮಗು ಹೇಗಿದೆ ಅನ್ನೋ ವಿಚಾರ ಎನ್​ಡಿಆರ್​ಎಫ್​ ತಂಡಕ್ಕೆ ಗೊತ್ತಾಗಿರಲಿಲ್ಲ.. ಆದ್ರೆ ಕ್ಯಾಮಾರದಲ್ಲಿ ಮಗುವಿನ ಕಾಲು ಅಲುಗಾಡ್ತಿರುವ ದೃಶ್ಯ ಮಾತ್ರ ಕಂಡು ಬಂದಿತ್ತು .ಇದ್ರಿಂದ ಕೊಂಚ ನೆಮ್ಮದಿ ಸಿಕ್ಕಿದ್ರು, ಗುರುವಾರ ಅಚ್ಚರಿಯೆಂಬತೆ ಗುರುವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಮಗು ಅಳುವ ಶಬ್ಧ ಕೇಳಿದೆ ಅಲ್ಲಿಂದ ರಕ್ಷಣಾ ಕಾರ್ಯಾಚರಣೆ ಚುರುಕುಗೊಂಡಿತ್ತು. ಮಗು ಅಳ್ತಿರೋ ಶಬ್ಧ ಕೇಳ್ತಿದ್ದಂತೆ ಕಾರ್ಯಾಚರಣೆಯನ್ನ ತೀವ್ರಗತಿಯಲ್ಲಿ ನಡೆಸಲಾಯ್ತು. ಎನ್​ಡಿಆರ್​ಎಫ್, ಎಸ್​ಡಿಆರ್​ಎಫ್, ಅಗ್ನಿಶಾಮಕ, ಮೂರು ತಂಡ ಸಾಗರೋಪಾದಿಯಲ್ಲಿ ಕೆಲಸ ಮಾಡಿದ್ರು. ಕೊಳವೆ ಬಾವಿ ಪಕ್ಕ 20 ಅಡಿ ಬಾವಿ ಕೊರೆದಿದ್ರು. ಆದ್ರೆ ಅಡ್ಡಲಾಗಿ ಬಾವಿ ಕೊರೆಯುವ ವೇಳೆ ಕಲ್ಲು ಬಂಡೆ ಅಡಲ್ಲಾಗಿ ಮತ್ತೆ ರಕ್ಷಣಾ ಕಾರ್ಯದಲ್ಲಿ ವಿಳಂಬಾಗಿತ್ತು. ಹೀಗಾಗಿ ಮತ್ತೆ ಆತಂಕ ಎದುರಾಗಿತ್ತು. ಕೊನೆಗೆ ಬ್ರೇಕರ್ ಮೂಲಕ ನಿಧಾನಗತಿಯಿಂದಲೇ ಬಂಡೆಯನ್ನ ಒಡೆದು ಕೊಳವೆ ಬಾವಿಯಲ್ಲಿ ಸಿಲುಕಿದ್ದ ಕಂದನನ್ನ ಯಶಸ್ವಿಯಾಗಿ ರಕ್ಷಣೆ ಮಾಡಲಾಗಿದೆ.

ಬದುಕಿ ಬಂದ ಮಗನನ್ನ ಕಂಡು ಹೆತ್ತ ಕರುಳು ಸಂತಸ!

ಸತತ 20 ಗಂಟೆಗಳ ಕಾಲ ಕೊಳವೆ ಬಾವಿಯಲ್ಲಿ ಸಿಲುಕಿದ್ದ ಸಾತ್ವಿಕ್ ಬದುಕಿ ಬರ್ತಾನೋ ಇಲ್ವಾ ಅನ್ನೋ ಆತಂಕ ಸಾತ್ವಿಕ್ ತಾಯಿಗೆ ಕಾಡ್ತಿತ್ತು. ಮಗ ಬಾವಿಗೆ ಬಿದ್ದಾಗಿನಿಂದ ಸಾತ್ವಿಕ್ ತಾಯಿ ಪೂಜಾ ಕಣ್ಣೀರಿನಲ್ಲೇ ಕಾಲ ಕಳೆದಿದ್ರು. ನನ್ನ ಮಗನನ್ನ ಬದುಕಿಸಪ್ಪ ಅಂತ ದೇವರಿಗೆ ಮೊರೆ ಇಟ್ಟಿದ್ರು. ಹೆತ್ತ ಕರುಳಿನ ಮೊರೆಗೆ ದೇವರ ಮನಸ್ಸು ಕರಗಿ ಕಂದ ಸಾತ್ವಿಕ್ ಸಾವನ್ನೆ ಗೆದ್ದು ಬಂದಿದ್ದಾನೆ. ಮಗು ಬದುಕಿ ಬಂದ ಆ ಕ್ಷಣ ನೋಡಿ ಸಾತ್ವಿಕ್ ತಾಯಿ ಪೂಜಾ ಕಣ್ಣಲ್ಲಿ ಆನಂದ ಭಾಷ್ಪ ಹರಿದು ಬಂದಿತ್ತು.
ಇನ್ನು, ಮಗನ ಪುನರ್ಜನ್ಮ ಕಂಡು ಸಾತ್ವಿಕ್​ ತಂದೆ ಸತೀಶ್​ ಮಗುವಿನ ರಕ್ಷಣಗೆ ಶ್ರಮ ಪಟ್ಟ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದ್ರು. ನನ್ನ ಮಗ ಬದುಕಿ ಬಂದಿದ್ದು, ಹಾಲು ಕುಡಿದಷ್ಟೆ ಖುಷಿಯಾಗಿದೆ ಎಂದ್ರು. ಮರಣವನ್ನೆ ಗೆದ್ದು ಬಂದ ಮಗನನ್ನ ಕಂಡು ಸತೀಶ್ ಸಂತೋಷಕ್ಕೆ ಪಾರವೇ ಇರಲಿಲ್ಲ. ಕೊನೆಗೂ ಹೆತ್ತ ಕಂದಮ್ಮನ ಉಸಿರಿಗೆ ಜೀವ ಬಂತು ಅಂತ ಇಡೀ ಕುಟುಂಬ ಒಂದು ಕ್ಷಣ ನಿಟ್ಟುಸಿರು ಬಿಟ್ಟಿತ್ತು.

ಇದನ್ನೂ ಓದಿ: Exclusive Photos: ಕೊಳವೆ ಬಾವಿಯಿಂದ ಹಿಡಿದು ಸಾವು ಗೆದ್ದ ಸಾತ್ವಿಕನ ಕ್ಷಣ ಕ್ಷಣದ ಫೋಟೋಗಳು ಇಲ್ಲಿವೆ

ಕೊನೆ ಘಳಿಗೆಯಲ್ಲಿ ಸಿದ್ದಲಿಂಗ ಮಹಾರಾಜರ ಪವಾಡ ನಡೆಯಿತೆ?

ಒಂದ್ಕಡೆ ಎನ್​ಡಿಆರ್​ಎಪ್​, ಎಸ್​ಡಿಆರ್​ಎಫ್​, ಅಗ್ನಿಶಾಮಕ ದಳದ ಕಾರ್ಯಾಚರಣೆಗೆ ಫಲ ಸಿಕ್ಕಿದ್ರೆ. ಇನ್ನೊಂದೆಡೆ ಇದೇ ಲಚ್ಯಾಣ ಗ್ರಾಮದ ಸಿದ್ದಲಿಂಗ ಮಹಾರಾಜ ಪವಾಡದ ಬಗ್ಗೆಯೂ ಚರ್ಚೆ ನಡೆದಿದೆ. ಮಗು ಕೊಳವೆ ಬಾವಿಗೆ ಬಿದ್ದಾಗ ಸಾತ್ವಿಕ್ ತಾಯಿ ಲಚ್ಯಾಣದ ಮಹಾರಾಜರಿಗೆ ಹರಕೆ ಕಟ್ಕೊಂಡಿರ್ತಾರೆ. ಹೀಗಾಗಿ ರಕ್ಷಣ ಸಿಬ್ಬಂದಿಯ ಶ್ರಮದ ಜೊತೆಗೆ ಸಿದ್ದಲಿಂಗ ಮಹಾರಾಜರ ಆಶಿರ್ವಾದವೂ ಸಾತ್ವಿಕ್​​ಗೆ ಸಿಕ್ಕಿದ್ದು, ಕಂದಮ್ಮನಿಗೆ ಪುನರ್ಜನ್ಮ ಸಿಕ್ಕಿದೆ ಅನ್ನೋದು ಗ್ರಾಮಸ್ಥರ ನಂಬಿಕೆಯಾಗಿದೆ.
ಇನ್ನು, ಈ ಸಿದ್ದಲಿಂಗ ಮಹಾರಾಜರ ಬಗ್ಗೆ ಹೇಳೋದಾದ್ರೆ ಪವಾಡ ಪುರುಷ ಸಿದ್ಧಲಿಂಗ ಮಹಾರಾಜರು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕಕ್ಕಳಮೇಲಿ ಎಂಬ ಗ್ರಾಮದಲ್ಲಿ ಲಚ್ಚಪ್ಪ ಹಾಗೂ ನಾಗಮ್ಮ ಎಂಬ ಶರಣ ದಂಪತಿಗಳ ಮಗನಾಗಿ ಜನಿಸಿದ್ರು.

ಬಾಲ್ಯದಿಂದಲೇ ಹತ್ತು ಹಲವು ಲೀಲೆಗಳ ಮೂಲಕ, ತಮ್ಮ ಪವಾಡ ಶಕ್ತಿಯನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದ ಸಿದ್ದಲಿಂಗ ಮಹಾರಾಜರು ಇದೇ ಲಚ್ಯಾಣದಲ್ಲಿ ಅಗ್ನಿ ಪ್ರವೇಶ ಮಾಡಿದರು ಅನ್ನೋ ನಂಬಿಕೆ. ಈ ಹಿಂದೆ ರುದ್ರಭೂಮಿಯಾಗಿದ್ದ ಲಚ್ಯಾಣದಲ್ಲಿನ ಕಮರಿಮಠದ ಸ್ಥಳವು ಪವಾಡ ಪುರುಷ ಶ್ರೀ ಸಿದ್ಧಲಿಂಗ ಮಹಾರಾಜರ ಪಾದ ಸ್ಪರ್ಶದಿಂದ ಕಾಲಾಂತರ ಪುಣ್ಯ ಕ್ಷೇತ್ರವಾಗಿತ್ತಂತೆ. ಇದೇ ಸಿದ್ದಲಿಂಗ ಮಹರಾಜರ ಆಶಿರ್ವಾದ ನಮ್ಮ ಮಗನಿಗೆ ಲಭಿಸಿದೆ ಅನ್ನೋದು ಕೊಳವೆ ಬಾವಿಯಿಂದ ಬದುಕಿ ಬಂದ ಸಾತ್ವಿಕ್ ಪೋಷಕರ ನಂಬಿಕೆ. ಹೀಗಾಗಿ ಇನ್ಮುಂದೆ ಸಾತ್ವಿಕ್​ನನ್ನ ಸಿದ್ದಲಿಂಗ ಅಂತಲೇ ಕರೆಯೋದಾಗಿ ಸಾತ್ವಿಕ್ ಕುಟುಂಬ ಹೇಳಿದೆ. ಇನ್ನು ಪುಟ್ಟ ಕಂದ ಸಾತ್ವಿಕ್ ಬದುಕಿ ಬಂದಿಕ್ಕಾಗಿ ಇಡೀ ಗ್ರಾಮಸ್ಥರೆಲ್ಲ ಸಿದ್ದಲಿಂಗ ಮಹರಾಜರಿಗೆ ವಿಶೇಷ ಪೂಜೆ ಸಲ್ಲಿಸಿದ್ರು. ಸಿದ್ದಲಿಂಗ ಅಜ್ಜನವರ ಕೃಪೆಯಿಂದ ಕಂದನಿಗೆ ಮತ್ತೆ ಬದುಕಿನ ಭರವಸೆ ಸಿಕ್ಕಿದೆ ಅಂತ ಸಿದ್ದಲಿಂಗ ಮಹಾರಾಜರಿಗೆ ಜಯಘೋಷ ಹಾಕಿದ್ರು. ಸಿದ್ದಲಿಂಗ ಮಹಾರಾಜರಿಗೆ ದೀರ್ಘದಂಡ ನಮಸ್ಕಾರ ಹಾಕಿ ಸಾತ್ವಿಕ್​​ ಆಯುಷ್ಯ ಇನ್ನು ಹೆಚ್ಚಾಗಲಿ ಅಂತ ಗ್ರಾಮಸ್ಥರೆಲ್ಲ ಹಾರೈಸಿದ್ರು.

ಸಾವು ಗೆದ್ದು ಸಾತ್ವಿಕ್​ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ.. ಆರೋಗ್ಯ ಸ್ಥಿರ!

ಕೊಳವೆ ಬಾಯಿಯಿಂದ ರಕ್ಷಣೆ ಮಾಡ್ತಿದ್ದಂತೆ ಮಗುವಿನ ಚಿಕಿತ್ಸೆಗಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಬಾವಿಯಿಂದ ಕಂದನನ್ನ ಮೇಲಕ್ಕೆ ಎತ್ತುತ್ತಿದ್ದಂತೆ ಸ್ಥಳದಲ್ಲೇ ಪ್ರಾಥಮಿಕ ಚಿಕತ್ಸೆ ನೀಡಿ ಬಳಿಕ ಆ್ಯಂಬುಲೆನ್ಸ್ ಮೂಲಕ ಇಂಡಿ ತಾಲೂಕು ಆಸ್ಪತ್ರೆಗೆ ಸಾತ್ವಿಕ್‌ ಅನ್ನು ಶಿಫ್ಟ್‌ ಮಾಡಲಾಗಿದೆ. ಮಗುವಿಗೆ ಚಿಕಿತ್ಸೆ ನೀಡಿದ ವೈದ್ಯರು ಸಾತ್ವಿಕ್ ಆರೋಗ್ಯ ಸ್ಥಿರವಾಗಿದ್ದು, ಯಾವುದೇ ತೊಂದರೆ ಇಲ್ಲ ಅಂತ ಹೇಳಿದ್ದು ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರದ ಖಾಸಗಿ ಆಸ್ಪತ್ರೆಗೆ ಮಗುವನ್ನು ರವಾನಿಸಲಾಗಿದೆ.

ಒಟ್ಟಿನಲ್ಲಿ 20 ಗಂಟೆಗಳ ಕಾಲ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿ ಕಂದ ಸಾತ್ವಿಕ್ ಸಾವನ್ನ ಗೆದ್ದು ಬಂದಿದ್ದಾನೆ. ರಕ್ಷಣಾ ಸಿಬ್ಬಂದಿಯ ಸತತ ಪರಿಶ್ರಮ. ಜನರ ಪ್ರಾರ್ಥನೆ ಸಾತ್ವಿಕ್​​ಗೆ ಪುನರ್ಜನ್ಮ ನೀಡಿದೆ. ಆದ್ರೆ ಇನ್ಮುಂದೆಯಾದ್ರೂ ಇಂಥಾ ಘಟನೆಗಳು ಮತ್ತೆ ಮರುಕಳಿಸದಂತೆ ಅಧಿಕಾರಿಗಳು ಹಾಗೂ ಜನರು ಕೂಡ ಕಾಳಜಿ ವಹಿಸಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪವಾಡ ರೀತಿಯಲ್ಲಿ ಸಾವನ್ನೇ ಗೆದ್ದು ಬಂದ ಮಗು; ಸಾತ್ವಿಕ್ ಹೆಸರು ಬದಲಾಯಿಸಲು ಹೆತ್ತವರ ನಿರ್ಧಾರ

https://newsfirstlive.com/wp-content/uploads/2024/04/sathvik1.jpg

Load More